Home> Entertainment
Advertisement

Bigg Boss: ಬಿಗ್ ಬಾಸ್ ಹೊಸ ಸೀಸನ್: ಈ ಸೋಷಿಯಲ್‌ ಮಿಡಿಯಾ ಸ್ಟಾರ್‌ ಮೊದಲ ಸ್ಪರ್ಧಿ!

Bigg Boss Season 18: ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17 ನಂತರ, ವೀಕ್ಷಕರು ಬಿಗ್ ಬಾಸ್ ಸೀಸನ್ 18 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಈ ಸೀಸನ್‌ಗೆ ಸಂಬಂಧಿಸಿದಂತೆ ಹೊಸ ಅಪ್‌ಡೇಟ್ ಹೊರಬಿದ್ದಿದೆ. 
 

 Bigg Boss: ಬಿಗ್ ಬಾಸ್ ಹೊಸ ಸೀಸನ್: ಈ ಸೋಷಿಯಲ್‌ ಮಿಡಿಯಾ ಸ್ಟಾರ್‌ ಮೊದಲ ಸ್ಪರ್ಧಿ!

Bigg Boss Latest News: ಬಿಗ್ ಬಾಸ್ 17 ರ (ಬಿಗ್ ಬಾಸ್ ಸೀಸನ್ 17) ಸೀಸನ್ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು.. ಮುನ್ನಾವರ್ ಫರುಕಿ ಟ್ರೋಫಿ ಗೆದ್ದರು.. ಇದೀಗ ಬಿಗ್ ಬಾಸ್ ಸೀಸನ್ 18ರ ಬಿಗ್‌ಅಪ್ಡೇಟ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಇತ್ತೀಚೆಗಷ್ಟೇ ಹೊಸ ಅಪ್ಡೇಟ್ ಹೊರಬಿದ್ದಿದೆ.. ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಆ ಮನೆಯಲ್ಲಿ ನೋಡಲು ಬಯಸುತ್ತಾರೆ. ಹಾಗಾದ್ರೆ ಬಿಗ್ ಬಾಸ್ ಸೀಸನ್ 18ರ ಮೊದಲ ಸ್ಪರ್ಧಿ ಯಾರು ಎಂಬ ಮಾಹಿತಿಯನ್ನು ಇದೀಗ ತಿಳಿಯೋಣ.. 

ಇದನ್ನೂ ಓದಿ-ರಶ್ಮಿಕಾ ಮಂದಣ್ಣ ಕೊಟ್ರು ಗುಡ್‌ ನ್ಯೂಸ್..‌ ಮದುವೆ ವದಂತಿ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಕ್ತು ಸರ್‌ಪ್ರೈಸ್‌.!

ಇಲ್ಲಿಯವರೆಗೆ, ಬಿಗ್ ಬಾಸ್ ಸೀಸನ್ 18 ರಲ್ಲಿ ಪ್ರವೇಶಿಸಿಸುವವರಲ್ಲಿ ಅನೇಕ ಹೆಸರುಗಳು ಚರ್ಚೆಗೆ ಬಂದಿವೆ.. ಇದೆಲ್ಲದರ ಮಧ್ಯೆ ಈ ಶೋಗೆ ಹೋಗುವ ಮೊದಲ ಸ್ಪರ್ಧಿಯ ಹೆಸರನ್ನು ಬಹಿರಂಗಪಡಿಸಲಾಗಿದೆ. ಸೋಷಿಯಲ್ ಮೀಡಿಯಾ ಸ್ಟಾರ್ ಒಬ್ಬರು ಬಿಗ್ ಬಾಸ್ ಸೀಸನ್ 18 ರ ಮೊದಲ ಸ್ಪರ್ಧಿ ಎಂದು ಹೇಳಲಾಗುತ್ತಿದೆ. ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಪೂಜಾ ಶರ್ಮಾ ರೇಖಾ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ.. ಪೂಜಾ ಟ್ರಾನ್ಸ್‌ಜೆಂಡರ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 

ಇದನ್ನೂ ಓದಿ-Shivarajkumar: "ನನ್ನ ಪತ್ನಿ ಸಂಸದೆ ಆಗಬೇಕು ಎಂಬ ಆಸೆಯಿದೆ": ಸೆಂಚುರಿ ಸ್ಟಾರ್‌ ಮಾತು!

ಪೂಜಾ ಶರ್ಮಾ ರೇಖಾ ಯಾರು? 
ಪೂಜಾ ರೇಖಾ ಶರ್ಮಾ ಮುಂಬೈನ ಲೋಕಲ್ ಟ್ರೈನ್‌ನಲ್ಲಿ ಮಾಡಿದ ನೃತ್ಯದಿಂದಾಗಿ ಬಹಳ ಪ್ರಸಿದ್ಧರಾದರು... ಪೂಜಾ ಶರ್ಮಾ ತೃತೀಯಲಿಂಗಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.. ಬಿಗ್ ಬಾಸ್ 18ಕ್ಕೆ ಹೋಗುವ ಬಗ್ಗೆ ಪೂಜಾ ಅವರನ್ನು ಕೇಳಿದಾಗ, 'ಸಮಯ ಬಂದಾಗ ಎಲ್ಲರಿಗೂ ತಿಳಿಯುತ್ತದೆ' ಎಂದು ಉತ್ತರಿಸಿದ್ದಾರೆ.. ಆದರೆ, ಇದನ್ನು ಇನ್ನೂ ಯಾರೂ ಖಚಿತಪಡಿಸಿಲ್ಲ. ಹಾಗಾಗಿ ಬಿಗ್ ಬಾಸ್ 18ರ ಮನೆಯಲ್ಲಿ ಪೂಜಾ ರೇಖಾ ಶರ್ಮಾ ಕಾಣಿಸಿಕೊಳ್ಳಲಿದ್ದಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More