Home> Entertainment
Advertisement

ಸೂಪರ್‌ ಸ್ಟಾರ್‌ ನಟ ಅಜಿತ್ ಕುಮಾರ್‌​ ಕಾರು ಭೀಕರ ಅಪಘಾತ..! ಇನ್ನೊಬ್ಬ ನಟನ ಕತ್ತಿಗೆ ಗಾಯ.. ಹೇಗಿದೆ ʼತಲಾʼ ಆರೊಗ್ಯ

Vidaa Muyarchi Shooting Accident Viral Video Video : ತಮಿಳು ಸೂಪರ್‌ ಸ್ಟಾರ್‌ ನಟ ಅಜಿತ್ ಕುಮಾರ್ ಕಾರು ಅಪಘಾತಕ್ಕೀಡಾಗಿದೆ. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಧ್ಯ ತಲಾ ಅಜಿತ್‌ ಸ್ಥೀತಿ ಹೇಗಿದೆ..? ಅಪಘಾತಕ್ಕೆ ಕಾರಣವೇನು..? ಈ ಕುರಿತ ವರದಿ ಇಲ್ಲಿದೆ..

ಸೂಪರ್‌ ಸ್ಟಾರ್‌ ನಟ ಅಜಿತ್ ಕುಮಾರ್‌​ ಕಾರು ಭೀಕರ ಅಪಘಾತ..! ಇನ್ನೊಬ್ಬ ನಟನ ಕತ್ತಿಗೆ ಗಾಯ.. ಹೇಗಿದೆ ʼತಲಾʼ ಆರೊಗ್ಯ

Ajith kumar car accident : ಕಾಲಿವುಡ್‌ ಸ್ಟಾರ್‌ ನಟ ಅಜಿತ್‌ ಕುಮಾರ್‌ ಅಭಿನಯದ ಚಿತ್ರ ʼವಿದಾಮುಯಾರ್ಚಿʼ (Vidaamuyarchi ) ಚಿತ್ರದ ಶೂಟಿಂಗ್ ಕೆಲ ತಿಂಗಳ ಹಿಂದೆ ಅಜರ್ ಬೈಜಾನ್ ನಲ್ಲಿ ನಡೆದಿತ್ತು. ಆ ವೇಳೆ ಅವರು ಚಾಲನೆ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಈ ಕುರಿತ ದೃಶ್ಯಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..

ಈ ವಿಡಿಯೋವನ್ನು ನಟ ಅಜಿತ್ ಅವರ ಆಪ್ತ ಸಹಾಯಕ ಸುರೇಶ್ ಚಂದ್ರ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಪಘಾತ ಹೇಗೆ ಸಂಭವಿಸಿತು ಎಂಬುವುದನ್ನು ತಿಳಿಸಲಾಗಿದೆ. ಒಂದು ಅಜಿತ್-ಆರವ್ ಪ್ರಯಾಣಿಸುವ ಕಾರಿನೊಳಗಿನ ಕ್ಯಾಮೆರಾ, ಇನ್ನೊಂದು ಡ್ರೋನ್ ಕ್ಯಾಮೆರಾ, ಮತ್ತೊಂದು ಲಾಂಗ್ ಶಾಟ್ ಕ್ಯಾಮೆರಾದಲ್ಲಿ ಕಾರಿನ ಅಪಘಾತದ ದೃಶ್ಯ ಸೆರೆಯಾಗಿದೆ.

ಇದನ್ನೂ ಓದಿ: ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತವೆ ಅಡುಗೆ ಮನೆಯಲ್ಲಿಯೇ ಸಿಗುವ ಈ ಅದ್ಭುತ ಆಹಾರ ಪದಾರ್ಥಗಳು..!

ಇನ್ನು ಅನೇಕ ನಟರು ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ನಟಿಸುವಾಗ ಡ್ಯೂಪ್‌ ಬಳಸಲಾಗುತ್ತದೆ. ಆದರೆ ಕೆಲವು ನಟರು ಸ್ವತಃ ತಾವೇ ನಟಿಸುತ್ತಾರೆ. ಅಂತಹ ರಿಸ್ಕ್ ತೆಗೆದುಕೊಳ್ಳುವ ನಟರಲ್ಲಿ ಅಜಿತ್ ಕುಮಾರ್ ಕೂಡ ಒಬ್ಬರು. ʼಮಂಗಾಟʼದಲ್ಲಿ ಅಪಾಯಕಾರಿ ಬೈಕ್ ಚೇಸಿಂಗ್ ದೃಶ್ಯದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ವಿದಾಮುಯಾರ್ಚಿ ಸಿನಿಮಾದ (Ajith Kumar accident video from VidaaMuyarchi ) ಸಾಹಸ ದೃಶ್ಯದಲ್ಲಿ ಪ್ರಾಣದ ಹಂಗು ತೊರೆದು ನಟಿಸಿದ್ದಾರೆ.

ವಿದಾಮುಯಾರ್ಚಿ (Vidaamuyarchi movie) ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈ ಸಿನಿಮಾದಲ್ಲಿ ಅಜಿತ್ ಕುಮಾರ್ ನಾಯಕ ನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಗಾಗ ಈ ಸಿನಿಮಾಗೆ ಸಂಬಂಧಪಟ್ಟ ಕೆಲ ಫೋಟೋಸ್‌ ಮತ್ತು ವಿಡಿಯೋಗಳು ಲೀಕ್ ಆಗುತ್ತಲಿವೆ. ಹೀಗಿರುವಾಗ ಸುರೇಶ್ ಚಂದ್ರ ಹಂಚಿಕೊಂಡ ಈ ವಿಡಿಯೋ ಭಯಾನಕವಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More