Home> Bigg Boss
Advertisement

BBK10: ನನ್ನ ಪಾಡಿಗೆ ನಾನಿದ್ದಿದ್ದೇ ಮುಳುವಾಯ್ತು: JioCinema ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಭಾಗ್ಯಶ್ರೀ!

BBK10:  ಫನ್ ಫ್ರೈಡೇ ಟಾಸ್ಕ್‌ನಲ್ಲಿ ‘ಕಥಾಸಂಗಮ’ ಟಾಸ್ಕ್‌ನಲ್ಲಿ ನಾನು ಗೆದ್ದಿದ್ದು ಮರೆಯಲಾಗದ ನೆನಪು. ನನಗೆ ಮಾತಾಡಲು ಎರಡು ನಿಮಿಷ ಟೈಮ್ ಇತ್ತು. ಅಲ್ಲಿ ಒಂದು ಅದ್ಭುತ ಕಥೆ ಮಾಡಿದೀನಿ ಅಂತ ಖುಷಿ ಇದೆ-  ಭಾಗ್ಯಶ್ರೀ
 

BBK10: ನನ್ನ ಪಾಡಿಗೆ ನಾನಿದ್ದಿದ್ದೇ ಮುಳುವಾಯ್ತು: JioCinema ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಭಾಗ್ಯಶ್ರೀ!

Bigg Boss Kannada: ಭಾಗ್ಯಶ್ರೀ ಅವರ ಬಿಗ್‌ಬಾಸ್ ಪ್ರಯಾಣ ಈ ವಾರ ಕೊನೆಗೊಂಡಿದೆ. ಕೆಲವೊಮ್ಮೆ ಪರಿಶ್ರಮದಿಂದ, ಇನ್ನು ಕೆಲವೊಮ್ಮೆ ಅದೃಷ್ಟದ ಬಲದಿಂದ ಮಿಂಚುತ್ತ ಉಳಿದುಕೊಂಡಿದ್ದ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇಷ್ಟು ವಾರಗಳ ಕಾಲ ಅವರ ಬದುಕು ಹೇಗಿತ್ತು? ಮನೆಯಿಂದ ಹೊರಗೆ ಬರಲು ಕಾರಣವಾದ ಸಂಗತಿಗಳು ಯಾವವು? ಅವರ ಪ್ರಕಾರ ಮನೆಯೊಳಗೆ ಯಾರು ಫೇಕ್‌? ಯಾರು ಜೆನ್ಯೂನ್? ಈ ಎಲ್ಲದರ ಕುರಿತು ಭಾಗ್ಯಶ್ರೀ, ಬಿಗ್‌ಬಾಸ್ ಮನೆಯಿಂದ ಹೊರಬಂದು ಮರುಕ್ಷಣವೇ JioCinemaಗೆ ನೀಡಿದ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ಮಾತಾಡಿದ್ದಾರೆ. ಬಿಗ್‌ಬಾಸ್‌ ಮನೆಯ ಕುರಿತ ಅವರ ಅನುಭವಗಳನ್ನು ಅವರ ಮಾತುಗಳಲ್ಲೇ ತಿಳಿಯೋಣ... 

ನಾನು ಕೈಯೆತ್ತಿದರು ನನ್ನ ಸೆಲೆಕ್ಟ್ ಮಾಡ್ತಿರ್ಲಿಲ್ಲ! 

