Home> Entertainment
Advertisement

ಬಾಲಯ್ಯ ಹೊಸ ಚಿತ್ರದ ಪೋಸ್ಟರ್‌ ಲೀಕಾಯ್ತಾ? ಅಸಲಿ ಕಹಾನಿಯಾದರು ಏನು?

NBK 110: ಟಾಲಿವುಡ್‌ ಲೆಜೆಂಡ್‌ ನಂದಮೂರಿ ಬಾಲಕೃಷ್ಣ ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಿರುವಾಗ, ಸೋಶಿಯಲ್ ಮೀಡಿಯಾದಲ್ಲಿಈ ನಟನ 110 ಸಿನಿಮಾದ ಪೋಸ್ಟರ್ ಹರಿದಾಡುತ್ತಿದೆ. ಅಂದ್ಹಾಗೆ ಇದು ಬಾಲಯ್ಯನ 110ನೇ ಸಿನಿಮಾದ ಅಸಲಿ ಪೋಸ್ಟರೇನಾ ಅಥವಾ ಫಾನ್ಸ್‌ ನಕಲು ಮಾಡಿ ಲೀಕ್ ಮಾಡಿದ್ದಾರಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
 

ಬಾಲಯ್ಯ ಹೊಸ ಚಿತ್ರದ ಪೋಸ್ಟರ್‌ ಲೀಕಾಯ್ತಾ? ಅಸಲಿ ಕಹಾನಿಯಾದರು ಏನು?

Nandamuri Balayya New Movie Poster Leaked: ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ಸಿಕ್ಕಾಪಟ್ಟೆ ಸ್ಪೀಡ್‌ನಲ್ಲಿದ್ದು, ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಟಾಲಿವುಡ್ ಲೆಜೆಂಡ್ ಲಕ್ 'ಅಖಂಡ' ಚಿತ್ರದಿಂದ ಬದಲಾಗಿದ್ದು, ಈ ನಟ ಅಭಿನಯಿಸಿದ ಸಿನಿಮಾಗಳು ಇತ್ತೀಚೆಗೆ ಸೂಪರ್ ಹಿಟ್ ಆಗುತ್ತಿವೆ. 'ಅಖಂಡ' ಸಿನಿಮಾ ಬಳಿಕ ಸೆಂಚುರಿ ಮೇಲೆ ಸೆಂಚುರಿ ಬಾರಿಸುತ್ತಲೇ ಇದ್ದು, 'ಅಖಂಡ' ಬಳಿಕ ತೆರೆಕಂಡಿದ್ದ 'ವೀರ ಸಿಂಹ ರೆಡ್ಡಿ' ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಮೆಗಾ ಹಿಟ್ ಅಂತ ಸಾಬೀತಾಗಿತ್ತು. ಇನ್ನು ಇತ್ತೀಚೆಗಷ್ಟೇ ತೆರೆ ಕಂಡಿರೋ 'ಭಗವಂತ್ ಕೇಸರಿ' ಕೂಡ 100 ಕೋಟಿ ಕ್ಲಬ್ ಸೇರಿದೆ. ಹೀಗಾಗಿ ಮುಂದಿನ ಸಿನಿಮಾ ಬಗ್ಗೆ ಕುತೂಹಲ ದೊಡ್ಡದಿದೆ.

ಇತ್ತೀಚೆಗೆ ದಸರಾ ಹಬ್ಬದ ಸಂಭ್ರಮದಲ್ಲಿ ಮಾಲಯ್ಯ ಹಾಗೂ ಶ್ರೀಲೀಲಾ ಅಭಿನಯದ 'ಭಗವಂತ್ ಕೇಸರಿ' ರಿಲೀಸ್ ಆಗಿದ್ದು, ಈ ಸಿನಿಮಾದ ಖದರ್ ಇನ್ನು ಮುಗಿಯುವುದಕ್ಕೆ ಮುನ್ನವೇ ಬಾಲಯ್ಯನ ಹೊಸ ಸಿನಿಮಾದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಾಲಯ್ಯನ 110ನೇ ಸಿನಿಮಾದ ಪೋಸ್ಟರ್ ಬೇಜಾನ್ ಸದ್ದು ಮಾಡುತ್ತಿರುವ ವೇಳೆ, ಕೆಲವರು ಬಾಲಯ್ಯನ 110ನೇ ಚಿತ್ರದ ಪೋಸ್ಟರ್ ಲೀಕ್ ಆಗಿದೆ ಅಂತನೂ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಇದು ಬಾಲಯ್ಯನ 110ನೇ ಸಿನಿಮಾದ ಅಸಲಿ ಪೋಸ್ಟರೇನಾ? ಇಲ್ಲ ಅಭಿಮಾನಿಗಳೇ ನಕಲು ಮಾಡಿ ಲೀಕ್ ಮಾಡಿದ್ದಾರಾ ಎಂಬ ಈ ಪ್ರಶ್ನೆ ಸದ್ಯ ಹುಟ್ಟುಕೊಂಡಿದೆ.

