Home> Entertainment
Advertisement

Sitara Ghattamaneni : ಆಲಿಯಾ ಭಟ್‌ ಕಳುಹಿಸಿದ ಬಟ್ಟೆ ತೊಟ್ಟು ಮಿಂಚಿದ ʼಮಹೇಶ್‌ ಬಾಬು ಪುತ್ರಿʼ..!  

Mahesh babu Daughter : ಸ್ಟಾರ್‌ ಕಿಡ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವುದು ಹೊಸ ಸುದ್ದಿಯೇನಲ್ಲ ಆದ್ರೆ, ಅಲ್ಲಿ ಅವರು ಎಷ್ಟು ಜನ ಪ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ, ಜನರು ಅವರನ್ನು ಎಷ್ಟು ಗೌರವದಿಂದ ಕಾಣುತ್ತಾರೆ ಎನ್ನವುದು ಮ್ಯಾಟರ್‌ ಆಗುತ್ತೆ. ಈ ವಿಚಾರದಲ್ಲಿ ಮಹೇಶ್‌ ಬಾಬು ಪುತ್ರಿ ತಂದೆಯಷ್ಟೇ ಗೌರವವನ್ನು ಪಡೆಯುತ್ತಿದ್ದಾರೆ. 

Sitara Ghattamaneni : ಆಲಿಯಾ ಭಟ್‌ ಕಳುಹಿಸಿದ ಬಟ್ಟೆ ತೊಟ್ಟು ಮಿಂಚಿದ ʼಮಹೇಶ್‌ ಬಾಬು ಪುತ್ರಿʼ..!  

Sitara Ghattamaneni : ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಪುತ್ರಿ ಸಿತಾರ ಘಟ್ಟಮನೇನಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾಳೆ. ಮಹೇಶ್‌ ಬಾಬುಗೆ ಅವರ ಅಭಿಮಾನಿಗಳು ಎಷ್ಟು ಪ್ರೀತಿ ಕೊಡ್ತಾರೋ ಅಷ್ಟೇ ಪ್ರೀತಿಯನ್ನು ಸಿತಾರಾಗೂ ನೀಡ್ತಾರೆ. ಇನ್ನು ಈ ಸ್ಟಾರ್‌ ಕಿಡ್‌ ಬಾಲಿವುಡ್‌ ತಾರೆ ಆಲಿಯಾ ಭಟ್‌ಗೂ ಕೂಡ ತುಂಬಾ ಇಷ್ಟ. ಅದಕ್ಕಾಗಿ ಅವರು ಅಗಾಗ ಸಿತಾರಾಗೆ ಗಿಫ್ಟ್‌ಗಳನ್ನು ಕಳುಹಿಸುತ್ತಿರುತ್ತಾರೆ.

ಹೌದು.. ಸ್ಟಾರ್‌ ಕಿಡ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವುದು ಹೊಸ ಸುದ್ದಿಯೇನಲ್ಲ ಆದ್ರೆ, ಅಲ್ಲಿ ಅವರು ಎಷ್ಟು ಜನ ಪ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ, ಜನರು ಅವರನ್ನು ಎಷ್ಟು ಗೌರವದಿಂದ ಕಾಣುತ್ತಾರೆ ಎನ್ನವುದು ಮ್ಯಾಟರ್‌ ಆಗುತ್ತೆ. ಈ ವಿಚಾರದಲ್ಲಿ ಮಹೇಶ್‌ ಬಾಬು ಪುತ್ರಿ ತಂದೆಯಷ್ಟೇ ಗೌರವವನ್ನು ಪಡೆಯುತ್ತಿದ್ದಾರೆ. ಅಲ್ಲದೆ, ನೆಟ್ಟಿಗರು ಈ ಟ್ಯಾಲೆಂಡ್‌ ಬೇಬಿಯ ಪೋಸ್ಟ್‌ಗಳಿಗೆ ಪ್ರೀತಿಯಿಂದ ಕಾಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ಸಹ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಹೈಕೋರ್ಟ್‌ ಮೆಟ್ಟಿಲೇರಿದ ʼಐಶ್ವರ್ಯಾ ಪುತ್ರಿ..! ಬಚ್ಚನ್‌ ವಂಶ ಕುಡಿಗೆ ಆಗಿದ್ದೇನು..

ಇದೀಗ ಸಿತಾರಾ ಆಲಿಯಾ ಭಟ್‌ ಕಳುಹಿಸಿರುವ ಬಟ್ಟೆ ಬಾಡಿಕಾನ್‌ ಡ್ರೇಸ್‌ನಲ್ಲಿ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಸಿತಾರಾ ಅಂದಕ್ಕೆ ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು, ತಂದೆಯಂತೆ ಬಣ್ಣ, ಅಮ್ಮನಂತೆ ಕ್ಯೂಟ್‌ ಅಂತ ಕಾಮೆಂಟ್‌ ಮೂಲಕ ಹೊಗಳುತ್ತಿದ್ದಾರೆ. ಆದ್ರೆ, ಕೆಲವರಿಗೆ ಸಿತಾರಾ ಅವತಾರ ನೋಡಿ ನೋವಾಗಿದೆಯಂತೆ. ಅದಕ್ಕೆ ಅವರು, ಇಂತಹ ಬಟ್ಟೆಗಳನ್ನು ಧರಿಸಬೇಡಿ.. ನಿಮ್ಮ ಅಣ್ಣ ಎಷ್ಟು ಸಿಂಪಲ್ ಮತ್ತು ಡಿಸೆಂಟ್‌ ಆಗಿದ್ದಾರೆ ನೋಡಿ. ಹಾಗೇ ಇರಿ ಅಂತ ಮನವಿ ಮಾಡಿದ್ದಾರೆ.

ಮಹೇಶ್‌ ಬಾಬು ಪುತ್ರ ಗೌತಮ್ ಸಾಮಾಜಿಕ ಜಾಲತಾಣಗಳಿಂದ ದೂರ ಇರುತ್ತಾರೆ. ಆದ್ರೆ ಸಿತಾರ ಸಖತ್‌ ಆಕ್ಟಿವ್‌ ಗರ್ಲ್‌, ಆಗಾಗ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುತ್ತಿರುತ್ತಾರೆ. ಇದೀಗ ತುಂಡು ಬಟ್ಟೆ ಹಾಕಿದ್ದಕ್ಕೆ ಕೆಲ ನೆಟ್ಟಿಗರು ಸಿತಾರಗೆ ಪಾಠ ಮಾಡಿದ್ದು, ಇದಕ್ಕೆ ತಾಯಿ ನಮ್ರತಾ ಇಲ್ಲ ಮಹೇಶ್ ಬಾಬು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More