JioCinemaಗೆ ನೀಡಿದ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ಮಾತಾಡಿರುವ ಬಿಗ್‌ಬಾಸ್ ಕಂಟೆಸ್ಟೆಂಟ್ ಭಾಗ್ಯಶ್ರೀ, ಹಾಯ್ ಎಲ್ರಿಗೂ ನಮಸ್ಕಾರ, ನಾನು ನಿಮ್ಮ ಭಾಗ್ಯಶ್ರೀ. ಬಿಗ್‌ಬಾಸ್‌ ಮನೆಯಿಂದ ಈಗ ಜಸ್ಟ್ ಹೊರಗೆ ಬಂದಿದೀನಿ. ಇದು ಕೊನೆ ಅಂತ ಖಂಡಿತವಾಗಲೂ ಹೇಳೋದಿಲ್ಲ. ಅಲ್ಲಿ ತೆಗೆದುಕೊಂಡಿರುವ ಅನುಭವಗಳು ನನ್ನ ಜೀವನದಲ್ಲಿ ಹೊಸ ಪ್ರಾರಂಭ ಅಂತಲೇ ಹೇಳ್ತೀನಿ. ಈವತ್ತು ಮನೆಯಿಂದ ಹೊರಗಡೆ ಬರ್ತೀನಿ ಅಂತ ನಿರೀಕ್ಷೆ ಮಾಡಿದ್ದೆ. ಎಲ್ರೂ ನನ್ನ ನೋಡ್ತಿದ್ದ ರೀತಿ ಹೇಗಿತ್ತು ಅಂದ್ರೆ, ‘ಇವ್ರು ಟಾಸ್ಕ್‌ನಲ್ಲಿ ತುಂಬ ಹಿಂದೆ ಉಳಿಯುತ್ತಾರೆ’ ಎಂದೇ ನೋಡುತ್ತಿದ್ದರು. ಗ್ರೂಪ್‌ಗೆ ನನ್ನ ತೆಗೆದುಕೊಳ್ಳಬೇಕಾದರೆ, ನಾನು ಕೈಯೆತ್ತಿದರು ನನ್ನ ಸೆಲೆಕ್ಟ್ ಮಾಡ್ತಿರ್ಲಿಲ್ಲ. ಯಾಕೆಂದರೆ ಅವರಿಗೆ ಯಾರಿಗೂ ನಾನು ಟಾಸ್ಕ್ ಮಾಡಬಲ್ಲೆ ಎಂಬ ನಂಬಿಕೆಯೂ ಇರ್ತಿರ್ಲಿಲ್ಲ. ಸಿಕ್ಕಿದ ಅವಕಾಶಗಳಲ್ಲಿ ನಾನು ಖಂಡಿತವಾಗಲೂ ನನ್ನ ಎಫರ್ಟ್‌ ನೂರಕ್ಕೆ ನೂರು ಹಾಕಿದೀನಿ ಎಂದು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.  

ಗುಂಪು ಅಂತ ಬಂದಾಗ, ಯಾರ ಗುಂಪಿನಲ್ಲಿಯೂ ಪರ್ಟಿಕ್ಯೂಲರ್ ಆಗಿ ಸೇರಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ನಾನು ಸೀರೆ ಉಟ್ಕೊಂಡು ಆರಾಮಾಗಿ ದೇವರ ಪೂಜೆ ಮಾಡ್ಕೊಂಡು ಹಾಡು ಹಾಡ್ಕೊಂಡು ಇರ್ತೀನಿ ಅನ್ನೊ ಕಾರಣಕ್ಕೋ ಏನೋ ಗೊತ್ತಿಲ್ಲ. ಅಮ್ಮ ಅಂತ ಕರ್ಕೊಂಡು, ಬೇರೆ ಥರ ಮಾತುಕತೆಗೆ ಅಲ್ಲ ಎಂದು ಅವರೇ ಅವಾಯ್ಡ್ ಮಾಡ್ತಿದ್ರು. ನಾನು ಅವರ ಜೊತೆಗೆ ಸೇರಲು ಯತ್ನಿಸಿದಾಗಲೆಲ್ಲ, ‘ಇವ್ರು ಫೇಕಾ? ಸುಮ್ನೆ ನಮ್ ಜೊತೆ ಮಿಂಗಲ್ ಆಗೋಕೆ ಟ್ರೈ ಮಾಡ್ತಿದ್ದಾರಾ ಅಂತೆಲ್ಲ ಮಾತು ಬರ್ತಿತ್ತು. ಫೇಕ್ ಅಂತ ಅನಿಸಕೊಂಡು ಫ್ರೆಂಡ್‌ಷಿಪ್  ಮಾಡುವ ಬದಲು, ಆಟವಾಡುವಾಗ ಎಲ್ಲರ ಜೊತೆ ಇದ್ದು, ಉಳಿದ ಟೈಮಲ್ಲಿ ನನ್ನ ಪಾಡಿಗೆ ನಾನು ಇದ್ರಾಯ್ತಲ್ವಾ ಅಂದ್ಕೊಳ್ತಿದ್ದೆ. ಆದರೆ ಗುಂಪಲ್ಲೇ ಇದ್ದು ಆಡಬೇಕು. ಆಗ ಇನ್ನೊಂದಿಷ್ಟು ವಾರ ಇರ್ತಿದ್ದೆ ಅನ್ನೋದು ಖಂಡಿತ ಸುಳ್ಳು. ಆ ಥರ ನನಗೆ ಯಾವಾಗಲೂ ಅನಿಸಿಲ್ಲ ಎಂದರು. 

