Home> Entertainment
Advertisement

Aishwarya Rai: 1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿಯಾಗುತ್ತೆ!!

Aishwarya Rai: ಐಶ್ವರ್ಯಾ ರೈ ಬಚ್ಚನ್ ಅವರ ಮಾಡೆಲಿಂಗ್ ದಿನಗಳ ಬಗ್ಗೆ ಒಂದು ಅಚ್ಚರಿಯ ಸುದ್ದಿ ಇಲ್ಲಿದೆ. ರೆಡ್ಡಿಟ್ ಬಳಕೆದಾರರು ಹಂಚಿಕೊಂಡ ಬಿಲ್‌ನ ಪ್ರತಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಇದರಲ್ಲಿ 1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಇದೆ. 

Aishwarya Rai: 1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿಯಾಗುತ್ತೆ!!

ಮುಂಬೈ: ನಟಿ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರ ವೃತ್ತಿಜೀವನದ ಆರಂಭಿಕ ಹಂತದ ಮಾಡೆಲಿಂಗ್ ಇನ್‌ವಾಯ್ಸ್‌ನ ಪ್ರತಿಯು ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿದೆ. ಈ ಬಿಲ್‌ ಮೇ 23, 1992 ರ ಹಿಂದಿನದು, ಅವರು 1994 ರಲ್ಲಿ ಅಸ್ಕರ್ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆಲ್ಲುವ ಸುಮಾರು ಎರಡು ವರ್ಷಗಳ ಮೊದಲು ಪಡೆದಿದ್ದ ಸಂಭಾವನೆ ಇದಾಗಿದೆ. ಇದು ನಿಯತಕಾಲಿಕದ ಚಿತ್ರೀಕರಣಕ್ಕಾಗಿ ನಟಿ ಐಶ್ವರ್ಯಾ ರೈ 1,500 ರೂ. ಗಳನ್ನು ಪಡೆದಿದ್ದರು. 

ಇದನ್ನೂ ಓದಿ: "ಮಸೀದಿ ಜಾಗದಲ್ಲಿ ದೈವ ಸಾನಿಧ್ಯ ಇರೋದು ಸ್ಪಷ್ಟ"

ಆ ಸಮಯದಲ್ಲಿ ಸುಮಾರು 18 ವರ್ಷ ವಯಸ್ಸಿನವರಾಗಿದ್ದ ಐಶ್ವರ್ಯಾ ರೈ, ಮ್ಯಾಗಜೀನ್ ಕ್ಯಾಟಲಾಗ್ ಶೂಟ್‌ಗಾಗಿ ಕೃಪಾ ಕ್ರಿಯೇಷನ್ಸ್ ಎಂಬ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದರು. ಬಿಲ್‌ನ ಕೆಳಭಾಗದಲ್ಲಿ ಅವರ ಸಹಿ ಇದೆ ಮತ್ತು ಒಪ್ಪಂದವನ್ನು ಮುಂಬೈನಲ್ಲಿ ಸಹಿ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಮಲ್ ಉಪಾಧ್ಯಾಯ ಎಂಬ ಟ್ವಿಟರ್ ಬಳಕೆದಾರರು ಮ್ಯಾಗಜೀನ್ ಶೂಟ್‌ನ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್‌ಗಳಲ್ಲಿ ಹಂಚಿಕೊಂಡಿದ್ದಾರೆ, ಇದು ಕ್ಯಾಟಲಾಗ್ ಫೋಟೋಗಳು ಮತ್ತು ಮ್ಯಾಗಜೀನ್ ಕವರ್‌ ಅನ್ನು ಹೊಂದಿದೆ.

ಇತ್ತೀಚೆಗೆ ಐಶ್ವರ್ಯಾ ರೈ 75 ನೇ ಆವೃತ್ತಿಯ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದರು. 

ಇದನ್ನೂ ಓದಿ: ನಿಮ್ಮ ಬಳಿಯೂ ಈ ರೀತಿಯ ಒಂದು ರೂಪಾಯಿ ನೋಟು ಇದ್ದರೆ ನೀವಾಗಬಹುದು ಲಕ್ಷಾಧಿಪತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More