Home> Entertainment
Advertisement

ಖ್ಯಾತ ನಟಿ, ಬಿಜೆಪಿ ನಾಯಕಿ ಜಯಪ್ರದಾ ನಾಪತ್ತೆ..! ಯುಪಿ ಮತ್ತು ದೆಹಲಿ ಪೊಲೀಸರಿಂದ ಹುಡುಕಾಟ 

Actress Jayaprada : ಖ್ಯಾತ ನಟಿ ಜಯಪ್ರದಾ ಅವರು ಇಂದು ಬೆಳಿಗ್ಗೆಯಿಂದ ಕಾಣುತ್ತಿಲ್ಲ ಎಂಬ ಸುದ್ದಿ ಕೇಳಿ ಬಂದಿದೆ. ಅಸಲಿಗೆ ನಟಿ ಹೋಗಿದ್ದಾದ್ರು ಎಲ್ಲಿದೆ, ಅವರಿಗಾಗಿ ಪೊಲೀಸರು ಏಕೆ ಹುಡುಕಾಟ ನಡೆಸಿಸದ್ದಾರೆ..? ಎಂಬ ಮಾಹಿತಿ ಇಲ್ಲಿದೆ ನೋಡಿ. 

ಖ್ಯಾತ ನಟಿ, ಬಿಜೆಪಿ ನಾಯಕಿ ಜಯಪ್ರದಾ ನಾಪತ್ತೆ..! ಯುಪಿ ಮತ್ತು ದೆಹಲಿ ಪೊಲೀಸರಿಂದ ಹುಡುಕಾಟ 

Jayaprada missing : ಸ್ಯಾಂಡಲ್‌ವುಡ್‌ ನಿಂದ ಬಾಲಿವುಡ್‌ಗೆ ಹೋಗಿ ದೊಡ್ಡ ನಟಿಯಾಗಿ ಖ್ಯಾತಿ ಗಳಿಸಿದ್ದಲ್ಲದೆ ರಾಜಕೀಯದಲ್ಲೂ ಹೆಸರು ಮಾಡಿದ ನಟಿ ಜಯಪ್ರದಾ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆಯಿಂದ ಅವರು ಕಾಣುತ್ತಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ನಟಿ ಎಲ್ಲಿಗೆ ಹೋದರು, ಅವರಿಗೆ ಏನಾಯಿತು..? ಈ ಕುರಿತ ವರದಿ ಇಲ್ಲಿದೆ ನೋಡಿ.

ಜಯಪ್ರದಾ ನಾಪತ್ತೆಯಾಗಿರುವ ಸುದ್ದಿಗೆ ಮೂಲ ಕಾರಣ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿರುವುದು. ಹೌದು 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಅವರು ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಂಪುರ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತು. ಬಿಜೆಪಿ ಪರ ಪ್ರಚಾರಕ್ಕೆ ಬಂದಿದ್ದ ಜಯಪ್ರದಾ, ಕೋಡ್ ಜಾರಿಯಲ್ಲಿದ್ದರೂ ರಸ್ತೆಯಲ್ಲಿ ಪ್ರಚಾರಕಾರ್ಯ ಆರಂಭಿಸಿದ್ದರು. ಇದರಿಂದಾಗಿ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: BBK10: ದೊಡ್ಮನೆಗೆ ಕಾಲಿಟ್ಟ ಕಾಂತಾರ ಮೂಗುತಿ ಸುಂದರಿ! ಇದು ವೈಲ್ಡ್ ಕಾರ್ಡ್ ಎಂಟ್ರಿನಾ?

ಇನ್ನೂ ರಾಂಪುರ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸಾಕಷ್ಟು ಬಾರಿ ಮನವಿ ಮಾಡಿದರೂ ನ್ಯಾಯಾಲಯಕ್ಕೆ ಅವರು ಹಾಜರಾಗಿಲ್ಲ. ಇದರಿಂದ ಕುಪಿತಗೊಂಡ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಕಳೆದ ತಿಂಗಳು ಅಂದರೆ ನವೆಂಬರ್ 8 ರಂದು ವಿಚಾರಣೆಗೆ ಬಂದಿತ್ತು. ನವೆಂಬರ್ 17ರಂದು ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಲಾಗಿತ್ತು. ಇಷ್ಟು ದಿನ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದರಿಂದ ಸಿಟ್ಟಿಗೆದ್ದ ನ್ಯಾಯಾಲಯ ಜಯಪ್ರದಾ ಅವರನ್ನು ಜನವರಿ 10ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ರಾಂಪುರ ಪೊಲೀಸರಿಗೆ ಆದೇಶಿಸಿದೆ. 

ರಾಂಪುರ ನ್ಯಾಯಾಲಯದ ಆದೇಶದೊಂದಿಗೆ ಪೊಲೀಸರು ಜಯಪ್ರದಾ ಮನೆಗೆ ಹೋದಾಗ, ಅವರು ಅಲ್ಲಿ ಇರಲಿಲ್ಲ. ಇದರಿಂದಾಗಿ ನಟಿ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಜಯಪ್ರದಾ ಪತ್ತೆಗೆ ಯುಪಿ ಪೊಲೀಸರು ದೆಹಲಿ ಪೊಲೀಸರ ಸಹಾಯ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More