Home> Entertainment
Advertisement

Jayashree Ramaiah Suicide : ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ನೇಣಿಗೆ ಶರಣು

 ಕನ್ನಡ ಚಿತ್ರ ನಟಿ ಮತ್ತು ಕನ್ನಡ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ (Jayashree Ramaiah) ಆತ್ಮಹತ್ಯೆಗೆ ಶರಣಾಗಿದ್ದಾರೆ.

Jayashree Ramaiah Suicide : ಬಿಗ್ ಬಾಸ್  ಸ್ಪರ್ಧಿ ಜಯಶ್ರೀ ರಾಮಯ್ಯ ನೇಣಿಗೆ ಶರಣು

ಬೆಂಗಳೂರು: ಕನ್ನಡ ಚಿತ್ರ ನಟಿ ಮತ್ತು ಕನ್ನಡ ಬಿಗ್ ಬಾಸ್ (KannadBigboss) ಸ್ಪರ್ಧಿ ಜಯಶ್ರೀ ರಾಮಯ್ಯ (Jayashree Ramaiah) ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಯಶ್ರೀ ರಾಮಯ್ಯ ಮೃತದೇಹ ಸಂಧ್ಯಾಕಿರಣ ಆಶ್ರಮದಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದೆ.  ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ..

 ಜಯಶ್ರೀ ರಾಮಯ್ಯ (Jayashree Ramaiah) ಆತ್ಮಹತ್ಯೆಗೆ ಕಾರಣ ಏನೆಂದು ಸದ್ಯಕ್ಕೆ ತಿಳಿದು ಬಂದಿಲ್ಲ. ಅವರು ಸ್ವಲ್ಪ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದು,  ಜಯಶ್ರೀ ರಾಮಯ್ಯ ಅವರು ಬೆಂಗಳೂರಿನ ಸಂಧ್ಯಾ ಕಿರಣ್ ಆಶ್ರಮದಲ್ಲಿ (Sandhya Kiran Ashram) ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಜಯಶ್ರೀ ರಾಮಯ್ಯ ಬಿಗ್ ಬಾಸ್ ಸೀಸನ್ (Bigboss) 3 ರ ಸ್ಪರ್ಧಿಯಾಗಿದ್ದರು. ಜಯಶ್ರೀ ರಾಮಯ್ಯ  ಉಪ್ಪು ಹುಳಿ ಖಾರ, ಕನ್ನಡಗೊತ್ತಿಲ್ಲ  ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. 

ಇದನ್ನೂ ಓದಿ :Larry King Death: US ಕಿರುತೆರೆಯ ಖ್ಯಾತ ಹಿರಿಯ ನಿರೂಪಕ ಲ್ಯಾರಿ ಕಿಂಗ್ ನಿಧನ

2020ರಲ್ಲಿಯೂ ಆತ್ಮಹತ್ಯೆಗೆ  ಯತ್ನಿಸಿದ್ದ ಜಯಶ್ರೀ: 
2020ರ ಜುಲೈಯಲ್ಲಿಯೂ ಜಯಶ್ರೀ ಆತ್ಮಹತ್ಯೆಗೆ (Suicide) ಯತ್ನಿಸಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈ ಸಂದರ್ಭದಲ್ಲಿ ಜಯಶ್ರೀ ತಾನು ಖಿನ್ನತೆಗೆ ಒಳಗಾಗಿದ್ದು  ಈ ಜಗತ್ತು ತೊರೆಯತ್ತಿದ್ದೇನೆ ಎಂಬರ್ಥದ  ಪೋಸ್ಟ್ ಹಾಕಿದ್ದರು. ಇದಾದ ನಂತರ ತನ್ನ ಪೋಸ್ಟ್ ಅನ್ನು ಡಿಲಿಟ್ ಮಾಡಿ ತಾನು ಹುಷಾರಾಗಿದ್ದು, ಸುರಕ್ಷಿತವಗಿರುವುದಾಗಿ ಹೇಳಿದ್ದರು. 

ಇದಾದ ನಂತರ ಜುಲೈ 25ರಂದು ಮತ್ತೆ ಫೇಸ್ಬುಕ್ (Facebook) ಲೈವ್ ಗೆ ಬಂದಿದ್ದ ಜಯಶ್ರೀ, ತಾನು ಯಾವುದೇ ಪಬ್ಲಿಸಿಟಿಗಾಗಿ ಈ ರೀತಿ ಮಾಡುತ್ತಿಲ್ಲ. ಅಲ್ಲದೆ  ಯಾರಿಂದಲೂ ಹಣಕಾಸಿನ ನೆರವನ್ನು ಆಪೇಕ್ಷಿಸುತ್ತಿಲ್ಲ. ನಾನು ಸಾವನ್ನಷ್ಟೇ ಬಯಸುತ್ತಿದ್ದೇನೆ. ಖಿನ್ನತೆ (Depression)ಜೊತೆ ಹೋರಾಡಲು ಸಾಧ್ಯವಾಗುತ್ತಿಲ್ಲ ಎಂದೆಲ್ಲಾ ಹೇಳಿದ್ದರು. ಅಲ್ಲದೆ ತಾನು ಹಣಕಾಸಿನ ವಿಚಾರದಲ್ಲಿ ಸದೃಢಳಾಗಿರುವುದಾಗಿಯೂ ಹೇಳಿದ್ದರು. ತನ್ನ  ಹಿಂದಿನ  ಪೋಸ್ಟ್ ಬಗ್ಗೆ ಕೆಟ್ಟ ರೀತಿಯಲ್ಲಿ ಕಮೆಂಟ್ ಮಾಡದಂತೆಯೂ ಮನವಿ  ಮಾಡಿದ್ದರು.

ಇದನ್ನೂ ಓದಿ : 'Sushant Singh : ರಾಷ್ಟ್ರ ರಾಜಧಾನಿಯ ರಸ್ತೆಯೊಂದಕ್ಕೆ ಸುಶಾಂತ್ ಸಿಂಗ್ ಹೆಸರು..!

 ಜಯಶ್ರೀ ಸಾವಿನ ಸುದ್ದಿಯಿಂದ ಕನ್ನಡ ಚಿತ್ರರಂಗದಲ್ಲಿ ಸೂತಕದ ಛಾಯೆ ಆವರಿಸಿದೆ. ಜಯಶ್ರೀ ಆತ್ಮಹತ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಮಾದನಾಯಕನಹಳ್ಳಿ ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More