Home> Entertainment
Advertisement

Avatar 2 in OTT : ಶೀಘ್ರದಲ್ಲೇ ಒಟಿಟಿಯಲ್ಲಿ ಅವತಾರ್ 2, ಎಂದಿನಿಂದ ಗೊತ್ತಾ?

Avatar 2 OTT Release : ನಿರ್ದೇಶಕ ಜೇಮ್ಸ್ ಕ್ಯಾಮರೂನ್ ತಮ್ಮ ನಿರ್ದೇಶನದ ಪ್ರತಿಭೆಯಿಂದ ಪಂಡೋರ ಎಂಬ ಹೊಸ ಪ್ರಪಂಚವನ್ನು ಪ್ರೇಕ್ಷಕರಿಗೆ ತೋರಿಸಿದರು. ಅವತಾರ್ 2 ಸಿನಿಮಾ ಡಿಸೆಂಬರ್ 16, 2022 ರಂದು ಕ್ರಿಸ್‌ಮಸ್ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಯಿತು. 
 

Avatar 2 in OTT : ಶೀಘ್ರದಲ್ಲೇ ಒಟಿಟಿಯಲ್ಲಿ ಅವತಾರ್ 2, ಎಂದಿನಿಂದ ಗೊತ್ತಾ?

Avatar 2 OTT Release : ಹಾಲಿವುಡ್ ಚಿತ್ರ ಅವತಾರ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈ ಸಿನಿಮಾವನ್ನು ಯಾವ ಸಿನಿಮಾ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಪಂಡೋರಾ ಎಂಬ ತಮ್ಮ ನಿರ್ದೇಶನದ ಪ್ರತಿಭೆಯಿಂದ ಹೊಸ ಪ್ರಪಂಚವನ್ನು ತೋರಿಸಿದರು. 'ಅವತಾರ್ 1' ಚಲನಚಿತ್ರವು 2009 ರ ಹಿಟ್‌ ಸಿನಿಮಾಗಳಲ್ಲಿ ಒಂದು. ಇದರ ಮುಂದುವರಿದ ಭಾಗ ಡಿಸೆಂಬರ್ 16, 2022 ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು. ಈ ಚಿತ್ರಕ್ಕೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 

ಇದು ಭಾರತದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇನ್ನು ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲೂ ದಾಖಲೆ ಬರೆದಿದೆ. ಜೇಮ್ಸ್ ಕ್ಯಾಮರೂನ್ ಅವರ ಅವತಾರ್ ಚಿತ್ರ 2009 ರಲ್ಲಿ ಬಿಡುಗಡೆಯಾಗಿ ಬಂಪರ್ ಹಿಟ್ ಆಯಿತು. ಅವತಾರ್ 2 ಆ ಚಿತ್ರದ ಇತ್ತೀಚಿನ ಸೀಕ್ವೆಲ್. ಈ ಚಲನಚಿತ್ರವು ವಿಶ್ವ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹಿಸಿತು. "ಅವತಾರ್ ದಿ ವೇ ಆಫ್ ವಾಟರ್" ಶೀರ್ಷಿಕೆಯ ಚಲನಚಿತ್ರವು ಡಿಸೆಂಬರ್‌ನಲ್ಲಿ ಬಿಡುಗಡೆಯಾಯಿತು ಮತ್ತು ಪ್ರಸ್ತುತ Apple TV, Prime Video, VUDU, Google Play, XFINITY, AMC ಮತ್ತು Microsoft ಪ್ಲಾಟ್‌ಫಾರ್ಮ್‌ಗಳಲ್ಲಿ ಪಾವತಿಯ ಮೇಲೆ ಸ್ಟ್ರೀಮ್ ಆಗುತ್ತಿದೆ.

ಇದನ್ನೂ ಓದಿ: ಗೊತ್ತಿದ್ದೂ ತಪ್ಪು ಮಾಡುವ ಸಮಂತಾ.. ಹೀಗಾದರೆ ಕಷ್ಟವೇ?

ಕಳೆದ ವರ್ಷ ಡಿಸೆಂಬರ್ ನಲ್ಲಿ ಅವತಾರ್ 2 ರಿಲೀಸ್ ಆಗಿತ್ತು. ಯಾವಾಗ ಒಟಿಟಿಗೆ ಬರುತ್ತೆ ಎಂದು ಅಭಿಮಾನಿಗಳು ಕಾತುರರಾಗಿದ್ದರು. ಅಂತೆಯೇ ಜೂನ್ 7 ರಿಂದ ಡಿಸ್ನಿ ಪ್ಲಸ್ ನಲ್ಲಿ ಅವತಾರ್ 2 ಸಿನಿಮಾ ಬಿಡುಗಡೆಯಾಗಲಿದೆ. ಹಾಟ್ ಸ್ಟಾರ್ ತೆಲುಗು ಜೊತೆಗೆ ಇಂಗ್ಲಿಷ್, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮ್‌ ಆಗಲಿದೆ.  

ಅವತಾರ್ ಸಿನಿಮಾದಿಂದ ಒಟ್ಟು ಐದು ಸಿಕ್ವೇಲ್ ಹೊರಬರಲಿವೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತವಾಗಿ ತಿಳಿಸಿದೆ. ಸಿನಿಮಾಟೋಗ್ರಫಿ, ಪ್ರೊಡಕ್ಷನ್ ಡಿಸೈನ್, ವಿಶ್ಯುವಲ್ ಎಫೆಕ್ಟ್, ಆಕ್ಷನ್ ಸೀನ್ ಜೊತೆಗೆ ಸ್ಟೋರಿ ಹೇಳುವ ಶೈಲಿಯಿಂದ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. 

ಇದನ್ನೂ ಓದಿ: ಇಂತಹ ಸಿಂಪಲ್ ಪ್ರಶ್ನೆಗೆ ಉತ್ತರಿಸಲಾಗದೆ ಟ್ರೋಲ್‌ ಆದ ಆಲಿಯಾ ಭಟ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More