Home> Entertainment
Advertisement

BBK10: ಹೊಸ ಮನೆ, ಹೊಸ ಲುಕ್...ಸೀಸನ್​ 10ರ ಬಗ್ಗೆ ಕಿಚ್ಚ ಸುದೀಪ್​ ಹೇಳೋದೇನು?

Bigg Boss Kannada Season 10 Press Meet: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಇನ್ನೇನು ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದ್ದು, ಹೊಸ ಸೀಸನ್‌ ವೈಶಿಷ್ಟ್ಯತೆ ಬಗ್ಗೆ ಮಾಹಿತಿ ನೀಡಲು ಇಂದು (ಅ.3) ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು.
 

BBK10: ಹೊಸ ಮನೆ, ಹೊಸ ಲುಕ್...ಸೀಸನ್​ 10ರ ಬಗ್ಗೆ ಕಿಚ್ಚ ಸುದೀಪ್​ ಹೇಳೋದೇನು?

Bigg Boss Kannada Season 10: ಪ್ರಸ್ತುತ  9 ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿರುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋ ಅಕ್ಟೋಬರ್​ 8ರಂದು ಕಲರ್ಸ್​ ಕನ್ನಡದಲ್ಲಿ ಅದ್ಧೂರಿಯಾಗಿ ಶುರುವಾಗಲಿದೆ. ಈ ಶೋಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 

ಸದ್ಯ 10ನೇ ಸೀಸನ್ ಆರಂಭಕ್ಕೆ ದಿನಗಣನೆ ಮಾಡಲಾಗುತ್ತಿದ್ದು, ಪ್ರತಿಬಾರಿಯಂತೆ ಈ ಬಾರಿಯೂ ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚ ಸುದೀಪ್‌ ಅವರೇ ಈ ರಿಯಾಲಿಟಿ ಶೋ ನಿರೂಪಣೆಯನ್ನು ಮಾಡಲಿದ್ದಾರೆ. ಈ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶುರುವಾಗುವುದಕ್ಕೂ ಮೊದಲೇ ಮುನ್ನ ಕಲರ್ಸ್​ ಕನ್ನಡ ವಾಹಿನಿ ಮತ್ತು ಕಿಚ್ಚ ಸುದೀಪ್​ ಅವರು ಸುದ್ದಿಗೋಷ್ಠಿ ನಡೆಸಿ ಹೊಸ ಸೀಸನ್‌ ವೈಶಿಷ್ಟ್ಯತೆ ಬಗ್ಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ-ವಿಜಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್.. ಲಿಯೋ ಟ್ರೈಲರ್ ರಿಲೀಸ್‌ ಡೇಟ್ ಫಿಕ್ಸ್.. !

ಇನ್ನು ಈ ಸೀಸನ್‌ ಹಲವು ಹೊಸತನವನ್ನು ಹೊತ್ತು ಬರಲಿದ್ದು, ಹೊಸ ಮನೆಯ ನಿರ್ಮಾಣವೂ ವಿಶೇಷವಾಗಿಯೇ ನಡೆಯುತ್ತಿದೆ. ಹೌದು ‘ಬಿಗ್ ಬಾಸ್’ ಮನೆ ಇಷ್ಟು ದಿನ ಇನೋವೇಟಿವ್ ಫಿಲ್ಮ್​ ಸಿಟಿಯಲ್ಲಿತ್ತು. ಆದರೆ ಈ ಹೊಸ ಸೀಸನ್‌ನಲ್ಲಿ ಇದು ಬದಲಾವಣೆಯಗಾಲಿದೆ. ಅಲ್ಲದೇ ದೊಡ್ಮಣೆಗೆ ಹೊಸ ಲುಕ್, ಹೊಸ ರೀತಿಯ ಲೇಔಟ್ ನೀಡಲಾಗಿದೆ. 

ಸದ್ಯ ನಮ್ಮೆಲ್ಲರ ಅಚ್ಚು ಮೆಚ್ಚಿನ ಕಿಚ್ಚ ‘ಬಿಗ್ ಬಾಸ್ 10ನೇ ಸೀಸನ್’ ನಿರೂಪಣೆ ಮಾಡಲು ಮಸ್ತ್‌ ರೆಡಿಯಾಗಿದ್ದಾರೆ. ಸದ್ಯ ಮ್ಯಾಕ್ಸ್‌ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅವರು ನಿರೂಪಣೆಗೂ ಆದ್ಯತೆ ನೀಡುತ್ತಾರೆ. ಅಲ್ಲದೇ ದೊಡ್ಮನೆಯ ಲೇಔಟ್, ಲುಕ್‌ ಹೇಗಿ ಅನ್ನೋದನ್ನು ಸುದೀಪ್ ಮೊದಲ ದಿನ ವಿವರಿಸಲಿದ್ದಾರೆ.

ಇದನ್ನೂ ಓದಿ-Nag Chaitanya: ಅಭಿಮಾನಿಯ ಬೈಕ್‌ ಮೇಲೆ ಆಟೋಗ್ರಾಫ್‌ ಹಾಕಿದ ಟಾಲಿವುಡ್‌ ಯುವ ಸಾಮ್ರಾಟ್‌..ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Read More