Home> Entertainment
Advertisement

ಮನೆಕೆಲಸದವಳ ಇನ್ಸ್ಟಾ ಫಾಲೋವರ್ಸ್ ಹೆಚ್ಚಿಸಿಲು ಮುಂದೆ ಬಂದ ಅಲ್ಲು ಅರ್ಜುನ್!

Allu Arjun: ಟಾಲಿವುಡ್‌ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಸಿಯಾಗಿರುವ ಈ ನಟ ತಮ್ಮ ಮನೆಯ ಕೆಲಸದೌಳ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌  ಹೆಚ್ಚಿಸಿಕೊಳ್ಳಲು ಸಹಾಯ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್‌ ಆಗಿದೆ.
 

ಮನೆಕೆಲಸದವಳ ಇನ್ಸ್ಟಾ ಫಾಲೋವರ್ಸ್ ಹೆಚ್ಚಿಸಿಲು ಮುಂದೆ ಬಂದ ಅಲ್ಲು ಅರ್ಜುನ್!

Allu Arjun Helped His Housekeeper: ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ ಸ್ಟೈಲಿಶ್ ಸ್ಟಾರ್ ನಿಂದ ಐಕಾನ್ ಸ್ಟಾರ್ ಆಗಿ, ತಮ್ಮದೇ ಸ್ಟೈಲ್​ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಸದ್ಯ  ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಐಕಾನ್‌ ಸ್ಟಾರ್‌, ಸದ್ಯ  100ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿಗೆ ಸೇರಿದ್ದಾರೆ. ಇದೆಲ್ಲದರ ಜೊತೆಗೆ ಇತರರಿಗೆ ಸಹಾಯ ಮಾಡುವುದರಲ್ಲಿ ಅಲ್ಲು ಅರ್ಜುನ್ ಮುಂಚೂಣಿಯಲ್ಲಿದ್ದು, ಇತ್ತೀಚೆಗಷ್ಟೇ ಈ ನಟ ಇನ್ಸ್ಟಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಮನೆ ಕೆಲಸದಾಕೆಗೆ ಸಹಾಯ ಮಾಡಿದ್ದಾರೆ. 

ಹೌದು.. ನಟ ಅಲ್ಲು ಅರ್ಜುನ್‌ ದೊಡ್ಡ ಸ್ಟಾರ್ ಆಗಿದ್ರೂ ಯಾವುದೇ ಅಹಂಕಾರವಿಲ್ಲದೆ ಹುಡುಗಿಗಾಗಿ ವಿಡಿಯೋ ಮಾಡಿ, ಹಾಗೆ ಆ ವಿಡಿಯೋದಲ್ಲಿ ಹುಡುಗಿ ಜೊತೆ ಅಲ್ಲು ಇರುವ ಸೆಲ್ಫಿ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಅಲ್ಲು ಅರ್ಜುನ್.. ನಿಮಗೆ ತುಂಬಾ ಫಾಲೋವರ್ಸ್ ಬರಬೇಕಾದರೆ ಒಳ್ಳೆ ವಿಡಿಯೋ ಮಾಡಿದರೆ ಪರವಾಗಿಲ್ಲ, ಎಷ್ಟು ಫಾಲೋವರ್ಸ್ ಬೇಕು? ಈಗ ಎಷ್ಟು ಮಂದಿ ಇದ್ದಾರೆ ಎಂದು ಕೇಳಿದಕ್ಕೆ, ಆ ಹುಡುಗಿ 13 ಸಾವಿರ ಎಂದಿದ್ದಾರೆ. ಬಳಿಕ ಎಷ್ಟು ಮಂದಿ ಫಾಲೋವರ್ಸ್ ಬೇಕು ಎಂದಿದಕ್ಕೆ, ಆ ಹುಡುಗಿ 30 ಸಾವಿರ ಅಂದಿದ್ದಾರೆ. ಈ ವಿಡಿಯೋ ಹಾಕಿಕೊಂಡ್ರೆ ಬರುತ್ತಾ ಎಂದು ಅಲ್ಲು ಅರ್ಜುನ್ ಪ್ರಶ್ನೆ ಮಾಡಿದ್ರೆ ಹುಡುಗಿ ಹೌದು ಎಂದಿದ್ದಾರೆ.

ಇದನ್ನೂ ಓದಿ: ಗೌತಮ್ ಗಂಭೀರ್ ನನ್ನ ಹಿಂದೆ ಬಿದ್ದಿದ್ದ, ಇರ್ಫಾನ್‌ ಡೇಟ್‌ ಮಾಡ್ತಿದ್ದ.. ಪಾಯಲ್ ಘೋಷ್‌ ಹೊಸ ಬಾಂಬ್!

ಹುಡುಗಿ ತನ್ನ ಇನ್ಸ್ಟಾಗ್ರಾಮ್​ನಲ್ಲಿ ಅಲ್ಲು ಅರ್ಜುನ್ ಜೊತೆಗಿನ ವಿಡಿಯೋ ಶೇರ್ ಮಾಡುತ್ತಿದ್ದಂತೆ ಪೋಸ್ಟ್ ವೈರಲ್ ಆಗಿ, ಸ್ಟೈಲಿಶ್‌ ಸ್ಟಾರ್‌ನ ಈ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ನಟನ ಒಳ್ಳೆ ಮನಸ್ಸಿಗೆ ಎಷ್ಟೇ ಮೆಚ್ಚುಗೆ ನೀಡಿದರೂ ಕಡಿಮೆಯೇ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.  ಅಭಿಮಾನಿಗಳಿಗೆ ಆದ್ಯತೆ ನೀಡುವ ಏಕೈಕ ನಾಯಕ ಅಲ್ಲು ಅರ್ಜುನ್‌ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.ಈ ಹುಡುಗಿ ಅಲ್ಲು ಅರ್ಜುನ್​ ಮನೆಯಲ್ಲೇ ಕೆಲಸ ಮಾಡುವ ಹುಡುಗಿ ಎನ್ನಲಾಗ್ತಿದೆ.

ಅಲ್ಲು ಅರ್ಜುನ್ ‘ಪುಷ್ಪ 2’ ಸಿನಿಮಾ ಶೂಟಿಂಗ್​ ನಲ್ಲಿ ಬ್ಯುಸಿ ಆಗಿದ್ದು, ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಗಿದ್ದಂತೆ, ‘ಪುಷ್ಪ 2’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರ ಮುಂದಿನ ವರ್ಷ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಅಲ್ಲು ಅರ್ಜುನ್ ಇತ್ತೀಚೆಗಷ್ಟೇ ಪುಷ್ಪ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಸದ್ಯ ‘ಪುಷ್ಪ 2’ ಶೂಟಿಂಗ್ ನಡೆಯುತ್ತಿದ್ದು, ಪುಷ್ಪ ಚಿತ್ರಕ್ಕೆ ಅಲ್ಲು ಅರ್ಜುನ್ 100 ಕೋಟಿಗೂ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರಂತೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Read More