ಇದನ್ನೂ ಓದಿ- BBK10: "ಅಪ್ಪನನ್ನು ನೋಡ್ಬೇಕು, ತಾಯಿ ಹೇಗಿದ್ದಾರೆ ತಿಳಿಯಬೇಕು": ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್​!

ಇಲ್ಲಿ ಕೆಲವರು ಇವರು ಫೇಕ್‌ ಇದ್ದಾರೆ, ಇವರ ಎಮೋಷನ್ಸ್ ಫೇಕ್ ಅಂತ ಹೇಳ್ದಾಗ, ಸಿರಿಯವರು ನನ್ನನ್ನು ತುಂಬ ವರ್ಷಗಳಿಂದ ಹತ್ತಿರದಿಂದ ನೋಡಿದ್ದಾರೆ. ಹಾಗಾಗಿ ಅವರ ಬಳಿ ಹೋಗಿ ಶೇರ್ ಮಾಡ್ತಿದ್ದೆ. ಅವರು ನನಗೆ ಸಮಾಧಾನ ಮಾಡ್ತಿದ್ರು. ನಾನು ಅವರ ಬಳಿ ಆಯುಷ್ ಬಗ್ಗೆ ಮಾತಾಡ್ತಿದ್ದೆ ರಾತ್ರಿ ಹೊತ್ತಲ್ಲಿ. ಅವರು ನನಗೆ ಸಮಾಧಾನ ಮಾಡ್ತಿದ್ರು. ನನಗೆ ನನ್ನ ಮಗನ ತಬ್ಬಿಕೊಂಡು ಮಲಗೋದು ಮಿಸ್ ಮಾಡ್ಕೊಳ್ಳೋವಾಗ ಅವರನ್ನೇ ತಬ್ಬಿಕೊಂಡು ಮಲಗ್ತಿದ್ದೆ. ದೀಪವಾಳಿ ಹಬ್ಬಕ್ಕೆ ಸರ್ಪೈಸ್‌ ಲೆಟರ್ ಬರತ್ತೆ ಅಂತ ಹೇಳಿದ್ರು. ಅದು ನನ್ನ ಮಗನ ಲೆಟರೇ ಇರತ್ತೆ ಅಂತ ಗೊತ್ತಿತ್ತು. ಮೊದಲ ಟಾಸ್ಕ್‌ನಲ್ಲಿ ನನಗೆ ಲೆಟರ್ ಬರಲ್ಲ ಅಂತ ಗೊತ್ತಾದಾಗ ನಾನು ತುಂಬ ಡಲ್ ಆಗಿಬಿಟ್ಟೆ. ಮರುದಿನ ನಾನು ಫುಲ್ ಸೈಲೆಂಟ್ ಆಗಿದ್ದಿದ್ದಂತೂ ನಿಜ. ಆದರೆ ಬಿಗ್‌ಬಾಸ್ ಮನೆಯಲ್ಲಿ ಡಲ್ ಆಗಿ ಕೂತಿರೋದನ್ನೇ ಅಡ್ವಾಂಟೇಜ್ ತಗೋತಾರೆ. ಇವರು ಡಲ್ ಆಗಿದ್ದಾರೆ, ನಾಮಿನೇಟ್ ಮಾಡೋಣ, ಕಳಪೆ ಕೊಡೋಣ ಅಂತ ಶುರುಮಾಡ್ತಾರೆ. ಆಗ ನಾನು ನೋವಿದ್ರೂ ಕೂಡ ಅದರಿಂದ ಹೊರಗೆ ಬರಲು ಟ್ರೈ ಮಾಡ್ತಿದ್ದೆ. ಆ ಥರ ಹೋಗಿ ಟ್ರೈ ಮಾಡಿದ್ದಕ್ಕೇ ಸ್ನೇಹಿತ್ ಡೇಟ್ ವಿಚಾರಕ್ಕೆ ಅಲ್ಲೊಂದು ಕ್ಲಾಶ್ ಆಯ್ತು. ನಾನೇನೋ ಆ ಲೆಟರ್ ಸಿಗಲಿಲ್ಲ ಎನ್ನುವ ನೋವನ್ನು ಮರೆಯೋದಕ್ಕೆ ಅಲ್ಲಿ ಹೋಗಿ ಮಾತಾಡಿದ್ದಕ್ಕೆ, ‘ನೀವೇನು ಇನ್ನೊಬ್ಬರ ಲೈಫನ್ನು ನೋಡಿ ಮಜಾ ತಗೊಳ್ತಿದ್ದೀರಾ ಅಂತ ಮಾತು ಬಂತು. ಅದರಿಂದ ಮತ್ತೆ ಹರ್ಟ್ ಆದೆ. ನನ್ನ ಪರ್ಸನಲ್ ಲೈಪ್‌ನಲ್ಲಿ ನಾನು ಆದಷ್ಟೂ ನೆಗೆಟೀವ್ ಜನರು, ಫೇಕ್‌ ಜನರು, ಫೇಕ್‌ ಮಾತುಗಳಿಂದ ದೂರ ಇರ್ತಿದ್ದೆ. ಅದು ಬಿಗ್‌ಬಾಸ್ ಮನೆಯಲ್ಲಿ ತುಂಬ ತೊಂದರೆಯಾಯ್ತು ಎಂದು ಬಿಗ್‌ಬಾಸ್ ಮನೆಯಲ್ಲಿ ತಮ್ಮ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. 

