Home> Entertainment
Advertisement

Bigg Boss ಸಾನ್ಯ ಅಯ್ಯರ್ ಗೂ "ಕಾಸ್ಟಿಂಗ್ ಕೌಚ್" ಕಹಿ ಅನುಭವದ ಆಗಿತ್ತಾ....?

ನನ್ನ ಜೀವನದಲ್ಲೂ ಕಾಸ್ಟಿಂಗ್ ಕೌಚ್ ಕಹಿ ಅನುಭವ ಆಗಿದೆ. ನಾನು ಎಲ್ಲವನ್ನೂ ಮೆಟ್ಟಿ ನಿಂತಿದ್ದೀನಿ. ಯಾರ ಮಾತಿಗೂ, ಯಾವ ನೆಗೆಟಿವ್ ವಿಚಾರಕ್ಕೂ ತಲೆಕೆಡಿಸಿಕೊಳ್ಳಲ್ಲ - ಜೀ ಕನ್ನಡ ನ್ಯೂಸ್ ಜೊತೆ ತಮ್ಮ ಜೀವನದ ಒಂದಷ್ಟು ಕಹಿ ಘಟನೆಗಳನ್ನು ಮೆಲಕು ಹಾಕಿದ ಸಾನ್ಯ ಅಯ್ಯರ್ 

Bigg Boss ಸಾನ್ಯ ಅಯ್ಯರ್ ಗೂ

ಪುಟ್ಟಗೌರಿ ಸೀರಿಯಲ್ ಖ್ಯಾತಿಯ ಸಾನ್ಯ ಅಯ್ಯರ್ ಬಿಗ್ ಬಾಸ್ OTT ಸೀಸನ್ ಮೂಲಕ ಬಿಗ್ ಹೌಸ್ ಗೆ ಎಂಟ್ರಿ ಕೊಟ್ಟು ಭರ್ಜರಿ ಮನರಂಜನೆ ನೀಡಿ ಟಿವಿ ಸೀಸನ್ ಗೂ ಎಂಟ್ರಿ ಕೊಟ್ಟು ಟಫ್ ಫೈಟ್ ಕೊಡೋ ಮೂಲಕ ಸಖತ್ ಆಗಿ ಆಡಿ ಮಿಂಚಿದ್ರು. ಅದ್ಯಾಕೋ ಏನೋ ದೊಡ್ಮನೆಯಿಂದ ಇತ್ತೀಚಿಗೆ ಎಲಿಮಿನೇಟ್ ಆಗಿ ಹೊರ ಬಂದ್ರು. 

ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿಯೇ ಆಟ ಆಡುತ್ತಿದ್ದ ಸಾನ್ಯ ಅಯ್ಯರ್ ಬಿಗ್ ಬಾಸ್ ಮನೆಯಿಂದ ಹೊರ ಬರಬಾರದಿತ್ತು ಎಂದು  ಸಾನ್ಯ ಅಯ್ಯರ್ ಫ್ಯಾನ್ಸ್ ಕೊರಗುತ್ತಲೇ ಇದ್ದಾರೆ. ಇದೀಗ ಬಿಗ್ ಮನೆಯ ಅನುಭವದ ಬಗ್ಗೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿರುವ ಸಾನ್ಯ ಅಯ್ಯರ್, ತಮ್ಮ ಜೀವನದ ಒಂದಷ್ಟು ಕಹಿ ಘಟನೆಗಳನ್ನು ಮೆಲಕು ಹಾಕೋ ವೇಳೆ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ- ಬಟ್ಟೆ ಹರಿದು, ಬ್ಲೇಡ್‌ನಿಂದ ಕತ್ತರಿಸಿ... 6 ತಾಸು ಮಹಿಳಾ ಕಲಾವಿದೆ ಅನುಭವಿಸಿದ್ದಳು ಚಿತ್ರಹಿಂಸೆ

ನನ್ನ ಜೀವನದಲ್ಲೂ ಕಾಸ್ಟಿಂಗ್ ಕೌಚ್ ಕಹಿ ಅನುಭವ ಆಗಿದೆ. ನಾನು ಎಲ್ಲವನ್ನೂ ಮೆಟ್ಟಿ ನಿಂತಿದ್ದೀನಿ. ಯಾರ ಮಾತಿಗೂ, ಯಾವ ನೆಗೆಟಿವ್ ವಿಚಾರಕ್ಕೂ ತಲೆಕೆಡಿಸಿಕೊಳ್ಳಲ್ಲ  ಅಂತ ನೇರವಾಗಿ ಮಾತನಾಡಿದ್ರು  ಸಾನ್ಯ ಅಯ್ಯರ್. ಆದ್ರೆ ಯಾರು ಅವರಿಗೆ ಹಿಂಸೆ ಕೊಟ್ಟರು ಅನ್ನೋದನ್ನ ಮಾತ್ರ ಹೇಳಿಕೊಳ್ಳಲು ಸಾನ್ಯ ಇಷ್ಟಪಡಲಿಲ್ಲ.

ಇದನ್ನೂ ಓದಿ- ಟೀಸರ್ ಮೂಲಕ ಕುತೂಹಲ ಹುಟ್ಟಿಸಿರುವ 'ರಾಕ್ಷಸರು'

ಬಣ್ಣದ ಬದುಕಿನಲ್ಲಿ ಕಾಸ್ಟಿಂಗ್ ಕೌಚ್ ಅನ್ನೋ ಮಾರಿ ಎಲ್ಲಾ ಹೆಣ್ಣು ಮಕ್ಕಳಿಗೆ ಶಾಪವಾಗಿ ಕಾಡತೊಡಗಿದೆ ಅನ್ನೋದು ಅಷ್ಟೇ ಸತ್ಯವಾಗಿದೆ. ಒಳ್ಳೆ ಸಿನಿಮಾ ಅವಕಾಶ ಸಿಕ್ಕರೆ ಹೀರೋಯಿನ್ ಲೈಫ್ ಗೆ ಎಂಟ್ರಿ ಕೊಡಲು ಸಾನ್ಯ ಅಯ್ಯರ್ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಒಳ್ಳೆ ಟ್ಯಾಲೆಂಟ್ ಇರೋ ಸಾನ್ಯ ಅಯ್ಯರ್ ಚಂದನವನದಲ್ಲಿ ಒಳ್ಳೆ ಹೆಸರು ಮಾಡಲಿ ಅನ್ನೋದೇ ನಮ್ಮ ಆಶಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More