Home> Entertainment
Advertisement

Katrina Kaif Pregnancy: ತಾಯಿಯಾಗ್ತಿದ್ದಾರೆ ಬಾಲಿವುಡ್ ನಟಿ ಕತ್ರಿನಾ ಕೈಫ್..! ಈ ಫೋಟೋ ನೋಡಿ

Katrina Kaif Pregnancy: ಇಷ್ಟೆಲ್ಲಾ ವದಂತಿಗಳು ಹರಿದಾಡುತ್ತಿದ್ದರು ಸಹ ವಿಕ್ಕಿಯಾಗಲಿ, ಕತ್ರಿನಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಕತ್ರಿನಾ ಗರ್ಭಿಣಿ ಅನ್ನೋ ಊಹಾಪೋಹವನ್ನು ನಂಬುತ್ತಿದ್ದಾರೆ. ಇನ್ನು ಈ ವರದಿಯಲ್ಲಿ ಕೆಲವು ಫೋಟೋಗಳನ್ನು ನೀಡಲಾಗಿದ್ದು, ಅವುಗಳನ್ನು ನೋಡಿದ ಮೇಲೆ ನಿಮಗೂ ಸಹ ಅನುಮಾನ ಮೂಡಬಹುದು

Katrina Kaif Pregnancy: ತಾಯಿಯಾಗ್ತಿದ್ದಾರೆ ಬಾಲಿವುಡ್ ನಟಿ ಕತ್ರಿನಾ ಕೈಫ್..! ಈ ಫೋಟೋ ನೋಡಿ

Katrina Kaif Pregnancy: ಕತ್ರಿನಾ ಕೈಫ್ ಹಲವು ಬಾರಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು ಅವುಗಳ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಈ ಫೋಟೋಗಳು ವೈರಲ್ ಆಗಲು ಕಾರಣ ಕತ್ರಿನಾ ಗರ್ಭಿಣಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ನಟಿಯ ಲೂಸ್ ಬಟ್ಟೆ ನೋಡಿ ಕತ್ರೀನಾ ಗರ್ಭಿಣಿ ಎಂದು ಅಭಿಮಾನಿಗಳು ಭಾವಿಸಿದ್ದರೆ, ಇನ್ನು ಕೆಲವು ದಿನಗಳ ಹಿಂದೆ ಕತ್ರಿನಾ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದ್ದಾಗ ತೆಗೆದ ಫೋಟೋ ಕಂಡು ಸದ್ಯದಲ್ಲೇ ಗುಡ್ ನ್ಯೂಸ್ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇಷ್ಟೆಲ್ಲಾ ವದಂತಿಗಳು ಹರಿದಾಡುತ್ತಿದ್ದರು ಸಹ ವಿಕ್ಕಿಯಾಗಲಿ, ಕತ್ರಿನಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಕತ್ರಿನಾ ಗರ್ಭಿಣಿ ಅನ್ನೋ ಊಹಾಪೋಹವನ್ನು ನಂಬುತ್ತಿದ್ದಾರೆ. ಇನ್ನು ಈ ವರದಿಯಲ್ಲಿ ಕೆಲವು ಫೋಟೋಗಳನ್ನು ನೀಡಲಾಗಿದ್ದು, ಅವುಗಳನ್ನು ನೋಡಿದ ಮೇಲೆ ನಿಮಗೂ ಸಹ ಅನುಮಾನ ಮೂಡಬಹುದು

ಇದನ್ನೂ ಓದಿ: Sobhita Dhulipala : ಕ್ಯಾಮರಾಮುಂದೆ ಮೈಚಳಿ ಬಿಟ್ಟು ಬಟ್ಟೆ ಬಿಚ್ಚಿದ ಸ್ಟಾರ್‌ ನಟಿ..! ವಿಡಿಯೋ ವೈರಲ್‌