ಸುದೀಪ್ ಸರ್, ಥ್ಯಾಂಕ್ಯೂ ಸೋ ಮಚ್!
ಸುದೀಪ್ ಸರ್, ಥ್ಯಾಂಕ್ಯೂ ಸೋ ಮಚ್. ಎಲಿಮಿನೇಟ್ ಆದೆ ಅಂತ ಹೇಳಿದಾಗ ಎಲ್ಲೋ ಬೇಜಾರಾಗಿತ್ತು. ಆದರೆ ನೀವು ಲೆಟರ್ ಕೊಟ್ಟು, ಬಿಗ್‌ಬಾಸ್ ಲೀವಿಂಗ್ ಏರಿಯಾನಲ್ಲಿ ಓದಿಸಿದಿರಲ್ಲಾ ಸರ್. ಎಷ್ಟು ಸಂತೋಷ ಆಗೋಯ್ತು ಅಂದ್ರೆ. ಎಲಿಮಿನೇಷನ್ ಅನ್ನೋದನ್ನು ಕೂಡ ಮರ್ತೇ ಹೋಗ್ಬಿಡ್ತು. ಪ್ರತಿಯೊಬ್ಬರ ಭಾವನೆ ಅರ್ಥ ಮಾಡಿಕೊಂಡು ವೀಕೆಂಡ್ ಎಪಿಸೋಡ್‌ಗಳಲ್ಲಿ ಸ್ಪಂದಿಸ್ತೀರಲ್ಲಾ… ಯು ಆರ್‍‌ ದಿ ರಿಯಲ್ ಸ್ಟ್ರೆಂಥ್. ಎಲ್ಲ ಸ್ಪರ್ಧಿಗಳಿಗೂ! ಎಂದು ಬಿಗ್‌ಬಾಸ್ ಮನೆಯಲ್ಲಿ ಸುದೀಪ್ ಅವರ ಮಾತು ಹೇಗೆ ಸಂಜೀವಿನಿಯಾಗಿರಲಿದೆ ಎಂಬುದನ್ನು ತಿಳಿಸಿದರು. 

