Home> Entertainment
Advertisement

ಬಿಗ್‌ಬಾಸ್‌ ಪ್ರಕಟಣೆ : ರೂಪೇಶ್‌ ರಾಜಣ್ಣ ಕಳಪೆ, ಅರುಣ್‌ ಸಾಗರ್‌ ಅತ್ಯುತ್ತಮ ಸ್ಪರ್ಧಿ..!

ಬಿಗ್‌ ಬಾಸ್‌ ವಾರದ ಅತ್ಯುತ್ತಮ ಮತ್ತು ಕಳಪೆ ಸ್ಪರ್ಧಿಯ ಹೆಸರನ್ನು ಪ್ರಕಟಿಸಿದ್ದು, ಅರುಣ್‌ ಸಾಗರ್‌ ಅತ್ಯುತ್ತಮ ಹಾಗೂ ರೂಪೇಶ್‌ ರಾಜಣ್ಣ ಕಳಪೆ ಕಂಟೆಸ್ಟೆಂಟ್ ಎಂದು ಹೇಳಿದೆ. ಸದ್ಯ ಬಿಗ್‌ಬಾಸ್‌ನ ಈ ನಿರ್ಧಾರದಿಂದ ದೊಡ್ಮನೆ ಮಂದಿ ಶಾಕ್‌ಗೆ ಒಳಗಾಗಿದ್ದಾರೆ.

ಬಿಗ್‌ಬಾಸ್‌ ಪ್ರಕಟಣೆ : ರೂಪೇಶ್‌ ರಾಜಣ್ಣ ಕಳಪೆ, ಅರುಣ್‌ ಸಾಗರ್‌ ಅತ್ಯುತ್ತಮ ಸ್ಪರ್ಧಿ..!

BBKS9 : ಬಿಗ್‌ ಬಾಸ್‌ ವಾರದ ಅತ್ಯುತ್ತಮ ಮತ್ತು ಕಳಪೆ ಸ್ಪರ್ಧಿಯ ಹೆಸರನ್ನು ಪ್ರಕಟಿಸಿದ್ದು, ಅರುಣ್‌ ಸಾಗರ್‌ ಅತ್ಯುತ್ತಮ ಹಾಗೂ ರೂಪೇಶ್‌ ರಾಜಣ್ಣ ಕಳಪೆ ಕಂಟೆಸ್ಟೆಂಟ್ ಎಂದು ಹೇಳಿದೆ. ಸದ್ಯ ಬಿಗ್‌ಬಾಸ್‌ನ ಈ ನಿರ್ಧಾರದಿಂದ ದೊಡ್ಮನೆ ಮಂದಿ ಶಾಕ್‌ಗೆ ಒಳಗಾಗಿದ್ದಾರೆ.

ಹೌದು.. ಬಿಗ್‌ ಹೌಸ್‌ನಲ್ಲಿ ಎಲ್ಲವೂ ತಲೆಕೆಳಗಾಗಿ ನಡೆಯುತ್ತಿದೆ. ಅರುಣ್‌ ಸಾಗರ್‌ ಮತ್ತು ರೂಪೇಶ್‌ ರಾಜಣ್ಣ ಅವರು ಇಬ್ಬರ ಮೇಲೂ ದೊಡ್ಮನೆ ಮಂದಿ ದೂರುಗಳ ಮಳೆ ಸುರಿಸಿದ್ದರು. ರೂಪೇಶ್‌ ಕಳಪೆ, ಅರುಣ್‌ ಸಾಗರ್‌ ರೂಲ್ಸ್‌ ಪಾಲನೆ ಮಾಡಲ್ಲ ಎಂದು ಹರಿಹಾಯ್ದಿದ್ದರು. ಅದ್ರೆ ಅವರೆಲ್ಲರ ಲೆಕ್ಕಾಚಾರ ಕೆಳಗೆ ಆಗಿದ್ದು, ಈ ವಾರದ ಅತ್ಯುತ್ತಮ ಸ್ಪರ್ಧಿಯಾಗಿ ಯಾರೂ ಊಹಿಸದ ರೀತಿಯಲ್ಲಿ ಅರುಣ್‌ ಸಾಗರ್‌ ಹೆಸರು ಪ್ರಕಟವಾಗಿದೆ. ಅಲ್ಲದೆ, ಫೇಕ್‌ ಎಂದಿದ್ದಕ್ಕೆ ಮನೆ ಬಿಟ್ಟು ಹೋಗಲು ಸಿದ್ಧರಾಗಿದ್ದ ರೂಪೇಶ್‌ ಅವರಿಗೆ ಕಳಪೆ ಹಣೆ ಪಟ್ಟಿ ಸೇರಿದೆ.

ಇದನ್ನೂ ಓದಿ: BBK 9 : ವಾರದ ಕತೆ ಕಿಚ್ಚನ ಜೊತೆ.. ಇಂದು ದೊಡ್ಮನೆಯಿಂದ ಹೊರ ಹೋಗೋರು ಯಾರು?

ಇನ್ನು ಪ್ರತಿ ವಾರ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಲೇ ಹೋಗುತ್ತದೆ. ಈ ವಾರ ಆರ್ಯವರ್ಧನ್, ದರ್ಶ್, ದಿವ್ಯಾ ಉರುಡುಗ, ಐಶ್ವರ್ಯ, ಪ್ರಶಾಂತ್ ಸಂಬರಗಿ, ವಿನೋದ್, ಅರುಣ್ ಸಾಗರ್, ನವಾಜ್, ಸಾನ್ಯಾ ಅಯ್ಯರ್, ಮಯೂರಿ, ರೂಪೇಶ್ ಶೆಟ್ಟಿ, ಕಾವ್ಯಶ್ರೀ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಇಂದು ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. 

ಇತರ ಸ್ಪರ್ಧಿಗಳಾದ ರಾಕೇಶ್ ಅಡಿಗ, ಅನುಪಮಾ ಗೌಡ, ಅಮೂಲ್ಯ ಗೌಡ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ ಸದ್ಯಕ್ಕೆ ಸೇಫ್ ಆಗಿದ್ದಾರೆ. ವಾರದ ಟಾಸ್ಕ್‌ಗಳು ಬಹುತೇಕ ಮುಗಿದಿದ್ದು, ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರ ಮೊದಲ ಕ್ಯಾಪ್ಟನ್ ಆಗಿ ವಿನೋದ್ ಗೊಬ್ರಗಾಲ ಆಯ್ಕೆ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More