Home> Entertainment
Advertisement

ಆಂಟಿ ಅಂತ ಕರೆದವರೇ ಅತ್ಯಾಚಾರಿಗಳಾಗೋದು : ಸಂಚಲನ ಸೃಷ್ಟಿಸಿದ ಪುಷ್ಪಾ ನಟಿ ಹೇಳಿಕೆ !

Anasuya Bharadwaj : ನಟಿ ಅನಸೂಯಾ ಭಾರದ್ವಾಜ್ ತಮ್ಮನ್ನು 'ಆಂಟಿ' ಎಂದು ಕರೆದ ಟ್ರೋಲರ್ ಗಳ ವಿರುದ್ಧ ಕಿಡಿಕಾರಿದ್ದಾರೆ. ಮಕ್ಕಳು ಹೇಳಿದರೆ ತೊಂದರೆ ಇಲ್ಲ. ಆದರೆ ವಯಸ್ಸಾದವರು ಈ ಪದವನ್ನು ಅಗೌರವದ ಅರ್ಥದಲ್ಲಿ ಬಳಸುತ್ತಿದ್ದಾರೆ ಎಂದಿದ್ದಾರೆ.

ಆಂಟಿ ಅಂತ ಕರೆದವರೇ ಅತ್ಯಾಚಾರಿಗಳಾಗೋದು : ಸಂಚಲನ ಸೃಷ್ಟಿಸಿದ ಪುಷ್ಪಾ ನಟಿ ಹೇಳಿಕೆ !

ಬೆಂಗಳೂರು : ಪುಷ್ಪಾ ಸಿನಿಮಾ ಖ್ಯಾತಿಯ ನಟಿ ಅನಸೂಯಾ ಭಾರದ್ವಾಜ್ ಚಿರಪರಿಚಿತ ಮುಖ. ವಿಜಯ್ ದೇವರಕೊಂಡ ಜೊತೆಗಿನ ಮನಸ್ತಾಪದಿಂದ ಅನಸೂಯ‌ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ತುತ್ತಾದರು. ಕೆಲವರು ಅವರನ್ನು ‘ಆಂಟಿ’ ಎಂದು ಕರೆದರು. ತಕ್ಷಣವೇ 'ಆಂಟಿ' ಎಂಬ ಪದವು ಟ್ವಿಟರ್‌ನಲ್ಲಿ (ಈಗ ಎಕ್ಸ್) ಟ್ರೆಂಡಿಂಗ್ ಪ್ರಾರಂಭಿಸಿತು.

ನಟಿ ಅನ್ಸೂಯಾ ಭಾರದ್ವಾಜ್ ಇದರಿಂದ ಬೇಸರಗೊಂಡರು. ಯಾರಾದರೂ ಆಂಟಿ ಎಂದು ಕರೆದರೆ ಅವರ ವಿರುದ್ಧ ಪೊಲೀಸರಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದರು. ಇದೀಗ ಮತ್ತೊಮ್ಮೆ ಅನಸೂಯಾ ಟ್ರೋಲಿಗರಿಗೆ ಚಾಟಿ ಬೀಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅನಸೂಯಾ ಭಾರದ್ವಾಜ್‌ ಹೇಳಿದ್ದ ಮಾತುಗಳು ವೈರಲ್ ಆಗಿವೆ. 

ಇದನ್ನೂ ಓದಿ : ಕ್ರೀಮ್‌ ವೈಟ್‌ ಲೆಹೆಂಗಾದಲ್ಲಿ ಯಂಗಾಗಿ ಕಣ್ಮನ ಸೆಳೆಯುತ್ತಿರುವ ಸೌತ್‌ ಸುಂದರಿ: ಶ್ರೀಯಾ ಶರಣ್‌ 

ಆಂಟಿ ಎಂಬ ಪದ ಬಳಕೆ ತಪ್ಪಲ್ಲ. ಮಕ್ಕಳು ಆಂಟಿ ಎಂದು ಕರೆದರೆ ತೊಂದರೆ ಇಲ್ಲ. ಆದರೆ ಅದೇ ವಯಸ್ಸಿನವರು ಸಹ ಉದ್ದೇಶಪೂರ್ವಕವಾಗಿ ಅಗೌರವದ ಪದವನ್ನು ಬಳಸುತ್ತಿದ್ದಾರೆ. ಈ ರೀತಿ ಮಹಿಳೆಯರ ಮೇಲೆ ದ್ವೇಷ ತೋರಿಸುವುದು ಅಪರಾಧ ಎಂದು ಹೇಳಿದರು.

ನನ್ನ ವಯಸ್ಸಿನವರನ್ನು ಆಂಟಿ ಎಂದು ಕರೆಯುವುದು ಬೇರೆ ರೀತಿಯಲ್ಲಿ. ಅದು ನನಗೆ ಇಷ್ಟವಿಲ್ಲ. ಇನ್ನೊಬ್ಬರ ಮನಸ್ಸಿಗೆ ಮನಸಿಗೆ ನೋವು  ಏಕೆ ಮಾಡಬೇಕು? ಪೈಶಾಚಿಕ ಸಂತೋಷ ಪಡುವುದಾದರೂ ಯಾಕೆ? ಅವರು ತನ್ನ ಸುತ್ತಲಿನ ಮಹಿಳೆಯರನ್ನು ಹೇಗೆ ನೋಡಬಹುದು? ಮುಂದೆ ಇಂಥವರೇ ಅತ್ಯಾಚಾರಿಗಳಾಗೋದು ಎಂದು ಅನಸೂಯಾ ಹೇಳಿದ್ದಾರೆ. 

ಇದನ್ನೂ ಓದಿ : ಆ ಕನ್ನಡ ಚಿತ್ರದಲ್ಲೇ ನಟಿಸಬೇಕಿತ್ತು ಅನುಷ್ಕಾ ಶೆಟ್ಟಿ, ಆದರೇ....! 

'ಪುಷ್ಪ: ದಿ ರೈಸ್', 'ಪುಷ್ಪ: ದಿ ರೂಲ್' ಜೊತೆಗೆ, ಅನಸೂಯಾ 'ಫ್ಲ್ಯಾಷ್‌ಬ್ಯಾಕ್', 'ಮೈಕೆಲ್', 'ಖಿಲಾಡಿ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಅನಸೂಯಾ ಹೆಸರು ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More