ಬಿಗ್‌ಬಾಸ್ ಮನೆಯಲ್ಲಿ ನನ್ನನ್ನು ಬಿಟ್ಟರೆ ಇಶಾನಿ ಜೆನ್ಯೂನ್ ಆಗಿದ್ದರು!
ಮನೆಯಲ್ಲಿ ನನ್ನ ಪ್ರಕಾರ ನಾನು ಜೆನ್ಯೂನ್ ಆಗಿದ್ದೆ. ನನ್ನ ಬಿಟ್ಟರೆ ಇಶಾನಿ. ಅವರು ಎಷ್ಟೋ ಸಲ ಕೈ ಎತ್ತಿ, ಟಾಸ್ಕ್ ಮಾಡ್ತೀನಿ ಅಂತ ಹೇಳಿದಾಗಲೂ ಅವರನ್ನು ಯಾರೂ ಕನ್ಸೀಡರೇ ಮಾಡ್ತಿರ್ಲಿಲ್ಲ. ನಾನಾದ್ರೂ ಧೈರ್ಯ ಮಾಡಿ ಹೇಳುತ್ತಿದ್ದೆ. ಆದರೆ ಅವರು ಗಟ್ಟಿಯಾಗಿ ಹೇಳ್ತಾನೂ ಇರ್ಲಿಲ್ಲ. ಗಟ್ಟಿ ಯಾಗಿ ಹೇಳಿದಾಗಲೂ ಕೂಡ ಅವಳ ಮಾತುಕೇಳುತ್ತಿರಲಿಲ್ಲ. 

ಮನೆಯೊಳಗೆ ಫೇಕ್‌ ಅಂತ ಒಬ್ರಿದ್ದಾರೆ ಅನ್ಸಲ್ಲ. ಕೆಲವು ಸಲ ನನಗೆ ಕಾರ್ತಿಕ್ ನೋಡಿದಾಗ ಫೇಕ್ ಅನಿಸುತ್ತದೆ. ಕೆಲವು ಸಲ ವಿನಯ್ ಫೇಕ್ ಅನಿಸುತ್ತದೆ. ಒಮ್ಮೆ ನನ್ನ ಕಡೆ ಬಂದು, ‘ಏನಾದ್ರೂ ಹೆಲ್ಪ್ ಕೇಳಿ. ನಾನಿರ್ತಿನಿ ಅಂತಿದ್ರು. ಆದರೆ ನಿಜವಾಗಲೂ ಹೆಲ್ಪ್ ಮಾಡುವ ಸಮಯದಲ್ಲಿ ನನಗೆ ಹೆಲ್ಪ್ ಮಾಡಲೇ ಇಲ್ಲ ಅವು. ಟಾಪ್‌ ಫೈವ್‌ನಲ್ಲಿ ಮೈಕಲ್, ಕಾರ್ತಿಕ್,  ವಿನಯ್, ತುಕಾಲಿ ಸಂತೋಷ್,  ಪ್ರತಾಪ್ ಇರ್ತಾರೆ ಅನ್ಸತ್ತೆ. ಕಾರ್ತಿಕ್‌ಗೆ ಎಲ್ಲ ಅರ್ಹತೆ ಇವೆ. ಅವರು ಓವರ್‍‌ ಸ್ಮಾರ್ಟ್‌ನೆಸ್ ತೋರಿಸುವುದು ಕಡಿಮೆ ಮಾಡಿದರೆ ವಿನ್ ಆಗಬಹುದು. ಮುಂದಿನವಾರ ಎಲಿಮಿನೇಟ್ ಆಗಿರುವವರ ಜಾಗದಲ್ಲಿ ನನ್ನ ಪ್ರಕಾರ ನೀತು ಇರುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಇದನ್ನೂ ಓದಿ- "ದೇವರೇ ನನಗೆ ಇನ್ನೊಂದು ಜನ್ಮವಿದ್ದರೆ, ಇಂತಹ ಒಬ್ಬ ಅಣ್ಣನನ್ನು ಕರುಣಿಸು", ಬಿಗ್‌ಬಾಸ್‌ ಸ್ಪರ್ಧಿ ಬಗ್ಗೆ ಸೀರಿಯಲ್‌ ನಟಿ ಪೋಸ್ಟ್‌‌ ವೈರಲ್!

