Home> Entertainment
Advertisement

Ram Charan's Birthday:  ರಾಮ್ ಚರಣ್ ಹುಟ್ಟುಹಬ್ಬಕ್ಕೆ  ಕಿಯಾರಾ ಅಡ್ವಾಣಿಯಿಂದ ಬಿಗ್ ಸರ್ಪ್ರೈಸ್

Ram Charan's Birthday: ರಾಮ್ ಚರಣ್ ಆಸ್ಕರ್ ಪ್ರಶಸ್ತಿ ಬಳಿಕ  ಹೈದರಾಬಾದ್​​ಗೆ ವಾಪಸ್ ಆಗುತ್ತಿದ್ದಂತೆ RC 15 ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಸೆಟ್​ನಲ್ಲಿ ರಾಮ್ ಚರಣ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

Ram Charan's Birthday:  ರಾಮ್ ಚರಣ್ ಹುಟ್ಟುಹಬ್ಬಕ್ಕೆ  ಕಿಯಾರಾ ಅಡ್ವಾಣಿಯಿಂದ ಬಿಗ್ ಸರ್ಪ್ರೈಸ್

ಹೈದರಾಬಾದ್: ಆಸ್ಕರ್ ಪ್ರಶಸ್ತಿ ಪಡೆದ  ರಾಮ್ ಚರಣ್ ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಇದೀಗ ಅವರ ಹುಟ್ಟುಹಬ್ಬ ಸಂಭ್ರಮ ಬಲು ಜೋರಾಗಿದ್ದು, ಟಾಲಿವುಡ್ ತಾರೆಯರು ಮಾತ್ರವಲ್ಲದೇ ಇದೀಗ  ಬಾಲಿವುಡ್‌ ನಟ ನಟಿಯರ ಪ್ರೀತಿ ಪಾತ್ರಕ್ಕೆ ಸಾಕ್ಷಿಯಾಗಿದ್ದಾರೆ. ರಾಮ್ ಚರಣ್ ಆಸ್ಕರ್ ಪ್ರಶಸ್ತಿ ಬಳಿಕ ಹೈದರಾಬಾದ್​​ಗೆ ವಾಪಸ್ ಆಗುತ್ತಿದ್ದಂತೆ RC 15 ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಸೆಟ್​ನಲ್ಲಿ ರಾಮ್ ಚರಣ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. 

ಇವರ ಹುಟ್ಟು ಹಬ್ಬವನ್ನು ಬಾಲಿವುಡ್‌ತಾರೆ  ಕಿಯಾರಾ ಅಡ್ವಾಣಿ ಹಾಗೂ RC 15 ಸಿನಿಮಾ ತಂಡ ರಾಮ್ ಚರಣ್ ಹುಟ್ಟುಹಬ್ಬವನ್ನು ಒಂದು ದಿನಕ್ಕೂ ಮುನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ.ಸಿನಿಮಾ ಶೂಟಿಂಗ್ ಸೆಟ್ ಲ್ಲಿ  ಹುಟ್ಟುಹಬ್ಬದ ಪ್ರಯುಕ್ತ ಬಿಗ್‌  ಸರ್ಪ್ರೈಸ್ ನೀಡಿದ್ದಾರೆ.

ಇದನ್ನೂ ಓದಿ: SSMB28 : ಫ್ಯಾನ್ಸ್‌ ಬಿಗ್‌ ಸರ್ಪ್ರೈಸ್‌ ಕೊಟ್ಟ ಮಹೇಶ್‌ ಬಾಬು..! SSMB28 ಪೋಸ್ಟರ್‌ ರಿಲೀಸ್‌..

ರಾಮ್ ಚರಣ್  ಸೆಟ್‌ಗೆ ಕಾಲಿಡುತ್ತಿದ್ದಂತೆ RC 15 ಸಿನಿಮಾ ತಂಡ ಹೂವಿನ ಮಳೆ ಸುರಿಸಿ,  ಬಳಿಕ ರಾಮ್ ಚರಣ್ ಕೈಯಲ್ಲಿ ಕೇಕ್ ಕಟ್ ಮಾಡಿಸಿ  ಆಸ್ಕರ್ ವಿಜೇತನ ಸಂಸತಕ್ಕೆ ಕಾರಣರಾಗಿದ್ದಾರೆ.

ಇದನ್ನೂ ಓದಿ: ಶಶಾಂಕ್‌ ಕ್ಯಾರೆಕ್ಟರ್‌ ಇರೋ ಹುಡುಗ ನನ್ಗೆ ಬೇಡ, ಇವನು ತುಂಬಾ ಕಿರಿಕಿರಿ ಮಾಡ್ತಾನೆ...!

ರಾಮ್ ಚರಣ್ ಅವರ  15ನೇ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಮಾಡಿಲ್ಲ. ಸಿನಿಮಾಗೆ ತಾತ್ಕಾಲಿಕವಾಗಿ ‘ಆರ್​ಸಿ  15’ ಎಂದು ಕರೆಯಲಾಗುತ್ತಿದೆ.  ಸದ್ಯ ಇದೀಗ ಹೈದರಾಬಾದ್​ನಲ್ಲಿ ಈ ಸಿನಿಮಾದ ಶೂಟಿಂಗ್ ಲ್ಲಿ ರಾಮ್ ಚರಣ್ ಬ್ಯುಸಿ ಯಾಗಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ಗೆ ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More