Home> Entertainment
Advertisement

ಆಕ್ಷನ್‌ ಹೀರೋನ 'ಜಾಧಾ ನಶಾ' ಸಾಂಗ್‌ ಔಟ್‌ : ಮತ್ತೆ ಮೋಡಿ ಮಾಡಿತು ನೋರಾ ಡಾನ್ಸ್‌..!

ಆಯುಷ್ಮಾನ್ ಖುರಾನಾ ಬಾಲಿವುಡ್‌ ಸ್ಟಾರ್‌ ನಟರಲ್ಲಿ ಒಬ್ಬರು. ಆಯುಷ್ಮಾನ್‌ ತನ್ನ ಚಲನಚಿತ್ರಗಳಲ್ಲಿ ಪವರ್-ಪ್ಯಾಕ್ಡ್ ಪ್ರದರ್ಶನ ನೀಡಲು ಶ್ರಮವಹಿಸುವ ನಟ. ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಆನ್ ಆಕ್ಷನ್ ಹೀರೋ'ದ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 2 ರಂದು ಥಿಯೇಟರ್‌ಗಳಿಗೆ ಬರಲಿದೆ. ಇದೀಗ ಚಿತ್ರತಂಡ 'ಜಾಧಾ ನಶಾ' ಎಂಬ ಸಾಂಗ್‌ ಅನ್ನು ಬಿಡುಗಡೆ ಮಾಡಿದ್ದಾರೆ.

ಆಕ್ಷನ್‌ ಹೀರೋನ 'ಜಾಧಾ ನಶಾ' ಸಾಂಗ್‌ ಔಟ್‌ : ಮತ್ತೆ ಮೋಡಿ ಮಾಡಿತು ನೋರಾ ಡಾನ್ಸ್‌..!

ಹೊಸದಿಲ್ಲಿ : ಆಯುಷ್ಮಾನ್ ಖುರಾನಾ ಬಾಲಿವುಡ್‌ ಸ್ಟಾರ್‌ ನಟರಲ್ಲಿ ಒಬ್ಬರು. ಆಯುಷ್ಮಾನ್‌ ತನ್ನ ಚಲನಚಿತ್ರಗಳಲ್ಲಿ ಪವರ್-ಪ್ಯಾಕ್ಡ್ ಪ್ರದರ್ಶನ ನೀಡಲು ಶ್ರಮವಹಿಸುವ ನಟ. ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಆನ್ ಆಕ್ಷನ್ ಹೀರೋ'ದ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 2 ರಂದು ಥಿಯೇಟರ್‌ಗಳಿಗೆ ಬರಲಿದೆ. ಇದೀಗ ಚಿತ್ರತಂಡ 'ಜಾಧಾ ನಶಾ' ಎಂಬ ಸಾಂಗ್‌ ಅನ್ನು ಬಿಡುಗಡೆ ಮಾಡಿದ್ದಾರೆ.

ಜಾಧಾ ನಶಾ ಹಾಡಿನಲ್ಲಿ ಆಯುಷ್ಮಾನ್ ಮತ್ತು ನೋರಾ ಫತೇಹಿ ಮಿಂಚಿದ್ದಾರೆ. ಈ ಹಾಡಿಗೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಕೇಳಿ ಬರುತ್ತಿವೆ. ಈ ವಿಡಿಯೋವನ್ನು ಇದುವರೆಗೆ 11 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಹಾಡಿನಲ್ಲಿ ಆಯುಷ್ಮಾನ್ ಮತ್ತು ನೋರಾ ಫತೇಹಿ ಸಿಜ್ಲಿಂಗ್ ಕೆಮಿಸ್ಟ್ರಿ ಸೂಪರ್‌ ಆಗಿ ವರ್ಕೌಟ್‌ ಆಗಿದೆ. ನೋರಾ ತಮ್ಮ ಡಾನ್ಸ್‌ ವೈಖರಿಯ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.

ಇದನ್ನೂ ಓದಿ: BBK9 : ಬಿಗ್‌ಬಾಸ್‌ ಮನೆಯಲ್ಲಿ ಆರ್ಯವರ್ಧನ್‌ ಗುರೂಜಿ ಮಾಟ ಮಂತ್ರ..!

ಅನಿರುದ್ಧ್ ಅಯ್ಯರ್ ನಿರ್ದೇಶನದ, ಆಕ್ಷನ್ ಹೀರೋ ಚಿತ್ರವನ್ನು ಭೂಷಣ್ ಕುಮಾರ್, ಕ್ರಿಶನ್ ಕುಮಾರ್ ಮತ್ತು ಆನಂದ್ ಎಲ್ ರೈ ನಿರ್ಮಾಣ ಮಾಡಿದ್ದಾರೆ. ಚಿತ್ರ ಡಿಸೆಂಬರ್ 2 ರಂದು ಥಿಯೇಟರ್‌ಗೆ ಬರಲಿದೆ. ಇತ್ತೀಚಿಗೆ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಜಾಧಾ ನಶಾ ಹಾಡನ್ನು ಟಿ ಸೀರಿಸ್‌ನ ವೆಬ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಟ್ರೆಂಡಿಂಗ್ ಕ್ರಿಯೇಟ್‌ ಮಾಡುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More