Home> Entertainment
Advertisement

Sunny Leone: ಮಂಡ್ಯ ಹೈಕ್ಳ ಬಗ್ಗೆ ನಟಿ ಸನ್ನಿ ಲಿಯೋನ್ ಹೇಳಿದ್ದೇನು..?

ಮೇ 13ರಂದು ಬಾಲಿವುಡ್ ಚೆಲುವೆ 41ನೇ ವಸಂತಕ್ಕೆ ಕಾಲಿಟ್ಟಿದ್ದರು. ಮಂಡ್ಯದಲ್ಲಿ ಅಭಿಮಾನಿಗಳು ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು.

Sunny Leone: ಮಂಡ್ಯ ಹೈಕ್ಳ ಬಗ್ಗೆ ನಟಿ ಸನ್ನಿ ಲಿಯೋನ್ ಹೇಳಿದ್ದೇನು..?

ಬೆಂಗಳೂರು: ‘ಚಾಂಪಿಯನ್’ ಸಿನಿಮಾದ ಸುದ್ದಿಗೋಷ್ಠಿಗೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದ ಬಾಲಿವುಡ್​ನ ಮಾದಕ ನಟಿ ಸನ್ನಿ ಲಿಯೋನ್ ಅವರು ಮಂಡ್ಯದ ಹೈಕ್ಳ ಬಗ್ಗೆ ಮಾತನಾಡಿದ್ದಾರೆ.

ಹೌದು, ನಟಿ ಸನ್ನಿ ಲಿಯೋನ್ ‘ಚಾಂಪಿಯನ್’ ಸಿನಿಮಾದಲ್ಲಿ ತಾವೇ ಸಖತ್ ಸ್ಟೆಪ್ ಹಾಕಿರುವ ‘ಡಿಂಗ್ರಿ ಬಿಲ್ಲಿ’ ಹಾಡನ್ನು ರಿಲೀಸ್ ಮಾಡಲು ಬೆಂಗಳೂರಿಗೆ ಆಗಮಿಸಿದ್ದರು. ‘ಚಾಂಪಿಯನ್’ ಸಿನಿಮಾದ ಹಾಡಿನಲ್ಲಿ ನಟಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರಂತೆ. ಈ ವೇಳೆ ತಮ್ಮ ನೆಚ್ಚಿನ ನಟಿಯನ್ನು ಹತ್ತಿರದಿಂದ ಕಣ್ತುಂಬಿಕೊಂಡ ಅಭಿಮಾನಿಗಳು ಫುಲ್ ಖುಷಿಯಲ್ಲಿ ದಿಲ್ ಖುಷ್ ಆಗಿದ್ದಾರೆ.

ಇದನ್ನೂ ಓದಿ: ನಟ ಕಿಚ್ಚ ಸುದೀಪ್‌ ಸಿನಿಮಾಗೆ ಆನೆಬಲ..! ‘ವಿಕ್ರಾಂತ್ ರೋಣ’ನಿಗೆ ‘ಪಿವಿಆರ್‌’ ಸಾಥ್..!‌

ಇತ್ತೀಚೆಗಷ್ಟೇ ಅಂದರೆ ಮೇ 13ರಂದು ಬಾಲಿವುಡ್ ಚೆಲುವೆ 41ನೇ ವಸಂತಕ್ಕೆ ಕಾಲಿಟ್ಟಿದ್ದರು. ನಟಿ ಸನ್ನಿಯ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದರು. ‘ಅನಾಥ ಮಕ್ಕಳ ತಾಯಿ’ ಎಂದು ದೊಡ್ಡ ಕಟೌಟ್ ಹಾಕಿ ಸನ್ನಿ ಫ್ಯಾನ್ಸ್ ತಮ್ಮ ಅಭಿಮಾನ ಮೆರೆದಿದ್ದರು. ಇದನ್ನು ನೆನಪಿಸಿ ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಟಿ, ‘ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ’ವೆಂದು ತಿಳಿಸಿದರು.  

‘ಮಂಡ್ಯ ಅಭಿಮಾನಿಗಳನ್ನು ಒಮ್ಮೆ ಭೇಟಿ ಮಾಡ್ತೀನಿ. ನನಗೆ ‘ಡಿಂಗ್ರಿ ಬಿಲ್ಲಿ’ ಹಾಡು ಅಂದ್ರೆ ತುಂಬಾ ಇಷ್ಟ. ಮನೆಯಲ್ಲಿ ಮಕ್ಕಳು ಸಹ ಈ ಹಾಡನ್ನು ಹಾಡುತ್ತಾ ಮನೆಪೂರ್ತಿ ಓಡಾಡುತ್ತಿರುತ್ತಾರೆ’ ಎಂದು ಹೇಳಿದರು. ಇನ್ನು ಇದೇ ವೇಳೆ ಮಂಡ್ಯ ಮಟನ್ ಶಾಪ್ ಬಗ್ಗೆ ಕೂಡ ಸನ್ನಿ ಪ್ರತಿಕ್ರಿಯಿಸಿ ‘ಅದು ನನ್ನ ಗಮನಕ್ಕೂ ಬಂದಿದೆ. ನನ್ನ ಅಭಿಮಾನಿಗಳಿಗೆ ರಿಯಾಯಿತಿ ದರದಲ್ಲಿ ಮಟನ್ ನೀಡುತ್ತಿರುವುದು ನನಗೆ ತುಂಬಾ ಖುಷಿ ನೀಡಿದೆ’ ಅಂತಾ ಹೇಳಿದ್ರು.   

ಇದನ್ನೂ ಓದಿ: Actor Kiccha Sudeep: ಪ್ರಧಾನಿ ಮಾತಿನಿಂದ ಸಂತೋಷಗೊಂಡ ಕಿಚ್ಚ: ಅಷ್ಟಕ್ಕೂ ಪಿಎಂ ಹೇಳಿದ್ದೇನು?

ಇನ್ನು ತಾವು ಮಾಡುವ ಸಾಮಾಜಿಕ ಕಾರ್ಯದ ಬಗ್ಗೆ ಮಾತನಾಡಿ, ‘ಸೋಷಿಯಲ್ ವರ್ಕ್ ನನಗೆ ಖುಷಿ ಕೊಟ್ಟಿದೆ. ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಅಭಿನಯಿಸುವುದು ನನಗೆ ತುಂಬಾನೇ ಇಷ್ಟ’ವೆಂದು ಹೇಳಿದರು.    

ಇಡೀ ರಾಜಧಾನಿಯಲ್ಲಿ ಚಳಿ ವಾತಾವರಣವಿದ್ರೂ ಬೆಂಗಳೂರಿಗೆ ಶೇಷಮ್ಮ ಆಗಮಿಸಿದ್ದರಿಂದಾಗಿ ಹಾಟ್ ಹಾಟ್ ಆಗಿತ್ತು. ಸನ್ನಿ ಲಿಯೋನ್ ಬಳಿ ಅಭಿಮಾನಿಯೊಬ್ಬ ನನಗೆ ನಿಮ್ಮ ಆಟೋಗ್ರಾಫ್ ಬೇಕು ಅಂತಾ ಕೇಳಿಕೊಂಡ. ತಕ್ಷಣವೇ ಆತನನ್ನು ವೇದಿಕೆ ಮೇಲೆ ಕರೆದ ನಟಿ ಎದೆ ಮೇಲೆ ಆಟೋಗ್ರಾಫ್ ಹಾಕಿದ್ರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More