Home> Entertainment
Advertisement

ಗಣರಾಜ್ಯೋತ್ಸವಕ್ಕೆ ಓಟಿಟಿಯಲ್ಲಿ ಅನಿಮಲ್‌ ರಿಲೀಸ್!

Animal: ಕಳೆದ ವರ್ಷ ರಣಬೀರ್‌ ಕಪೂರ್‌ ಹಾಗೂ ಡೈರೆಕ್ಟರ್‌ ಸಂದೀಪ್‌ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ ಮೂಡಿಬಂದ ಸೂಪರ್‌ ಹಿಟ್‌ ಅನಿಮಲ್‌ ಸಿನಿಮಾ ಇದೇ ಗಣರಾಜ್ಯೋತ್ಸವದಂದು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾದೆ ಈ ಚಿತ್ರ ಯಾವ ಫ್ಲಾಟ್‌ಫಾಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ? ಇಲ್ಲಿದೆ ಸಂಪೂರ್ಣ ವಿವರ.
 

ಗಣರಾಜ್ಯೋತ್ಸವಕ್ಕೆ ಓಟಿಟಿಯಲ್ಲಿ ಅನಿಮಲ್‌ ರಿಲೀಸ್!

Animal OTT Release: ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಹಾಗೂ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಸಿನಿಮಾ, ಕಳೆದ ವರ್ಷ ಡಿಸೆಂಬರ್‌ 1 ರಂದು ಬಿಡುಗಡೆಯಾಗಿದ್ದು, ಇದೀಗ ಓಟಿಟಿಗೆ ಲಗ್ಗೆ ಹಾಕಲಿದೆ. ಡೈರೆಕ್ಟರ್‌ ಸಂದೀಪ್ ರೆಡ್ಡಿ ವಂಗಾ, ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ಚಿತ್ರಗಳ ನಂತರ ಅನಿಮಲ್‌ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾ ಪ್ರಚಾರದಿಂದಲೇ ಒಂದು ರೇಂಜ್ ನಲ್ಲಿ ನಿರೀಕ್ಷೆ ಮೂಡಿಸಿದ್ದು, ರಿಲೀಸ್‌ ಬಳಿಕ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ನಂತರ ಬಂಪರ್ ಹಿಟ್ ಆಯಿತು.

ಅನಿಮಲ್‌ ಸಿನಿಮಾದ ಕಲೆಕ್ಷನ್ 1000 ಕೋಟಿಗೆ ಏರಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು, ಆದರೆ ಶಾರುಖ್ ಖಾನ್ ನಟನೆಯ ಡಂಕಿ ಹಾಗೂ ಪ್ರಭಾಸ್ ಅಭಿನಯದ ಸಲಾರ್ ಸಹ ಒಂದು ದಿನದ ಗ್ಯಾಪ್‌ನೊಂದಿಗೆ ತೆರೆ ಕಂಡಿತ್ತು. ಆದರಿಂದ ಈ ಎರಡು ಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದು ಅನಿಮಲ್ ಸಿನಿಮಾದ ಓಟಕ್ಕೆ ಅಂತಿಮ ಕಾರ್ಡ್ ಆಗಿದೆ. ಸದ್ಯ ಅನಿಮಲ್ ಚಿತ್ರತಂಡ, ಇದೀಗ ಓಟಿಟಿ ರಿಲೀಸ್‌ ಬಗ್ಗೆ ಅಪ್ಡೇಟ್ ನೀಡಿದ್ದು, ಈ ಸಿನಿಮಾ ಇದೇ ಜನವರಿ 26 ರಿಂದ ಅಂದರೆ 25 ರ ಮಧ್ಯರಾತ್ರಿ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. 

ಇದನ್ನೂ ಓದಿ: ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬದಂದು ಮತ್ತೊಂದು ಸರ್ಪೈಸ್:‌ D58 ಅಪ್ಡೇಟ್!

ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಿದ ಅನಿಮಲ್‌ ಚಿತ್ರ, ಇದೇ ಜನವರಿ 26 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಆದರೆ ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಿದ್ದ ಸಿನಿಮಾ ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತದೆಯೇ ಎಂದು ನೋಡಬೇಕಿದೆ. ಇನ್ನು ಚಿತ್ರದ ಬಾಕ್ಸ್‌ ಆಫೀಸ್‌ ಕಲೆಕ್ಷನ್ಸ್ ವಿಚಾರಕ್ಕೆ ಬಂದರೆ ಇಲ್ಲಿಯವರೆಗೆ ಅನಿಮಲ್ ವರ್ಲ್ಡ್ ವೈಡ್ 500 ಕೋಟಿ ರೂ ಗಳಿಸಿ, ರಣಬೀರ್ ಕಪೂರ್ ವೃತ್ತಿಜೀವನದಲ್ಲಿ ದೊಡ್ಡ ಹಿಟ್ ಕೊಟ್ಟ ಸಿನಿಮಾವೆಂದು ಎನಿಸಿಕೊಂಡಿದೆ.

ಅನಿಮಲ್‌ ಚಿತ್ರದಲ್ಲಿ ಅಪ್ಪ-ಮಗನ ಸೆಂಟಿಮೆಂಟ್ ಅನ್ನು ತುಂಬಾ ಆಳವಾಗಿ ತೋರಿಸಲಾಗಿದ್ದು, ಅನಿಲ್ ಕಪೂರ್, ಬಬ್ಲು ಪೃಥ್ವಿರಾಜ್, ಬಾಬಿ ಡಿಯೋಲ್ ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾವನ್ನು ಹಿಂದಿಯ ಟಾಪ್ ಪ್ರೊಡಕ್ಷನ್ ಕಂಪನಿ ಟಿ ಸೀರೀಸ್ ನಿರ್ಮಿಸಿದ್ದು, ಪಂಚ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Read More