Home> Entertainment
Advertisement

ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ

Hina Khan Breast Cancer News: 36 ವರ್ಷದ ಹಿನಾ ಖಾನ್ ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.ತಾನು  ಮೂರನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವುದನ್ನು ಖಚಿತಪಡಿಸಿದ್ದಾರೆ.

ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ

Hina Khan Breast Cancer News : ಖ್ಯಾತ ನಟಿ ಹೀನಾ ಖಾನ್ ಗೆ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ಇರುವುದು ಪತ್ತೆಯಾಗಿದೆ.ತನಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎನ್ನುವುದನ್ನು ಖುದ್ದು ಹೀನಾ ಖಾನ್ ಬಹಿರಂಗ ಪಡಿಸಿದ್ದಾರೆ.‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಚಿತ್ರದ ಮೂಲಕ ಫೇಮಸ್ ಆಗಿದ್ದ ಹಿನಾ, ಬಿಗ್ ಬಾಸ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದರು. 

36 ವರ್ಷದ ಹಿನಾ ಖಾನ್ ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.ತಾನು  ಮೂರನೇ ಹಂತದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ : ವಿಭಿನ್ನ ಆಕರ್ಷಣೀಯ ಲುಕ್ ನಲ್ಲಿ ಕಣ್ಮನ ಸೆಳೆದ ರಣಬೀರ್ - ಆಲಿಯಾ ಜೋಡಿ

ಹಿನಾ ಖಾನ್ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆ :
'ಇದು ತುಂಬಾ ಸವಾಲಿನ ಸಮಯ ಎಂದು ನನಗೆ ತಿಳಿದಿದೆ.ನನ್ನ ಆರಿಗ್ಯ ಸ್ಥಿರವಾಗಿದೆ. ನಾನು ಮಾನಸಿಕವಾಗಿ ಸ್ಟ್ರಾಂಗ್ ಆಗಿದ್ದು, ನಾನು ಈ ರೋಗದ ವಿರುದ್ದ ಹೋರಾಡುತ್ತೇನೆ. ನಾನು ಖಂಡಿತವಾಗಿಯೂ ಈ ಕಾಯಿಲೆಯಿಂದ ಚೇತರಿಸಿಕೊಳ್ಳುತ್ತೇನೆ.ನನ್ನ ಚಿಕಿತ್ಸೆಯೂ ಆರಂಭವಾಗಿದೆ ಎಂದು ನಟಿ ಹಿನಾ ಖಾನ್ ಹೇಳಿದ್ದಾರೆ.  

ಹಿನಾ ಖಾನ್ ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಎಲ್ಲರೂ ಅವನಿಗೆ ಧೈರ್ಯ ತುಂಬುವ ಮಾತನಾಡಿದ್ದಾರೆ.ಗಾಯಕ ವಿಶಾಲ್, ಲತಾ ಸಬರ್ವಾಲ್, ಸುನಿಲ್ ಗ್ರೋವರ್ ಸೇರಿದಂತೆ ಹಲವು ತಾರೆಯರು ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : ಎಂಟು ವಾರಗಳ ನಂತರ ಓಟಿಟಿಗೆ ಬರಲಿದೆ ಕಲ್ಕಿ 2898 AD, ಯಾವಾಗ? ಯಾವುದರಲ್ಲಿ? ಎಂಬುವುದರ ಕುರಿತು ಮಾಹಿತಿ ಇಲ್ಲಿದೆ!!

2021 ರಲ್ಲಿ, ಹಿನಾ ಖಾನ್ ತನ್ನ ತಂದೆಯನ್ನೂ ಕಳೆದುಕೊಂಡಿದ್ದಳು.ಹಿನಾ ತಂದೆ ಹೃದಯಾಘಾತದಿಂದ ನಿಧನರಾದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More