ಬಿಗ್‌ಬಾಸ್‌ ಮನೆಯೊಳಗೆ JioCinemaದ ಫನ್ ಫ್ರೈಡೇ ಟಾಸ್ಕ್‌ನಲ್ಲಿ ‘ಕಥಾಸಂಗಮ’ ಟಾಸ್ಕ್‌ನಲ್ಲಿ ನಾನು ಗೆದ್ದಿದ್ದು ಮರೆಯಲಾಗದ ನೆನಪು. ನನಗೆ ಮಾತಾಡಲು ಎರಡು ನಿಮಿಷ ಟೈಮ್ ಇತ್ತು. ಅಲ್ಲಿ ಒಂದು ಅದ್ಭುತ ಕಥೆ ಮಾಡಿದೀನಿ ಅಂತ ಖುಷಿ ಇದೆ. ಜಿಯೊ ಸಿನಿಮಾ ಫನ್ ಫ್ರೈಡೆಯಲ್ಲಿ ಒಗಟು ಬಿಡಿಸಿದ್ದೂ ಒಂದು ಅದ್ಭುತ ನೆನಪು. ‘ಅಟ್ಟದ ಮೇಲೆ ಪುಟ್ಟಲಕ್ಷ್ಮೀ’ ಅಂದ ತಕ್ಷಣ ಬೊಟ್ಟು ಎಂದು ನೆನಪಾಯ್ತು. ಮನೆಯೊಳಗಿನ ಬೊಟ್ಟು ತರಲು ಓಡಿದೆ. ಮಧ್ಯದಲ್ಲಿಯೇ ಏನೋ ನೆನಪಾಯ್ತು. ನನ್ನ ಹಣೆಯಲ್ಲಿನ ಬೊಟ್ಟನ್ನೇ ತೆಗೆದು ಇಟ್ಟುಬಿಟ್ಟೆ. ಎಲ್ಲರೂ ಅಚ್ಚರಿಪಟ್ಟರು. ಅದೂ ಖುಷಿಕೊಟ್ಟಿತು. ಬಿಗ್‌ಬಾಸ್‌ ಅಂದ್ರೆ ಬಿಗ್‌ಬಾಸ್ ಅಷ್ಟೆ. ಅಲ್ಲಿನ ಎಲ್ಲವನ್ನೂ ಮಿಸ್ ಮಾಡಿಕೊಳ್ತೀನಿ. ಬೆಳಗಿನ ಸಾಂಗ್, ಪ್ರತಿಕ್ಷಣ ಧರಿಸಿರುತ್ತಿದ್ದ ಮೈಕ್ ಮಿಸ್ ಮಾಡ್ಕೊತೀನಿ. ಬಿಗ್‌ಬಾಸ್ ಧ್ವನಿಯನ್ನಂತೂ ತುಂಬ ಮಿಸ್ ಮಾಡ್ಕೋತೀನಿ ಎಂದು ಬಿಗ್‌ಬಾಸ್ ಅನುಭವವನ್ನು ಹಾಗೂ ಬಿಗ್‌ಬಾಸ್ ಮನೆಯ ಸುಂದರ ಕ್ಷಣಗಳನ್ನು ಮೆಲುಕು ಹಾಕಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More