ಕೆಲ ದಿನಗಳ ಹಿಂದೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಕೈಫ್ ಸಡಿಲ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೀಡಿಯೊ ವೈರಲ್ ಆದ ನಂತರ, ಅಭಿಮಾನಿಗಳು ಕತ್ರಿನಾ ಗರ್ಭಿಣಿ ಎಂಬ ಊಹಾಪೋಹಗಳನ್ನು ಸೃಷ್ಟಿಸಲು ಪ್ರಾರಂಭಿಸಿದರು. ವೀಡಿಯೊದಲ್ಲಿ, ಕತ್ರಿನಾ ಕಾರಿನಿಂದ ಇಳಿದು ಸಡಿಲವಾದ ಕೆಂಪು ಸೂಟ್ ಧರಿಸಿರುವುದನ್ನು ನೀವು ನೋಡಬಹುದು. ಇದರ ಜೊತೆಗೆ ವೀಡಿಯೊದಲ್ಲಿ ಕತ್ರಿನಾ ನಿರಂತರವಾಗಿ ತನ್ನ ಹೊಟ್ಟೆಯನ್ನು ದುಪಟ್ಟಾದಿಂದ ಮುಚ್ಚಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ಘಟನೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.

 

ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್ ಮತ್ತು ಅತ್ತೆಯೊಂದಿಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಟಿಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ ಕತ್ರಿನಾ ನಿಂತಿರುವ ಸ್ಟೈಲ್ ನೋಡಿ ಅಭಿಮಾನಿಗಳು ಕತ್ರಿನಾ ಗರ್ಭಿಣಿ ಎಂದುಕೊಂಡಿದ್ದಾರೆ.

ಕತ್ರಿನಾ ಕೈಫ್ ಕುಟುಂಬ ಸಮೇತ ಕ್ರಿಸ್ಮಸ್ ಆಚರಿಸಿದ್ದಾರೆ. ಈ ಸಂಭ್ರಮದ ಫೋಟೋವನ್ನು ಕತ್ರಿನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿದ ತಕ್ಷಣ, ಅಭಿಮಾನಿಗಳು ಆಕೆ ತಾಯಿಯಾಗುತ್ತಿದ್ದಾರೆ ಎಂಬ ಗಾಸಿಪ್ ಎಬ್ಬಿಸಿದ್ದಾರೆ. ಇದರ ಹಿಂದಿನ ಕಾರಣವೆಂದರೆ ಕತ್ರಿನಾ ತನ್ನ ಅತ್ತೆಯ ಹಿಂದೆ ನಿಂತು ತನ್ನ ಹೊಟ್ಟೆಯನ್ನು ಮರೆ ಮಾಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Katrina Kaif (@katrinakaif)

 

ಇದನ್ನೂ ಓದಿ: Taraka Ratna : ಎನ್‌ಟಿಆರ್‌ ಅಣ್ಣ ತಾರಕರತ್ನ ಅವರ ಸಾವಿಗೆ ಕಾರಣ ಏನ್‌ ಗೊತ್ತಾ..?

ಇವಷ್ಟೇ ಅಲ್ಲದೆ, ಕೆಲ ಸಮಯದ ಹಿಂದೆ ಕತ್ರಿನಾ ಕೈಫ್ ಪ್ರಶಸ್ತಿ ಸಮಾರಂಭಕ್ಕೆ ಹೋಗಿದ್ದರು. ಈ ಅವಾರ್ಡ್ ಫಂಕ್ಷನ್ ವೇಳೆ ನಟಿ ಫೋಟೋದಲ್ಲಿ ತಮ್ಮ ಹೊಟ್ಟೆ ಕಾಣಿಸುವ ರೀತಿಯಲ್ಲಿ ಕುಳಿತಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ಕ್ಯಾಟ್ ಗರ್ಭಿಣಿ ಎಂಬ ವಿಚಾರವನ್ನ ಬಲವಾಗಿ ನಂಬಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More