Home> Entertainment
Advertisement

Yash : ಯಶ್‌ ಹೊಸ ಸಿನಿಮಾ Toxic ಟೈಟಲ್‌ ಅರ್ಥವೇನು ಗೊತ್ತೆ..? ಸಖತ್‌ ಇಂಟ್ರಸ್ಟಿಂಗ್‌ ಆಗಿದೆ

Yash 19 : ಕೊನೆಗೂ ಯಶ್‌ ಅಭಿಮಾನಿಗಳ ಕಾಯುವಿಕೆಗೆ ಕೊನೆ ಸಿಕ್ಕಿದೆ. ಇಂದು ರಾಕಿಭಾಯ್‌ ನಟನೆಯ 19ನೇ ಚಿತ್ರದ ಟೈಟಲ್‌ ರಿವೀಲ್‌ ಆಗಿದೆ. ಸಿನಿಮಾಗೆ ʼಟಾಕ್ಸಿಕ್‌ʼ ಎಂದು ಶೀರ್ಷಿಕೆ ಇಡಲಾಗಿದ್ದು, ನೆಟ್ಟಿಗರು, ಈ Toxic ಅಂದ್ರೆ ಏನು ಅಂತ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾರೆ. ಬನ್ನಿ ಇದರ ಅರ್ಥವನ್ನು ನಾವು ಹೇಳ್ತೇವೆ..

Yash : ಯಶ್‌ ಹೊಸ ಸಿನಿಮಾ Toxic ಟೈಟಲ್‌ ಅರ್ಥವೇನು ಗೊತ್ತೆ..? ಸಖತ್‌ ಇಂಟ್ರಸ್ಟಿಂಗ್‌ ಆಗಿದೆ

Yash Toxic movie : ನಟ ರಾಕಿಂಗ್‌ ಸ್ಟಾರ್‌ ಯಶ್ ಕೆಜಿಎಫ್‌ ಸಿಕ್ವೇಲ್‌ ಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾಗೆ ಸಖತ್‌ ರೆಸ್ಪಾನ್ಸ್‌ ಸಿಕ್ಕಿತ್ತು. ಅಲ್ಲದೆ, ಭಾಷೆಯ ಗಡಿ ಮೀರಿ ರಾಕಿಭಾಯ್‌ಗೆ ಸಾಕಷ್ಟು ಅಭಿಮಾನಿ ಬಳಗ ಸೃಷ್ಟಿಯಾಯಿತು. ಇಷ್ಟು ದಿನ ಮಾನ್ಸ್ಟರ್‌ ಫ್ಯಾನ್ಸ್‌ ಕಾಯುತ್ತಿದ್ದ ಆ ಅಪ್‌ಡೇಟ್‌ ಹೊರಬಿದ್ದಿದ್ದು, ಯಶ್‌ 19 ಸಿನಿಮಾದ ಟೈಟಲ್‌ ರಿವೀಲ್‌ ಆಗಿದೆ.

ಕೆಜಿಎಫ್ ಸಿಕ್ವೇಲ್ಸ್‌ ಗ್ರ್ಯಾಂಡ್ ಸಕ್ಸಸ್ ನಂತರ ನಟ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿತ್ತು. 'ಕೆಜಿಎಫ್' ಚಿತ್ರದ ಮೂಲಕ ಭಾರತದಾದ್ಯಂತ ಭಾರೀ ಜನಪ್ರಿಯತೆ ಗಳಿಸಿದ ಯಶ್, ತಮ್ಮ ಮುಂದಿನ ಸಿನಿಮಾ ಯಾವಾಗ ಮಾಡ್ತಾರೆ ಅಂತ ಅವರ ಫ್ಯಾನ್ಸ್‌ ಬಕ ಪಕ್ಷಿಗಳ ರೀತಿ ಕಾಯುತ್ತಿದ್ದರು. ಸಧ್ಯ ಅವರ ಕಾಯುವಿಕೆಗೆ ಕೊನೆ ಸಿಕ್ಕಿದ್ದು, Yash 19 ಟೈಟಲ್‌ ರಿವೀಲ್‌ ಆಗಿದೆ.

ಇದನ್ನೂ ಓದಿ:Yash Toxic Movie : ಯಶ್‌ 19 ಟೈಟಲ್‌ ರಿವೀಲ್..!‌ ರಾಕಿ ಭಾಯ್‌ ಫ್ಯಾನ್ಸ್‌ ಫುಲ್‌ ಖುಷ್!

ಹೌದು.. ಯಶ್‌ ಅವರ 19ನೇ ಸಿನಿಮಾಗೆ TOXIC ಎಂದು ಟೈಟಲ್‌ ಇಡಲಾಗಿದೆ. ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಸತ್ಯರಾಜ್ ಅಭಿನಯದ ತಮಿಳಿನ ‘ಬೊಮ್ಮುಕುಟ್ಟಿ ಅಮ್ಮಾವುಕು’ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದ ಗೀತು, ನಂತರ ಮಾಧವನ್ ಅಭಿನಯದ ‘ನಳ ದಮಯಂತಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ, 2019 ರಲ್ಲಿ ಅವರು ಮಲಯಾಳಂನಲ್ಲಿ ನಿವಿನ್ ಪೌಲಿ ಅಭಿನಯದ 'ಮೂತೊನ್' ಚಿತ್ರವನ್ನು ನಿರ್ದೇಶಿಸಿದರು.

ಕೀತು ಮೋಹನ್ ದಾಸ್ ನಿರ್ದೇಶನದ ಯಶ್ ಅವರ ಹೊಸ ಚಿತ್ರಕ್ಕೆ 'ಟಾಕ್ಸಿಕ್' ಎಂದು ಹೆಸರಿಡಲಾಗಿದೆ. ಇದನ್ನು ಚಿತ್ರತಂಡ ಇತ್ತೀಚೆಗೆ ಅಧಿಕೃತವಾಗಿ ಪ್ರಕಟಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಈ ಸಿನಿಮಾವನ್ನು ನಿರ್ಮಿಸುದ್ದಾರೆ. 

ಇದನ್ನೂ ಓದಿ:ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜೂನಿಯರ್ ಮೆಹಮೂದ್ ವಿಧಿವಶ!

ಟಾಕ್ಸಿಕ್ ಅಂದ್ರೆ ಆಂಗ್ಲ ಭಾಷೆಯಲ್ಲಿ “ವಿಷಕಾರಿ“ ಎಂಬ ಅರ್ಥ. ಸಧ್ಯ ಯಶ್‌ ಈ ಸಿನಿಮಾದಲ್ಲಿ ಯಾರು ವಿಷಾಕಾರಿ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಒಟ್ಟಿನಲ್ಲಿ ಯಶ್ 19 ಟೈಟಲ್ ಬೆಂಕಿ ಉಂಡೆಯಂತೆ ಇಡೀ ವಿಶ್ವದಲ್ಲಿ ಪ್ರಜ್ವಲಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ 2025 ಎಪ್ರೀಲ್‌ 10ಕ್ಕೆ ರಿಲೀಸ್‌ ಆಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More