Home> Entertainment
Advertisement

House Party: ಹೌಸ್ ಪಾರ್ಟಿ ಮಾಡೋರಿಗೆ ಸಿಹಿ ಸುದ್ದಿ, ರಿಲೀಸ್ ಆಯ್ತು ಆಲ್ ಓಕೆ ನ್ಯೂ ಸಾಂಗ್!

House Party: ಹೌಸ್ ಪಾರ್ಟಿ ಮಾಡೋರಿಗೆ ಸಿಹಿ ಸುದ್ದಿ ಸಿಕ್ಕಿದೆ.. ಆಲ್ ಓಕೆ ಅವರ ಹೊಸ ಪಾರ್ಟಿ ಸಾಂಗ್‌ ರಿಲೀಸ್‌ ಆಗಿದೆ.. ಈ ಹಾಡಿನ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ ಅಲೋಕ್ ಬಾಬು.. 

House Party: ಹೌಸ್ ಪಾರ್ಟಿ ಮಾಡೋರಿಗೆ ಸಿಹಿ ಸುದ್ದಿ, ರಿಲೀಸ್ ಆಯ್ತು ಆಲ್ ಓಕೆ ನ್ಯೂ ಸಾಂಗ್!

ಒಂದು ಕಾಲದಲ್ಲಿ ಪಾರ್ಟಿಗಳಲ್ಲಿ ಪರಭಾಷೆಯ ಹಾಡುಗಳನ್ನು ಡಿಜೆಯಾಗಿ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಕನ್ನಡದ ರ್ಯಾಪ್‌ ಸಾಂಗ್ (Kannada Rap Songs).‌ ಡಿಜೆ ಗಳು ಬಂದಿವೆ. ಕನ್ನಡದ ಕೆಲವು ಪ್ರತಿಭೆಗಳು ಇದಕ್ಕೆ ಮುಖ್ಯ ಕಾರಣ. ಆ ಪೈಕಿ ಅಲೋಕ್​ (Alok Babu) ಕೂಡ ತುಂಬ ಫೇಮಸ್​. 

ಇದನ್ನೂ ಓದಿ:ಟ್ರೋಲ್ ಆಯ್ತು ಉಪೇಂದ್ರ ಹೊಸ ಡಿಪಿ! ಉಪ್ಪಿ ಹೊಸ ಅವತಾರ ಕಂಡು ದಂಗಾದ ಫ್ಯಾನ್ಸ್..

ಆಲ್​​ ಓಕೆ (All Ok) ಎಂಬ ಹೆಸರಿನಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಅವರು ಈಗಾಗಲೇ ಅನೇಕ ಹಿಟ್​ ಹಾಡುಗಳನ್ನು ನೀಡಿದ್ದಾರೆ. ‘ಡೋಂಟ್​ ವರಿ’, ‘ಹ್ಯಾಪಿ ಆಗಿದೆ’, ‘ಮಾರಮ್ಮನ ಡಿಸ್ಕೋ’, ‘ಯಾಕಿಂಗೆ ಮಗಾ ಯಾಕಿಂಗೆ’ ಮುಂತಾದ ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಅದರಿಂದಾಗಿ ಆಲ್​ ಓಕೆ ಯಶಸ್ಸು ಪಡೆದುಕೊಂಡರು. 

ಈಗ ಅವರು ಒಂದು ಹೊಸ ಪಾರ್ಟಿ ಸಾಂಗ್‌ (Party Song) ಅನ್ನು ರಿಲೀಸ್‌ ಮಾಡಿದ್ದಾರೆ. ಅದೆ ಹೌಸ್‌ ಪಾರ್ಟಿ ಸಾಂಗ್‌. ಈ ಹಾಡು ಮನೆಯಲ್ಲಿ ಪಾರ್ಟಿ ಮಾಡುವ ಪ್ರತಿಯೊಬ್ಬರಿಗೂ ಹೇಳಿ ಮಾಡಿಸಿದಂತಿದೆ. ಗೋಕರ್ಣದಲ್ಲಿ (Gokarna) ಈ ಸಾಂಗ್‌ ಅನ್ನು ಶೂಟ್‌ ಮಾಡಲಾಗಿದ್ದು, ಸಖತ್‌ ಆಗಿ ಮೂಡಿಬಂದಿದೆ. 

ಇದನ್ನೂ ಓದಿ:RRR ರಿಲೀಸ್‌ಗೆ ಕ್ಷಣಗಣನೆ.. ಸಿನಿಮಾ ವಿರುದ್ಧ ಕನ್ನಡಿಗರ ಆಕ್ರೋಶಕ್ಕೆ ಕಾರಣವೇನು?

ಯೂಟ್ಯೂಬ್​ನಲ್ಲಿ ಆಲ್​ ಓಕೆ  ಆಫಿಸಿಯಲ್‌ ಚಾನಲ್‌ನಲ್ಲಿ ಈ ಸಾಂಗ್ ಬಿಡುಗಡೆಯಾಗಿದೆ. ಅಲೋಕ್​ ಅಭಿಮಾನಿಗಳು ಈ ಹಾಡನ್ನು ಇಷ್ಟಪಟ್ಟಿದ್ದಾರೆ. ಈ ಗೀತೆಯ ಇನ್ನೊಂದು ವಿಶೇಷ ಅಂದರೆ ಕನ್ನಡಕ್ಕೆ ಹೊಸ ಬೆಡಗಿ ಅದ್ವಿಕಾ ಎಂಟ್ರಿ. ಈ ಹಾಡಿನ ಮೂಲಕ ಅದ್ವಿಕಾ (Adhvika) ಅವರನ್ನು ಇಂಟ್ರಡ್ಯೂಸ್‌ ಮಾಡಲಾಗಿದೆ. 

ಒಟ್ಟಿನಲ್ಲಿ ಸೂಪರ್‌ ಡೂಪರ್‌ ಆಗಿ ಈ ಪಾರ್ಟಿ ಸಾಂಗ್‌ (House Party Song) ರೆಡಿಯಾಗಿ, ರಿಲೀಸ್‌ ಆಗಿದ್ದು, ಆಲ್‌ ಓಕೆ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More