Home> Entertainment
Advertisement

ಚಪ್ಪಲಿ ಧರಿಸಿ ದುರ್ಗಾಮಾತೆ ದರ್ಶನ ಪಡೆದ ನಟಿ ರಾಣಿ ಮುಖರ್ಜಿ..! ನೆಟ್ಟಿಜನ್ಸ್‌ ಆಕ್ರೋಶ

Rani Mukarji Durga pooja : ಪ್ರತಿ ವರ್ಷ ಮುಖರ್ಜಿ ಕುಟುಂಬ ಸದಸ್ಯರು, ಉತ್ತರ ಮುಂಬೈನ ಸರ್ವೋಜನಿನ್ ದುರ್ಗಾ ಪೂಜೆಯ ಉತ್ಸವದಲ್ಲಿ ಎಲ್ಲರೂ ಭಾಗಿಯಾಗಿರುತ್ತಾರೆ. ಈ ಬಾರಿ ನಟ ಅಯಾನ್ ಮುಖರ್ಜಿ ಅವರ ತಂದೆ ಮತ್ತು ನಟಿ ಕಾಜೋಲ್ ಅವರ ಚಿಕ್ಕಪ್ಪ ದೇಬ್ ಮುಖರ್ಜಿ ಅವರು ಪೂಜೆಯ ಕಾರ್ಯಕ್ರವನ್ನು ಆಯೋಜಿಸಿದರು. 

ಚಪ್ಪಲಿ ಧರಿಸಿ ದುರ್ಗಾಮಾತೆ ದರ್ಶನ ಪಡೆದ ನಟಿ ರಾಣಿ ಮುಖರ್ಜಿ..! ನೆಟ್ಟಿಜನ್ಸ್‌ ಆಕ್ರೋಶ

Rani Mukerji : ಬಾಲಿವುಡ್‌ ಖ್ಯಾತ ನಟಿ ರಾಣಿ ಮುಖರ್ಜಿ ದುರ್ಗಾ ದೇವಿ ಪೂಜೆಯ ವೇಳೆ ಪಾದರಕ್ಷೆಯನ್ನು ತೆಗೆಯದೆ ದರ್ಶನ ಪಡೆದಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು.. ನಟಿ ರಾಣಿ ಮುಖರ್ಜಿ 90ರ ಹಾಗು 20ರ ದಶಕದ ಬಹುಬೇಡಿಕೆಯ ನಟಿಯಾಗಿದ್ದರು. ಇತ್ತೀಚೆಗೆ ರಾಣಿ ನವರಾತ್ರಿಯ ಅಂಗವಾಗಿ ದುರ್ಗಾ ದೇವಿಯ ದರ್ಶನ ಪಡೆಯುವುದಕ್ಕಾಗಿ ತೆರಳಿದ್ದರು. ದುರ್ಗಾ ದೇವಿಯ ಉತ್ಸವದಲ್ಲಿ ಭಾಗಿಯಾಗಿದ್ದ ನಟಿ, ಗೋಲ್ಡನ್ ಸ್ಲೀವ್‌ಲೆಸ್ ಬ್ಲೌಸ್ ಮತ್ತು ಸೀರೆಯಲ್ಲಿ ಮಿಂಚುತ್ತಿದ್ದರು. 

ಇದನ್ನೂ ಓದಿ: ರಶ್ಮಿಕಾ ʼದಿ ಗರ್ಲ್‌ಫ್ರೆಂಡ್‌ʼ ಫಸ್ಟ್‌ ಲುಕ್‌ ಔಟ್‌..! ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ಕಿರಿಕ್‌ ಬೆಡಗಿಯ 24ನೇ ಸಿನಿಮಾ 

ಪ್ರತಿ ವರ್ಷ ಮುಖರ್ಜಿ ಕುಟುಂಬ ಸದಸ್ಯರು, ಉತ್ತರ ಮುಂಬೈನ ಸರ್ವೋಜನಿನ್ ದುರ್ಗಾ ಪೂಜೆಯ ಉತ್ಸವದಲ್ಲಿ ಎಲ್ಲರೂ ಭಾಗಿಯಾಗಿರುತ್ತಾರೆ. ಈ ಬಾರಿ ನಟ ಅಯಾನ್ ಮುಖರ್ಜಿ ಅವರ ತಂದೆ ಮತ್ತು ನಟಿ ಕಾಜೋಲ್ ಅವರ ಚಿಕ್ಕಪ್ಪ ದೇಬ್ ಮುಖರ್ಜಿ ಅವರು ಪೂಜೆಯ ಕಾರ್ಯಕ್ರವನ್ನು ಆಯೋಜಿಸಿದರು. ಕಾಜೋಲ್ ಮತ್ತು ರಾಣಿ ಮುಖರ್ಜಿ ಸಹ ಪೂಜೆಯಲ್ಲಿ ಪಾಲುಗೊಂಡಿದ್ದರು. 

ಮುಖರ್ಜಿ ಕುಟುಂಬದವರು ಆಯೋಜಿಸಿದ ದುರ್ಗಾ ದೇವಿ ಪೂಜೆಯಲ್ಲಿ, ದೇವಿಯ ದರ್ಶನ ಪಡೆಯಲು ಬಾಲಿವುಡ್‌ನ ಹಲವಾರು ನಟ-ನಟಿಯರು ತಮ್ಮ ಫ್ಯಾಮಿಲಿ ಸಮೇತ ಆಗಮಿಸಿದ್ದರು. ರಾಣಿ ವೇದಿಕೆ ಮೇಲೆ ಬಂದು ಮೊಬೈಲ್‌ನಲ್ಲಿ ದೇವಿಯ ಫೋಟೋ ತೆಗೆಯುತ್ತಿರುವ ಧೃಶ್ಯ ವೈರಲ್‌ ವಿಡಿಯೋದಲ್ಲಿದೆ. ಆದ್ರೆ ಮುಖ್ಯ ವಿಷಯವೇನರಂದರೆ ನಟಿ ತನ್ನ ಪಾದರಕ್ಷೆಗಳನ್ನು ತೆಗೆಯದೆ ಮಂಟಪಕ್ಕೆ ಹೋಗಿ ದುರ್ಗಾ ದೇವಿಯ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್ ವುಡ್ ಸ್ಟಾರ್ಸ್ ಗಳಿಂದ ಅನಾವರಣವಾಯಿತು "ಉಪಾಧ್ಯಕ್ಷ" ಚಿತ್ರದ ಟೀಸರ್ .

ಈ ದೃಶ್ಯ ಸ್ಥಳೀಯರ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದಂತೆ ನೆಟ್ಟಗರು ಗರಂ ಆಗಿದ್ದಾರೆ. ಕಾಮೆಂಟ್‌ ವಿಭಾಗದಲ್ಲಿ ʼನಿಮ್ಮ ಚಪ್ಪಲಿ ತೆಗೆಯಿರಿ. ನೀನು ದೇವಿಯಿಗಿಂತ ದೊಡ್ಡವರಲ್ಲʼ ಎಂದು ಕಿಡಿಕಾರಿದ್ದಾರೆ. ಹೀಗೆ ಅನೇಕ ರೀತಿಯಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More