ಇದನ್ನು ಓದಿ: Rakshith Shetty: ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ ಟ್ರೈಲರ್ ಔಟ್..!‌

ಬಾಲಯ್ಯ ನಟಿಸುತ್ತಿರುವ 109ನೇ ಸಿನಿಮಾವನ್ನು ಬಾಬಿ ನಿರ್ದೇಶನ ಮಾಡುತ್ತಿದ್ದಾರೆಂಬ ವಿಷಯ ರಹಸ್ಯವಾಗೇನು ಉಳಿದಿಲ್ಲ. ಈಗಾಗಲೇ ಅದು ಟಾಲಿವುಡ್‌ನಲ್ಲಿ ಜಗತ್‌ಜಾಹೀರಾಗಿದ್ದು, ಇತ್ತೀಚೆಗೆ ಸಿನಿಮಾ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದರಲ್ಲಿ ಬಾಲಕೃಷ್ಣ ಕ್ಲೀನ್ ಆಗಿ ಶೇವ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದರ, ಬೆನ್ನಲ್ಲೇ 110ನೇ ಸಿನಿಮಾ ಬಗ್ಗೆ ಟಾಲಿವುಡ್‌ನಲ್ಲಿ ಟಾಕ್ ಶುರುವಾಗಿದೆ.ಸೋಶಿಯಲ್ ಮೀಡಿಯಾದಲ್ಲಿ ಬಾಲಕೃಷ್ಣ ನಟನೆಯ 110 ಸಿನಿಮಾದ ಪೋಸ್ಟರ್ ಹರಿದಾಡುತ್ತಿದೆ.

ಬಾಲಯ್ಯನ ಕಾಸ್ಟ್ಯೂಮ್, ಲುಕ್ ಎಲ್ಲವೂ ವಿಭಿನ್ನವಾಗಿದ್ದು, ಯುದ್ಧ ಭೂಮಿಯಲ್ಲಿ ಸೆಣಸಾಟಕ್ಕೆ ನಿಂತ ಯೋಧನಂತೆ ಕಾಣುತ್ತಿದ್ದು, ಜೊತೆಗೆ 'ಬ್ಯಾಟಲ್ ಆಫ್ ಬ್ರೀತ್ಸ್' ಅನ್ನೋ ಟ್ಯಾಗ್ ಕೂಡ ಇಡಲಾಗಿದೆ. ಅದೇ ಫೋಟೊಯೀಗ ಎಲ್ಲೆಡೆ ವೈರಲ್ ಆಗಿದೆ. ಅಸಲಿಗೆ NBK 110 ಸಿನಿಮಾದ ಪೋಸ್ಟರ್ ಲೀಕ್ ಆಗಿದ್ದಾ ಎನ್ನುವ ಪ್ರಶ್ನೆಗೆ, ಇದು ಫ್ಯಾನ್ ಮೇಡಾ ಅನ್ನೋದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಇನ್ನೊಂದು ಕಡೆ ಇದು ಕ್ರಿಕೆಟ್‌ಗೆ ಸಂಬಂಧಿಸಿದ ಪೋಸ್ಟರ್ ಎಂದು ಕೆಲವರು ಹೇಳುತ್ತಿದ್ದು, ಈ ಟ್ಯಾಗ್‌ನಲ್ಲಿ ಕಿಚ್ಚ ಸುದೀಪ್ ಹೆಸರು ಕೂಡ ಇದ್ದು, ಅದೂ ಕೂಡ ಸದ್ದು ಮಾಡುತ್ತಿದೆ. ಹೀಗಾಗಿ ಪೋಸ್ಟರ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More