Home> Entertainment
Advertisement

Avatar 2 Box Office Collection: ಬಾಕ್ಸ್ ಆಫೀಸ್‌ನಲ್ಲಿ ಅವತಾರ್ 2 ಅಬ್ಬರ

Avatar 2 Box Office Collection: ಹಾಲಿವುಡ್ ಚಿತ್ರ ಅವತಾರ್ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರ ಭರ್ಜರಿ ಗಳಿಕೆ ಮಾಡುತ್ತಿದೆ. ಅವತಾರ್ 2 ಎರಡು ದಿನದಲ್ಲಿ ಎಷ್ಟು ಗಳಿಸಿದೆ ಎಂಬುದನ್ನು ಇಲ್ಲಿ ತಿಳಿಯೋಣ.

Avatar 2 Box Office Collection: ಬಾಕ್ಸ್ ಆಫೀಸ್‌ನಲ್ಲಿ ಅವತಾರ್ 2 ಅಬ್ಬರ

Avatar 2 Box Office Collection: ಹಾಲಿವುಡ್ ಚಿತ್ರ 'ಅವತಾರ್: ದಿ ವೇ ಆಫ್ ವಾಟರ್' (ಅವತಾರ್ 2) ಪ್ರಪಂಚದಾದ್ಯಂತ ಪ್ರಶಂಸೆ ಪಡೆಯುತ್ತಿದೆ. ಈ ಚಿತ್ರವು ಅಮೆರಿಕ ಹಾಗೂ ಭಾರತದಲ್ಲೂ ತನ್ನ ಯಶಸ್ಸನ್ನು ತೋರಿಸಲಾರಂಭಿಸಿದೆ. ಅವತಾರ್ 2 (ಅವತಾರ್: ದಿ ವೇ ಆಫ್ ವಾಟರ್) ಚಿತ್ರದ ಎರಡನೇ ದಿನದ ಕಲೆಕ್ಷನ್ ಬಾಕ್ಸ್ ಆಫೀಸ್ ಅನ್ನು ಅಲ್ಲಾಡಿಸಿದೆ. ಅವತಾರ್ 2 ಎರಡನೇ ದಿನ ದಾಖಲೆಯ ಕಲೆಕ್ಷನ್‌ ಮಾಡಿದ್ದು, 45 ರಿಂದ 47 ಕೋಟಿ ಕಬಳಿಸಿದೆ. 

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ 2 ಭಾರತದಲ್ಲಿ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮೊದಲ ದಿನವೇ ಚಿತ್ರ 41 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದರಲ್ಲಿ ಹಿಂದಿ 21.7 ಕೋಟಿ, ತೆಲುಗು 11.5 ಕೋಟಿ, ತಮಿಳಿನಲ್ಲಿ 2.5 ಕೋಟಿ ಮತ್ತು ಮಲಯಾಳಂ 0.3 ಕೋಟಿ ಗಳಿಸಿತ್ತು.

ಇದನ್ನೂ ಓದಿ : IMDb Top 10 Indian Movies: ಐಎಂಡಿಬಿ ಟಾಪ್​ 10 ಚಿತ್ರಗಳಲ್ಲಿ ಕನ್ನಡ ಸಿನಿಮಾಗಳದ್ದೇ ಮೇಲುಗೈ

ಎರಡನೇ ದಿನವೂ ಚಿತ್ರ ದಾಖಲೆ ಬರೆದಿದೆ. ಅವತಾರ್ 2 ಭಾರತೀಯ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದಲ್ಲಿ 12 ಪ್ರತಿಶತದಷ್ಟು ಏರಿಕೆ ಕಂಡಿದೆ. ಬಾಲಿವುಡ್ ಹಂಗಾಮಾ ವರದಿ ಪ್ರಕಾರ, ಅವತಾರ್: ದಿ ವೇ ಆಫ್ ವಾಟರ್ ಎರಡನೇ ದಿನ 45 ರಿಂದ 47 ಕೋಟಿ ವ್ಯವಹಾರ ಮಾಡಿದೆ. ಇಲ್ಲಿಯವರೆಗಿನ ಎರಡೂ ದಿನಗಳ ಗಳಿಕೆಯನ್ನು ಸೇರಿಸುವ ಮೂಲಕ ಅವತಾರ್ 2 ಕಲೆಕ್ಷನ್ ಡೇ 2 ಭಾರತದಲ್ಲಿ 87 ಕೋಟಿ ರೂಪಾಯಿ ಗಳಿಸಿದೆ. ಅವತಾರ್ 2 ಗಳಿಕೆ ಮಾಡುತ್ತಿರುವ ರೀತಿ ನೋಡಿದರೆ ಭಾನುವಾರ ಚಿತ್ರ 100 ಕೋಟಿ ಗಡಿ ದಾಟುವ ಎಲ್ಲ ಸಾಧ್ಯತೆಯಿದೆ.

ಅವತಾರ್ 2 ದೊಡ್ಡ ಬಜೆಟ್ ಚಿತ್ರ. ಮೊದಲ ಭಾಗ ಬಿಡುಗಡೆಯಾದ ನಂತರ ಅದ್ಧೂರಿ ಬಜೆಟ್‌ನಿಂದಾಗಿ ಎರಡನೇ ಭಾಗ ತಡವಾಗಿ ರಿಲೀಸ್‌ ಆಯ್ತು ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, 250 ಮಿಲಿಯನ್ ಡಾಲರ್‌ಗಳಲ್ಲಿ ತಯಾರಾದ ಚಿತ್ರವು ಅದರ ವೆಚ್ಚವನ್ನು ಮರುಪಡೆಯಲು ಹೆಚ್ಚು ಸಮಯ ಥಿಯೇಟರ್‌ಗಳಲ್ಲಿ ಉಳಿಯಬೇಕಾಗುತ್ತದೆ.

ಇದನ್ನೂ ಓದಿ : Thugs of Ramaghada : ‘ಥಗ್ಸ್ ಆಫ್ ರಾಮಘಡ’ ಸಿನಿಮಾಗೆ ಡಾಲಿ ಧನಂಜಯ ಸಾಥ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More