Home> Entertainment
Advertisement

Pushpa 2: ರಾಕಿಬಾಯ್ ದಾಖಲೆ ಬ್ರೇಕ್‌ ಮಾಡ್ತಾರಾ ಪುಷ್ಪರಾಜ್? ಆ ವಿಷಯದಲ್ಲಿ ಯಾರು ಮೇಲುಗೈ!

Pushpa 2 vs KGF 2 : ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬದಂದು 'ಪುಷ್ಪ 2' ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. 

Pushpa 2: ರಾಕಿಬಾಯ್ ದಾಖಲೆ ಬ್ರೇಕ್‌ ಮಾಡ್ತಾರಾ ಪುಷ್ಪರಾಜ್? ಆ ವಿಷಯದಲ್ಲಿ ಯಾರು ಮೇಲುಗೈ!

Pushpa 2 teaser: ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬದಂದು 'ಪುಷ್ಪ 2' ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆಗಳಿವೆ. ಪ್ಯಾನ್ ಇಂಡಿಯಾ ಚಿತ್ರ ಪುಷ್ಪ 2 ಬಿಡುಗಡೆಗೂ ಮುನ್ನ ನಡೆಯುವ ಪ್ರಚಾರಗಳಿಗೆ ಈ ಟೀಸರ್ ವೇದಿಕೆಯಾಗಲಿದೆ. ಕೆಜಿಎಫ್ 2 ಮತ್ತು ಪುಷ್ಪ 2 ಬಾಕ್ಸ್ ಆಫೀಸ್‌ನಲ್ಲಿ ಘರ್ಷಣೆ ಮಾಡದಿದ್ದರೂ, ಕೆಜಿಎಫ್ 2 ರ ಸಾರ್ವಕಾಲಿಕ ದಾಖಲೆಯು ಚರ್ಚೆಯ ವಿಷಯವಾಗಿದೆ. ಕೆಜಿಎಫ್ 2 ಟೀಸರ್ ಇದುವರೆಗೆ 275 ಮಿಲಿಯನ್ ವೀಕ್ಷಣೆ ಪಡೆದಿದ್ದು, ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಲೈಕ್‌ ಪಡೆದ ಟೀಸರ್ ಆಗಿದೆ. ಈ ಟೀಸರ್ ಗೆ ಹತ್ತಿರವಾದ ಯಾವುದೇ ಭಾರತೀಯ ಸಿನಿಮಾ ಟೀಸರ್ ಇಲ್ಲ ಇನ್ನೊಂದಿಲ್ಲ.

ಇದನ್ನೂ ಓದಿ: Star Heroine: ಮದುವೆಗೂ ಮುನ್ನವೇ ಈ ಸ್ಟಾರ್ ಹೀರೋಯಿನ್ ಪ್ರೆಗ್ನೆಂಟ್‌? ಸೀಮಂತದ ಫೋಟೋ ವೈರಲ್! 

ಇದರೊಂದಿಗೆ ಯೂಟ್ಯೂಬ್‌ನಲ್ಲಿ ಪುಷ್ಪ 2 ಇದೀಗ ಕೆಜಿಎಫ್ 2 ಸಾರ್ವಕಾಲಿಕ ದಾಖಲೆಯನ್ನು ಮುಟ್ಟಬಹುದೇ ಎಂಬ ಪ್ರಶ್ನೆ ಹಾಟ್ ಟಾಪಿಕ್ ಆಗಿದೆ. ಆದರೆ ಪುಷ್ಪಾ ಚಿತ್ರ ನಿರೀಕ್ಷೆಗೂ ಮೀರಿ ಹಿಟ್ ಆಗಿದ್ದು ಅಲ್ಲು ಅರ್ಜುನ್ ಅಭಿನಯವೇ ಹೈಲೈಟ್ ಆಗಿರುವುದರಿಂದ ಈ ದಾಖಲೆಯನ್ನು ಮುರಿಯಲೂಬಹುದು ಎಂದು ಸಿನಿ ವಿಮರ್ಶಕರು ಊಹಿಸಿದ್ದಾರೆ. ಯೂಟ್ಯೂಬ್ ವೀಕ್ಷಣೆಗಳು ಒಂದು ರೀತಿಯಲ್ಲಿ ಚಲನಚಿತ್ರದ ವ್ಯಾಪ್ತಿಯನ್ನು ಹೆಚ್ಚಿಸುತ್ತವೆ. ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಉಂಟುಮಾಡುತ್ತವೆ. ಚಿತ್ರಕ್ಕೆ ಇದೊಂದು ದೊಡ್ಡ ಮೈಲಿಗಲ್ಲು. ಕೆಜಿಎಫ್ 2 ವಿಚಾರದಲ್ಲಿ ಇದು ಸಾಬೀತಾಗಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಸಾಕ್ಷಿಯಾಗಿದೆ. 

ಯಶ್ ನಾಯಕನಾಗಿ ನಟಿಸಿರುವ ಕೆಜಿಎಫ್ ಮತ್ತು ಕೆಜಿಎಫ್ 2 ಚಿತ್ರಗಳು ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಅದ್ಭುತವಾಗಿ ಪ್ರಭಾವಿಸಿವೆ. ಯಶ್ ಅವರ ಅಭಿನಯ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ಉನ್ನತ ಮಟ್ಟದ ಟೇಕಿಂಗ್ ದೊಡ್ಡ ಕಲೆಕ್ಷನ್ ಗೆ ಕಾರಣವಾಯಿತು. ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್‌ನ ಪುಷ್ಪ ಸಿನಿಮಾ ಕೂಡ ಅಷ್ಟೇ ಪ್ರಭಾವಶಾಲಿಯಾಗಿತ್ತು. ಆದರೆ ಈಗ ಎಲ್ಲರ ಕಣ್ಣು ಪುಷ್ಪಾ2 ಮೇಲೆ ನೆಟ್ಟಿದೆ. ಈ ಸಿನಿಮಾ ಕೆಜಿಎಫ್ 2 ಟೀಸರ್‌ ದಾಖಲೆ ಮುರಿಯಲಿದೆಯೇ? ಎಂದು ಚರ್ಚಿಸಲಾಗುತ್ತಿದೆ.

ಇದನ್ನೂ ಓದಿ: ಬ್ಲಡ್ ಶುಗರ್‌ ಬೆಳಿಗ್ಗೆ ಹೆಚ್ಚಾಗುತ್ತಾ? ಈ ಹಸಿರು ರಸ ಮಧುಮೇಹಕ್ಕೆ ದಿವೌಷಧಿ.. ಕೂಡಲೇ ನಿಯಂತ್ರಣಕ್ಕೆ ಬರುತ್ತೆ ಸಕ್ಕರೆ ಮಟ್ಟ! ಸೇವಿಸುವ ವಿಧಾನ ಹೀಗಿರಬೇಕು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More