Home> Entertainment
Advertisement

ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ನಟನೆಯ 'ಬರ್ಮ' ಚಿತ್ರಕ್ಕೆ ಭರ್ಜರಿ, ಜೇಮ್ಸ್‌ ಹಿಟ್‌ ಚಿತ್ರಗಳ ನಿರ್ದೇಶಕ ಆ್ಯಕ್ಷನ್ ಕಟ್

Gattimela Actor : ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ನಟನೆಯ ʼಬರ್ಮʼ ಚಿತ್ರವನ್ನು ಬಹದ್ದೂರ್, ಭರ್ಜರಿ, ಜೇಮ್ಸ್‌ನಂತಹ ಹಿಟ್‌ ಚಿತ್ರಗಳ ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದು, ಇದೀಗ ಹೊಸ ಸಿನಿಮಾಗಾಗಿ ರಕ್ಷ್ ಜೊತೆ ಕೈಜೋಡಿಸುತ್ತಿದ್ದಾರೆ.

ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ನಟನೆಯ 'ಬರ್ಮ' ಚಿತ್ರಕ್ಕೆ ಭರ್ಜರಿ, ಜೇಮ್ಸ್‌ ಹಿಟ್‌ ಚಿತ್ರಗಳ ನಿರ್ದೇಶಕ ಆ್ಯಕ್ಷನ್ ಕಟ್

James Hit Movie Director Chethan Kumar : ʼಬರ್ಮʼ ಎಂಬ ಹೊಸ ಚಿತ್ರದ ಮೂಲಕ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ಜೊತೆ ಧ್ರುವ ಸರ್ಜಾ ನಟನೆಯ ಬಹದ್ದೂರ್, ಭರ್ಜರಿ, ಶ್ರೀಮುರಳಿ ನಟನೆಯ ಭರಾಟೆ ಮತ್ತು ಪುನೀತ್ ರಾಜ್‌ಕುಮಾರ್ನಟನೆಯ ಜೇಮ್ಸ್‌ನಂತಹ ಹಿಟ್‌ ಚಿತ್ರಗಳ ನಿರ್ದೇಶಕರಾದ ಚೇತನ್ ಕುಮಾರ್ ಹೊಸ ಸಿನಿಮಾಗಾಗಿ ಕೈಜೋಡಿಸುತ್ತಿದ್ದಾರೆ.

ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ʼಬರ್ಮʼ ಶೀರ್ಷಿಕೆಯು ಬ್ರಹ್ಮ ದೇವರ ವಾಸಸ್ಥಾನವನ್ನು ಸೂಚಿಸುತ್ತದೆ. ಅಲ್ಲದೇ 'ಆಯುಧ ಬಳಸುವುದು ಬರೀ ಆಡಂಬರ ಅಲ್ಲ, ಅದೊಂದು ಆಚರಣೆ' ಎಂಬ ಆಕರ್ಷಕ ಅಡಿಬರಹವನ್ನು ಶೀರ್ಷಿಕೆಯು ಒಳಗೊಂಡಿದೆ.

ಇದನ್ನು ಓದಿ - ಸಮಂತಾ ರಾಜಕೀಯ ಎಂಟ್ರಿ! ನಟನೆಗೆ ಹೇಳ್ತಾರಾ ವಿದಾಯ?

ರಕ್ಷ್ ಈಗಾಗಲೇ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದು, ʼಬರ್ಮʼ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಮಾತ್ರ ನಿರ್ವಹಿಸುವುದಲ್ಲದೇ ನಿರ್ಮಾಪಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ಸಿನಿಮಾದ ಆಡಿಯೋ ಹಕ್ಕುಗಳನ್ನು ಹೆಸರಾಂತ ಡಿ-ಬೀಟ್ಸ್ ಆಡಿಯೋ ಪಡೆದುಕೊಂಡಿದೆ.

 
 
 
 

 
 
 
 
 
 
 
 
 
 
 

A post shared by Rakksh (@rakkshofficial)

ʼಬರ್ಮʼ ಚಿತ್ರದ ಚಿತ್ರೀಕರಣವು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದ್ದು, ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಮತ್ತು ಬರ್ಮ ಚಿತ್ರ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More