Home> Entertainment
Advertisement

Anupama Parameshwaran: ಕೊರಳಲ್ಲಿ ತಾಳಿ..! ಗುಟ್ಟಾಗಿ ಮದುವೆಯಾದ್ರಾ ಖ್ಯಾತ ನಟಿ?

Actress Anupama Parameshwaran: ತಮಿಳು, ತೆಲುಗು ಮತ್ತು ಮಲಯಾಳಂ ಹೀಗೆ ಮೂರು ಭಾಷೆಗಳಲ್ಲಿ ಬ್ಯುಸಿಯಾಗಿ ನಟಿಸುತ್ತಿರುವ ನಟಿ ಅನುಪಮಾ ಪರಮೇಶ್ವರನ್ ಸದ್ಯ ಕೊರಳಲ್ಲಿ ತಾಳಿ ಹಾಕಿಕೊಂಡಿರುವ ಪೋಟೋಗಳನ್ನು ಹಂಚಿಕೊಂಡು ನೆಟ್ಟಿಗರಿಗೆ ಶಾಕ್‌ ನೀಡಿದ್ದಾರೆ..

Anupama Parameshwaran: ಕೊರಳಲ್ಲಿ ತಾಳಿ..! ಗುಟ್ಟಾಗಿ ಮದುವೆಯಾದ್ರಾ ಖ್ಯಾತ ನಟಿ?

Anupama Parameshwaran Marriage Photos: 2015 ರಲ್ಲಿ ಪ್ರೇಮಂ ಚಿತ್ರದ ಮೂಲಕ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.. ಈ ಸಿನಿಮಾದ ನಟನೆಯಿಂದ ಅನುಪಮಾ ಯುವಕರ ಹೃದಯ ಕದ್ದಿದ್ದಾರೆ. ಇದಾದ ನಂತರ ಧನುಷ್ ಅಭಿನಯದ ಕೊಡಿ ಚಿತ್ರದ ಮೂಲಕ ಅನುಪಮಾ ಕಾಲಿವುಡ್ ಗೆ ಎಂಟ್ರಿ ಕೊಟ್ಟು.. ತಮಿಳು ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದರು.

ಆ ನಂತರ ತೆಲುಗಿಗೆ ತೆರಳಿ ಅಲ್ಲಿ ಗ್ಲಾಮರ್ ಪಾತ್ರಗಳಲ್ಲಿ ನಟಿಸಿ ಆಕರ್ಷಕ ನಟಿ ಎನಿಸಿಕೊಂಡರು. ಇದರಿಂದಾಗಿ ಅವರಿಗೆ ಅಲ್ಲಿ ಸತತ ಸಿನಿಮಾ ಅವಕಾಶಗಳು ಬಂದವು. ಸದ್ಯ ಅನುಪಮಾ ಗ್ಲಾಮರ್ ಪಾತ್ರಕ್ಕೆ ಹಾಗೂ ಹೋಮ್ಲಿ ಪಾತ್ರಕ್ಕೆ ಪ್ರತ್ಯೇಕ ಸಂಭಾವನೆ ಕೇಳುತ್ತಿದ್ದಾರೆ..

ಇದನ್ನೂ ಓದಿ-Allu Arjun Pushpa 2 Look: ಅಲ್ಲು ಅರ್ಜುನ್‌ ಸೀರೆಯುಟ್ಟ ‌ʻಪುಷ್ಪ 2ʼ ಲುಕ್ ಲೀಕ್.!!

ನಟಿ ಅನುಪಮಾ ಸದ್ಯ ತಮಿಳಿನಲ್ಲಿ ಸೈರನ್ ಚಿತ್ರದಲ್ಲಿ ಜಯಂ ರವಿ ಎದುರು ಅನುಪಮಾ ನಟಿಸುತ್ತಿದ್ದಾರೆ. ಚಿತ್ರವು ಫೆಬ್ರವರಿ 16 ರಂದು ಥಿಯೇಟರ್‌ಗೆ ಬರಲಿದ್ದು.. ಆಂಟನಿ ಭಾಗ್ಯರಾಜ್ ಎಂಬ ಚೊಚ್ಚಲ ನಿರ್ದೇಶಕ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ-Amulya: ಏಳು ವರ್ಷಗಳ ನಂತರ ಚಂದನವನಕ್ಕೆ ಗೋಲ್ಡನ್‌ ಕ್ವೀನ್‌ ಕಮ್‌ಬ್ಯಾಕ್‌: ಯಾವ ಚಿತ್ರ ಗೊತ್ತೇ?

ಇದೇ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಅನುಪಮಾ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಕೊರಳಲ್ಲಿ ತಾಳಿ ಹಾಕಿಕೊಂಡು ವಧುವಿನಂತೆ ಕಾಣುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಮದುವೆ ಆಯ್ತು ಎಂದುಕೊಂಡು ಅಭಿನಂದಿಸಿದ್ದಾರೆ.

ಇನ್ನು ಕೆಲವರು ಅನುಪಮಾ ಅವರು ರಹಸ್ಯವಾಗಿ ಮದುವೆ ಮಾಡಿಕೊಂಡಿದ್ದಾರಾ ಎಂದು ಪ್ರಶ್ನಿಸುದ್ದಿದ್ದಾರೆ... ಆದರೆ ನಿಜ ಹೇಳಬೇಕೆಂದರೆ ಅದು ಸೈರನ್‌ ಸಿನಿಮಾಗಾಗಿ ಆಕೆಯ ಗೆಟ್‌ಅಪ್ ಆಗಿತ್ತು. ಚಿತ್ರದಲ್ಲಿ ತನ್ನ ಮತ್ತು ಜಯಂ ರವಿ ಮದುವೆಯ ದೃಶ್ಯವನ್ನು ಚಿತ್ರೀಕರಿಸಿದ ನಂತರದ ಫೋಟೋಗಳು ಇವು... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More