Home> Entertainment
Advertisement

ಉತ್ತರಾಖಂಡ್‌ನಲ್ಲಿ ತಲೈವಾ ಡಿವೈನ್‌ ಜರ್ನಿ : ಮಹಾವತಾರ್ ಬಾಬಾ ಗುಹೆ ತಲುಪುವುದು ಎಷ್ಟು ಕಷ್ಟ ಗೊತ್ತಾ.?

Rajinikanth in Mahavatar babaji cave : ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗೆ ಹಿಮಾಲಯಕ್ಕೆ ಹೋಗಿದ್ದರು. ಕಷ್ಟಪಟ್ಟು ಉತ್ತರಾಖಂಡದ ಪರ್ವತಗಳನ್ನು ಹತ್ತಿ ಇಳಿದು ಮಹಾವತಾರ್ ಬಾಬಾರ ಗುಹೆಗೆ ಭೇಟಿ ನೀಡಿ ಕೆಲ ಕಾಲ ಧ್ಯಾನ ಮಾಡಿದರು. ಈ ಕುರಿತು ಇಂಟ್ರೆಸ್ಟಿಂಗ್‌ ಸುದ್ದಿ ಇಲ್ಲಿದೆ ನೋಡಿ...

ಉತ್ತರಾಖಂಡ್‌ನಲ್ಲಿ ತಲೈವಾ ಡಿವೈನ್‌ ಜರ್ನಿ : ಮಹಾವತಾರ್ ಬಾಬಾ ಗುಹೆ ತಲುಪುವುದು ಎಷ್ಟು ಕಷ್ಟ ಗೊತ್ತಾ.?

Rajinikanth : ಸೂಪರ್‌ ಸ್ಟಾರ್ ನಟ ರಜನಿಕಾಂತ್ ಅವರಿಗೆ ಆಧ್ಯಾತ್ಮಿಕ ಚಿಂತನೆ ಹೆಚ್ಚು. ಪ್ರತಿ ವರ್ಷ ಅವರು ಹಿಮಾಲಯಕ್ಕೆ ಭೇಟಿ ನೀಡುತ್ತಾರೆ. ಸಾಮಾನ್ಯ ವ್ಯಕ್ತಿಯಂತೆ ಎಲ್ಲರೊಂದಿಗೆ ಬೆರೆತು, ಧ್ಯಾನ ಕೇಂದ್ರ ಮತ್ತು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಇತ್ತೀಚೆಗೆ ‘ಜೈಲರ್’ ಸಿನಿಮಾ ಬಿಡುಗಡೆಗೂ ಮುನ್ನ ಆಧ್ಯಾತ್ಮಿಕ ಪ್ರವಾಸಕ್ಕೆ ತೆರಳಿದ್ದರು.

ಹೌದು.. ಕಠಿಣ ಹಿಮಾಲಯ ಪರ್ವತವೇರಿ ಕೆಲವು ದಿನಗಳ ಕಾಲ ತಲೈವಾ ಧ್ಯಾನ ಮಗ್ನರಾಗಿದ್ದರು. ಬದರಿನಾಥ ಕ್ಷೇತ್ರಕ್ಕೆ ಭೇಟಿ ನೀಡಿ, ಶಿವನ ದರ್ಶನ ಪಡೆದು ಅಲ್ಲಿಂದ ಉತ್ತರಾಖಂಡ ಅಲ್ಮೋರಾಕ್ಕೆ ತೆರಳಿ, ಮಹಾವತಾರ್ ಬಾಬಾ ಗುಹೆಗೆ ಭೇಟಿ ನೀಡಿದರು. ಅಲ್ಲಿ ಸುಮಾರು ಅರ್ಧ ಗಂಟೆ ಧ್ಯಾನ ಮಾಡಿದರು. ಅಲ್ಲದೆ, ಅಲ್ಲಿನ ಆಶ್ರಮದ ಸಂತರೊಂದಿಗೆ ಸಂವಾದ ನಡೆಸಿದರು.  

 

ಇದನ್ನೂ ಓದಿ: ‘ಜವಾನ್’ ಟ್ರೈಲರ್ ಬಿಡುಗಡೆ; ಸೋಶಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟ ನಯನತಾರಾ!

ಉತ್ತರಾಖಂಡದಲ್ಲಿರುವ ಬಾಬಾರ ಗುಹೆಗಳಿಗೆ ತೆರಳುವುದು ಅಷ್ಟು ಸುಲಭವಲ್ಲ. ಆದರೆ, ಕೈಯಲ್ಲಿ ಕೋಲು ಹಿಡಿದು 72ರ ಹರೆಯದಲ್ಲೂ 22ರ ಯುವಕರಂತೆ ರಜನಿ ಪರ್ವತಗಳನ್ನು ಏರಿದರು. ಜೊತೆಗಿದ್ದ ಪೊಲೀಸರು ಒಂದೋ ಎರಡೋ ಕಡೆ ಸಹಾಯ ಮಾಡಿದ್ದು, ಬಿಟ್ಟರೆ ತಾವೇ ಚಾರಣದ ಮೂಲಕ ಮಹಾವತಾರ್ ಬಾಬಾ ಅವರ ಗುಹೆಯನ್ನು ತಲುಪಿದರು. ಅಲ್ಲಿನ ಸನ್ಯಾಸಿಗಳೊಂದಿಗೆ ಆಧ್ಯಾತ್ಮಿಕ ವಿಷಯಗಳ ಕುರಿತು ಮಾತನಾಡಿದರು. 

ಪ್ರತಿ ವರ್ಷವೂ ಬಾಬಾರವರ ಆಶ್ರಮ ಭೇಟಿ ನೀಡುತ್ತೇನೆ, ಈ ವರ್ಷವೂ ಸಹ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಂಡಿದೆ ಎಂದು ರಜನಿ ಸಂತಸ ವ್ಯಕ್ತಪಡಿಸಿದರು. ತಲೈವಾ ಡಿವೈನ್‌ ಜರ್ನಿಯ ಸಂಪೂರ್ಣ ವಿಡಿಯೋವನ್ನು 'ಡಿವೈನ್ ತುಷಾರ್ ವರ್ಲ್ಡ್‌ವೈಡ್' ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More