Home> Entertainment
Advertisement

Allu Arjun: ಇನ್‌ಸ್ಟಾದಲ್ಲಿ ಅಲ್ಲು ಅರ್ಜುನ್ ಸೀಕ್ರೇಟ್‌ ಅಕೌಂಟ್‌.! ಇದು ವಿಶೇಷ ಸ್ನೇಹಿತರಿಗಷ್ಟೇ ಮೀಸಲು?

Allu Arjun Secret Instagram Account: ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದ ಟೀಸರ್‌ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಸಿನಿಮಾದ ಮೇಲಿನ ನಿರೀಕ್ಷೆ ಅಭಿಮಾನಿಗಳಲ್ಲಿ ದುಪ್ಪಟ್ಟಾಗಿದೆ. 

Allu Arjun: ಇನ್‌ಸ್ಟಾದಲ್ಲಿ ಅಲ್ಲು ಅರ್ಜುನ್ ಸೀಕ್ರೇಟ್‌ ಅಕೌಂಟ್‌.! ಇದು ವಿಶೇಷ ಸ್ನೇಹಿತರಿಗಷ್ಟೇ ಮೀಸಲು?

Allu Arjun Secret Instagram Account: ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಇತ್ತೀಚೆಗೆ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹುಟ್ಟುಹಬ್ಬದ ಪ್ರಯುಕ್ತ ನಟನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಅದೇ ಹೊತ್ತಿಗೆ ಅವರ ‘ಪುಷ್ಪ 2’ ಚಿತ್ರದ ಟೀಸರ್‌ ಕೂಡ ರಿಲೀಸ್‌ ಆಗಿದ್ದು, ಸಖತ್‌ ಹವಾ ಕ್ರಿಯೇಟ್‌ ಮಾಡಿದೆ. ಸಾಮಾನ್ಯವಾಘಿ ಸಿನಿ ಸ್ಟಾರ್‌ಗಳು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಜೀವನದ ಆಗುಹೋಗುಗಳ ಟಪ್‌ಡೇಟ್‌ ನೀಡ್ತಾರೆ. ಇಲ್ಲಿ ಅವರಿಗೆ ಪ್ರೈವೆಸಿ ತುಂಬಾ ಕಡಿಮೆ. ಅನೇಕ ಅನುಯಾಯಿಗಳನ್ನು ಹೊಂದುವ ಕಾರಣ ವೈಯಕ್ತಿಕವಾಗಿ ಬಳಸಲು ಕೊಂಚ ಕಷ್ಟವಾಗಬಹುದು. 

ವರದಿಯ ಪ್ರಕಾರ, ಅಲ್ಲು ಅರ್ಜುನ್ Instagram ನಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರಂತೆ. ನೀವು ಅವರ ಒಂದು ಅಕೌಂಟ್‌ನ್ನು ಈಗಾಗಲೇ ಫಾಲೋ ಮಾಡುತ್ತಿರಬೇಕು. ಆದರೆ ಅವರು ಇನ್ನೊಂದು ಇನ್‌ಸ್ಟಾಗ್ರಾಮ್‌ ಅಕೌಂಟ್‌ ಹೊಂದಿದ್ದು, ಅದನ್ನು ರಹಸ್ಯವಾಗಿಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ವರದಿಯಲ್ಲಿ ಅಲ್ಲು ಅರ್ಜುನ್ ಮಾತ್ರವಲ್ಲ, ಇನ್ನೂ ಅನೇಕ ಸೌತ್ ಮತ್ತು ಬಾಲಿವುಡ್ ಸ್ಟಾರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ರಹಸ್ಯ ಖಾತೆಯನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಅದು ಅಭಿಮಾನಿಗಳಿಗೆ ತಿಳಿದಿಲ್ಲ. ಅಲ್ಲು ಅರ್ಜುನ್ ತಮ್ಮ ರಹಸ್ಯ ಇನ್‌ಸ್ಟಾಗ್ರಾಮ್‌ ಖಾತೆಯಿಂದ ತಮ್ಮ ವಿಶೇಷ ಸ್ನೇಹಿತರೊಂದಿಗೆ ಚಿಟ್ ಚಾಟ್ ಮಾಡುತ್ತಾರಂತೆ ಎನ್ನಲಾಗಿದೆ. 

 

 

ಇದನ್ನೂ ಓದಿ: ರಾಧಿಕಾ ಪಂಡಿತ್‌ ಅವರ Personal Photographer ಇವರೇ.! ಸಿಕ್ಕಾಪಟ್ಟೆ ಫೇಮಸ್‌ ಈ ವ್ಯಕ್ತಿ

ಅಲ್ಲು ಅರ್ಜುನ್ ಅಭಿಮಾನಿಗಳು Instagram ನಲ್ಲಿ ಅವರ ರಹಸ್ಯ ಖಾತೆಯನ್ನು ಹುಡುಕಲು ಪ್ರಾರಂಭಿಸಿರಬೇಕು. ಈ ಖಾತೆಯಲ್ಲಿ ನಟ ಎಲ್ಲಾ ರೀತಿಯ ವಿಷಯಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಮತ್ತೊಂದೆಡೆ, ಅವರ ಅಧಿಕೃತ Instagram ಖಾತೆಯಲ್ಲಿ, ನೀವು ಅವರ ವೃತ್ತಿಪರ ವೈಯಕ್ತಿಕ ಜೀವನದ ಫೋಟೋಗಳು ಮತ್ತು ವೀಡಿಯೊಗಳನ್ನು ನೋಡುತ್ತೀರಿ, ಇದನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. 

ಅಲ್ಲು ಅರ್ಜುನ್ ಅವರ 'ಪುಷ್ಪ: ದಿ ರೂಲ್' ಚಿತ್ರದ ಫಸ್ಟ್ ಲುಕ್ ಅಂತರ್ಜಾಲದಲ್ಲಿ ಬಿರುಗಾಳಿಯನ್ನು ಹುಟ್ಟುಹಾಕಿದೆ. ಸುಕುಮಾರ್ ನಿರ್ದೇಶನದ 'ಪುಷ್ಪ 2' ಚಿತ್ರದ ಟೀಸರ್ 'ಪುಷ್ಪಾ ಎಲ್ಲಿ?' ಇದು ಚಿತ್ರದ ಎರಡನೇ ಭಾಗ ತುಂಬಾ ಆಸಕ್ತಿದಾಯಕವಾಗಿರುವುದನ್ನು ಸಾಬೀತುಪಡಿಸುತ್ತದೆ.

ಅಲ್ಲು ಅರ್ಜುನ್, ಫಹದ್ ಫಾಸಿಲ್, ರಶ್ಮಿಕಾ ಮಂದಣ್ಣ, ಧನಂಜಯ್, ರಾವ್ ರಮೇಶ್, ಸುನೀಲ್, ಅನಸೂಯಾ ಭಾರದ್ವಾಜ್ ಮತ್ತು ಅಜಯ್ ಘೋಷ್ ಅವರಂತಹ ಕಲಾವಿದರು 'ಪುಷ್ಪ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ 2024 ರಲ್ಲಿ ಚಿತ್ರಮಂದಿರಗಳಲ್ಲಿ ಬರಲಿದೆ. 

ಇದನ್ನೂ ಓದಿ: Kiccha Sudeep: ಸುದೀಪ್ ಸಿನಿಮಾ, ಜಾಹೀರಾತುಗಳ ಪ್ರದರ್ಶನಕ್ಕೆ ಚುನಾವಣಾ ಆಯೋಗ ಅನುಮತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More