Home> Entertainment
Advertisement

ನಟ-ರಾಜಕಾರಣಿ ವಿಜಯಕಾಂತ್‌ ನಿಧನಕ್ಕೆ ಗಣ್ಯರಿಂದ ಸಂತಾಪ! ಮೋದಿ, ರಾಹುಲ್‌ ಗಾಂಧಿ ಹೇಳಿದ್ದೇನು?

Vijayakanth Death: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ವಿಜಯಕಾಂತ್‌ ಇಂದು ಬೆಳಗ್ಗೆ ನಿಧನರಾಗಿದ್ದು, ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ ಗಾಂಧಿ ಹಾಗೂ ಕಮಲ್‌ ಹಾಸನ್‌ ಸಂತಾಪ ಸೂಚಿಸಿದ್ದಾರೆ.  

ನಟ-ರಾಜಕಾರಣಿ ವಿಜಯಕಾಂತ್‌ ನಿಧನಕ್ಕೆ ಗಣ್ಯರಿಂದ ಸಂತಾಪ! ಮೋದಿ, ರಾಹುಲ್‌ ಗಾಂಧಿ ಹೇಳಿದ್ದೇನು?

Dignitaries Condolence For Vijayakanth's Death: ಕಾಲಿವುಡ್‌ 'ಕ್ಯಾಪ್ಟನ್' ಎನಿಸಿಕೊಂಡಿದ್ದ ನಟ ವಿಜಯಕಾಂತ್, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಹಾಗೂ ಇತ್ತೀಚೆಗೆ ಕೊರೊನಾ ವೈರಸ್ ಕೂಡ ತಗುಲಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೇ  ನಿಧನರಾಗಿದ್ದಾರೆ. ಇವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಜಿಯವರು, "ವಿಜಯಕಾಂತ್ ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರು ತಮಿಳು ಚಿತ್ರರಂಗದ ಲೆಜೆಂಡ್, ತಮ್ಮ ವರ್ಚಸ್ವಿ ಅಭಿನಯದ ಮೂಲಕ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ. ರಾಜಕೀಯ ನಾಯಕರಾಗಿ, ಅವರು ಸಾರ್ವಜನಿಕ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು, ತಮಿಳುನಾಡಿನ ರಾಜಕಾರಣದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದ್ದರು. ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದರು ಮತ್ತು ಅವರೊಂದಿಗಿನ ನನ್ನ ಮಾತುಕತೆಗಳನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಈ ದುಃಖದ ಸಮಯದಲ್ಲಿ, ಅವರ ಕುಟುಂಬ, ಅಭಿಮಾನಿಗಳು ಮತ್ತು ಅವರ ಹಲವು ಬೆಂಬಲಿಗರಿಗೆ ನನ್ನ ಸಂತಾಪಗಳು. ಓಂ ಶಾಂತಿ.." ಎಂದು  ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: DMDK ಮುಖ್ಯಸ್ಥ ವಿಜಯಕಾಂತ್ ನಿಧನ : ಕೊರೋನಾದಿಂದ ಬಳಲುತ್ತಿದ್ದ ನಾಯಕ

ವಿಜಯಕಾಂತ್ ಸಾವಿಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ, "ಡಿಎಂಡಿಕೆ ಸಂಸ್ಥಾಪಕ ವಿಜಯಕಾಂತ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಸಿನಿಮಾ ಮತ್ತು ರಾಜಕೀಯಕ್ಕೆ ಅವರು ನೀಡಿದ ಕೊಡುಗೆಗಳು ಲಕ್ಷಾಂತರ ಜನರ ಹೃದಯದಲ್ಲಿ ಅಳಿಸಲಾಗದ ಗುರುತು ಮೂಡಿಸಿವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್  ವಿಜಯಕಾಂತ್ ಸಾವಿಗೆ ಸಂತಾಪ ಸೂಚಿಸಿ "ನನ್ನ ಆತ್ಮೀಯ ಗೆಳೆಯ - ರಾಷ್ಟ್ರೀಯ ಪ್ರಗತಿಪರ ದ್ರಾವಿಡ ಸಂಘದ ಅಧ್ಯಕ್ಷ ಕ್ಯಾಪ್ಟನ್ ವಿಜಯಕಾಂತ್ ಅವರಿಗೆ ನಾನು ಅಂತಿಮ ನಮನ ಸಲ್ಲಿಸಿದೆ. ಒಳ್ಳೆಯ ಹೃದಯದ ಒಡೆಯ ಗೆಳೆಯ ವಿಜಯಕಾಂತ್ ಅವರು ತಮ್ಮ ಪರಿಶ್ರಮದಿಂದ ಚಿತ್ರರಂಗದಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ಯಶಸ್ವಿ ಛಾಪು ಮೂಡಿಸಿದ್ದಾರೆ" ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Vijayakanth : ತಮಿಳು ನಟ ʼಕ್ಯಾಪ್ಟನ್‌ʼ ವಿಜಯಕಾಂತ್ ಪತ್ನಿ, ಮಕ್ಕಳು ಯಾರು ಗೊತ್ತೆ..?

ನಟ ಕಮಲ್ ಹಾಸನ್, "ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ರಾಷ್ಟ್ರೀಯ ಪ್ರಗತಿಪರ ದ್ರಾವಿಡ ಸಂಘ) ಪಕ್ಷದ ಸಂಸ್ಥಾಪಕ, ತಮಿಳು ಚಿತ್ರರಂಗದ ಅದ್ವಿತೀಯ ನಟ, ನನ್ನ ಪ್ರೀತಿಯ ಸಹೋದರ ವಿಜಯಕಾಂತ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಪ್ರತಿಯೊಂದು ಕಾರ್ಯದಲ್ಲೂ ವಿಜಯಕಾಂತ್ ಮಾನವೀಯತೆಯಿಂದ ಬಾಳಿದವರು. ಅವರು ತಮಿಳುನಾಡು ರಾಜಕೀಯದಲ್ಲಿ ಹೊಸ ಪರಿಕಲ್ಪನೆಗಳ ಸೃಷ್ಟಿಕರ್ತರಾಗಿದ್ದರು. ಬಡವರಿಗೆ ಸಹಾಯ ಹಸ್ತ ಚಾಚಿದ್ದರು. ನಿರ್ಭೀತ ಧೈರ್ಯ ಅವರ ವಿಶಿಷ್ಟ ಲಕ್ಷಣವಾಗಿತ್ತು. ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕ್ರಾಂತಿಕಾರಿ ಕಲಾವಿದ ವಿಜಯಕಾಂತ್ ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ" ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಭಾರತ ಚಿತ್ರರಂಗದ ಹಲವಾರು ಕಲಾವಿದರಾದ ಚಿರಂಜೀವಿ, ವಿಕ್ರಮ್, ರವಿ ತೇಜ, ಜೂನಿಯರ್ ಎನ್‌ಟಿಆರ್, ತ್ರಿಷಾ, ಸಮುದ್ರಖನಿ, ಸೋನು ಸೂದ್ ಮುಂತಾದವರು ವಿಜಯಕಾಂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More