Home> Entertainment
Advertisement

Bigg Boss Kannada OTT Grand Finale: 9 ನೇ ಆವೃತ್ತಿಗೆ ಬಡ್ತಿ ಪಡೆದವರು ಯಾರು ಗೊತ್ತೇ?

ತನ್ನ ಮೊದಲ ಆವೃತ್ತಿಯೊಂದಿಗೆ ಬಿಗ್ ಬಾಸ್ ಒಟಿಟಿ ಕೊನೆಗೂ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ.

Bigg Boss Kannada OTT Grand Finale: 9 ನೇ ಆವೃತ್ತಿಗೆ ಬಡ್ತಿ ಪಡೆದವರು ಯಾರು ಗೊತ್ತೇ?

ಬೆಂಗಳೂರು: ತನ್ನ ಮೊದಲ ಆವೃತ್ತಿಯೊಂದಿಗೆ ಬಿಗ್ ಬಾಸ್ ಒಟಿಟಿ ಕೊನೆಗೂ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ.

ವಿಶೇಷವೆಂದರೆ ಗುರುಜಿ ಅರ್ಯವರ್ಧನ್ ಅವರು 9 ನೇ ಆವೃತ್ತಿಗೆ ಆಯ್ಕೆಯಾಗುವ ಮೂಲಕ ಒಟಿಟಿ ವೇದಿಕೆ ಮೂಲಕ ಈಗ ಬೃಹತ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೆ ವೇಳೆ ಕರಾವಳಿ ಹುಡುಗ ರೂಪೇಶ್ ಶೆಟ್ಟಿ, ಎರಡನೇ ವ್ಯಕ್ತಿಯಾಗಿ ಅದೇ ರೀತಿ ಸಾನ್ಯಾ ಅಯ್ಯರ್, ಹಾಗೂ ರಾಕೇಶ್ ಅಡಿಗ ಕೂಡ 9 ನೇ ಆವೃತ್ತಿಗೆ ಎಂಟ್ರಿ ನೀಡುವುದರ ಮೂಲಕ ಒಟ್ಟು ನಾಲ್ಕು ಅಭ್ಯರ್ಥಿಗಳಿಗೆ ಈಗ ಒಟಿಟಿ ಮೂಲಕ ಬೃಹತ್ ಬಿಗ್ ಬಾಸ್ ಷೋ ಗೆ ಟಿಕೆಟ್ ಸಿಕ್ಕಂತಾಗಿದೆ.

ಈಗ ಇದೆ ಸೆಪ್ಟಂಬರ್ 24 ರಿಂದಲೇ 9ನೇ ಆವೃತ್ತಿಯ ಬೃಹತ್ ಬಿಗ್ ಶೋ ಆರಂಭಗೊಳ್ಳಲಿದೆ. ಇದೆ ಮೊದಲ ಬಾರಿಗೆ ಒಟಿಟಿ ಮೂಲಕ ನಾಲ್ಕು ಅಭ್ಯರ್ಥಿಗಳನ್ನು ಬಿಗ್ ಬಾಸ್ ಗೆ ಆಯ್ಕೆ ಮಾಡಲಾಗಿದೆ.ವಿಶೇಷವೆಂದರೆ ಒಟಿಟಿ ಬಿಗ್ ಬಾಸ್ ನ ಗ್ರ್ಯಾಂಡ್ ಫೈನಲ್ ಗೆ ಒಟ್ಟಾಗಿ ಎಂಟು ಅಭ್ಯರ್ಥಿಗಳು ಆಯ್ಕೆಯಾಗಿದ್ದರು, ಅದರಲ್ಲಿ ಈಗ ನಾಲ್ಕು ಅಭ್ಯರ್ಥಿಗಳು ಮುಂದಿನ ಬೃಹತ್ ಬಿಗ್ ಬಾಸ್ ಗೆ ಬಡ್ತಿ ಪಡೆದಿದ್ದಾರೆ.

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಸೋನು ಗೌಡ, ಜಶ್ವಂತ್ ಬೋಪಣ್ಣ, ಜಯಶ್ರೀ, ಹಾಗೂ ಸೋಮ್ಮಣ್ಣ ಮಾಚಿಮಾಡ ಅವರು ಫೈನಲ್ ವರೆಗೆ ಬಂದು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Read More