Home> Entertainment
Advertisement

ಪ್ರತಿ ಸೆಪ್ಟೆಂಬರ್ ನಲ್ಲಿ ಸ್ಪೆಷಲ್ ಗಿಫ್ಟ್ ನೀಡುತ್ತಾರೆ!ಅನುಷ್ಕಾ ಶೆಟ್ಟಿ ಗಿಫ್ಟ್ ಸಿಕ್ರೆಟ್ ಬಿಚ್ಚಿಟ್ಟ ಸಂಗೀತ ನಿರ್ದೇಶಕ !ಸಂಬಂಧದ ಬಗ್ಗೆ ಮೊದಲ ಬಾರಿಗೆ ಬಿಚ್ಚುಮಾತು

Anushka Shetty : ಅನುಷ್ಕಾ ಶೆಟ್ಟಿ ಬಗ್ಗೆ ಸಂಗೀತ ನಿರ್ದೇಶಕ ಎಸ್ಎಸ್ ಥಮನ್  ಕೆಲವು ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. 

ಪ್ರತಿ ಸೆಪ್ಟೆಂಬರ್ ನಲ್ಲಿ ಸ್ಪೆಷಲ್ ಗಿಫ್ಟ್ ನೀಡುತ್ತಾರೆ!ಅನುಷ್ಕಾ ಶೆಟ್ಟಿ ಗಿಫ್ಟ್ ಸಿಕ್ರೆಟ್ ಬಿಚ್ಚಿಟ್ಟ ಸಂಗೀತ ನಿರ್ದೇಶಕ !ಸಂಬಂಧದ ಬಗ್ಗೆ ಮೊದಲ ಬಾರಿಗೆ ಬಿಚ್ಚುಮಾತು

Anushka Shetty : ಅನುಷ್ಕಾ ಶೆಟ್ಟಿಗೆ ಯಾವುದೇ ರೀತಿಯ ಪರಿಚಯ ನೀಡುವ ಅಗತ್ಯವಿಲ್ಲ. ಕರ್ನಾಟಕದ ಮನೆ ಮಗಳಾದ ಅನುಷ್ಕಾ ನೋಡಲು ಎಷ್ಟು ಸುಂದರಿಯೋ ಅವರ ಮನಸ್ಸು ಕೂಡಾ ಅಷ್ಟೇ ಸುಂದರ ಎನ್ನುವ ಮಾತು ಸಿನಿವಲಯದಲ್ಲಿ ಆಗಾಗ ಕೇಳಿಬರುತ್ತದೆ.ಇದೀಗ ಅನುಷ್ಕಾ ಶೆಟ್ಟಿ ಬಗ್ಗೆ ಸಿಕ್ರೆಟ್ ಒಂದು ಬಯಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎಸ್‌ಎಸ್ ಥಮನ್ ಈ ಸಿಕ್ರೆಟ್ ಅನ್ನು ಬಯಲು ಮಾಡಿದ್ದಾರೆ. 

ಎಸ್ಎಸ್ ಥಮನ್ ಪ್ರಸ್ತುತ ಇಂಡಿಯನ್ ಐಡಲ್ ಶೋಗೆ ತೀರ್ಪುಗಾರರಾಗಿ ಕೆಲಸ ಮಾಡುತ್ತಿದ್ದಾರೆ.ಈ ಶೋ ನಲ್ಲಿ ಇವರು ನೀಡುವ ಕಾಮೆಂಟ್ ಗಳು ಹೆಚ್ಚು ವೈರಲ್ ಆಗುತ್ತಿವೆ.ಸಾಮಾನ್ಯವಾಗಿ ಇವರು ತಮ್ಮ ವೈಯಕ್ತಿಕ ವಿಷಯಗಳನ್ನು ಹೆಚ್ಚಾಗಿ ಶೇರ್ ಮಾಡುತ್ತಿರುತ್ತಾರೆ.ಇತ್ತೀಚಿನ ಎಪಿಸೋಡ್‌ನಲ್ಲಿ ಥಮನ್ ಅನುಷ್ಕಾ ಶೆಟ್ಟಿ ಕೆಲವು ವಿಚಾರವನ್ನು ಬಹಿರಂಗ ಮಾಡಿದ್ದಾರೆ. 

ಇದನ್ನೂ ಓದಿ : ಕೋಟಿಗಟ್ಟಲೆ ಅಭಿಮಾನಿಗಳ ಹೃದಯ ನಿವಾಸಿ ಐಶ್ವರ್ಯ ರೈ ಸೋಷಿಯಲ್‌ ಮಿಡಿಯಾದಲ್ಲಿ ಫಾಲೋ ಮಾಡುತ್ತಿರುವುದು ಈ ವ್ಯಕ್ತಿಯನ್ನ ಮಾತ್ರ..! ಯಾರು ಗೊತ್ತೇ?

ಭಾಗಮತಿ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿರುವ ವೇಳೆ, ತನಗೆ ಐಫೋನ್ ಅಂದರೆ ತುಂಬಾ ಇಷ್ಟ. ಸಿನಿಮಾ ಹಿಟ್ ಆದರೆ ಐಫೋನ್ ಗಿಫ್ಟ್ ಮಾಡಬೇಕು ಎಂದು ತಮಾಷೆಯಾಗಿ ಅನುಷ್ಕಾ ಅವರನ್ನು ಕೇಳಿದ್ದರಂತೆ. ಆದರೆ ಆ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಅನುಷ್ಕಾ, ಅಲ್ಲಿಂದ ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ಐಫೋನ್ ಗಿಫ್ಟ್ ನೀಡುತ್ತಾ ಬಂದಿದ್ದಾರೆಯಂತೆ. ತಾನು ಪ್ರಸ್ತುತ ಬಳಸುತ್ತಿರುವ ಐಫೋನ್ ಕೂಡಾ ಅನುಷ್ಕಾ ಕೊಟ್ಟಿರುವ ಗಿಫ್ಟ್ ಎಂದು ಎಸ್ಎಸ್ ಥಮನ್  ಹೇಳಿದ್ದಾರೆ. 

ಅನುಷ್ಕಾ ನನ್ನ ನೆಚ್ಚಿನ ವ್ಯಕ್ತಿಗಳಲ್ಲಿ ಒಬ್ಬರು. ತುಂಬಾ ಒಳ್ಳೆಯ ವ್ಯಕ್ತಿ. ಅವರದ್ದು ಬಂಗಾರದ ಮನಸ್ಸು ಎಂದು ಹಾಡಿ ಹೊಗಳಿದ್ದಾರೆ. ಅವರು ನೋಡುವುದಕ್ಕೆ ಮಾತ್ರ ಸುಂದರಿಯಲ್ಲ. ಅವರ ಮನಸ್ಸು ಕೂಡಾ ಅಷ್ಟೇ ಸುಂದರವಾಗಿದೆ ಎಂದಿದ್ದಾರೆ. ಇವರು ಪ್ರಸ್ತುತ ಅನುಷ್ಕಾ ಜೊತೆ ಭಾಗಮತಿ 2 ನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ. 

ಇದನ್ನೂ ಓದಿ : ʼವಿವಾಹಿತ ವ್ಯಕ್ತಿಯೊಂದಿಗೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ತಪ್ಪು ಮಾಡಿದೆ..ʼ ಸ್ಟಾರ್ ಹೀರೋಯಿನ್ ಶಾಕಿಂಗ್ ಕಾಮೆಂಟ್ಸ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More