Home> Entertainment
Advertisement

Ajith Kumar : ಖ್ಯಾತ ನಟ ಅಜಿತ್‌ ಕುಮಾರ್‌ ಆಸ್ಪತ್ರೆಗೆ ದಾಖಲು..! ಹೆಚ್ಚಾಯ್ತು ಆತಂಕ..

Ajith Kumar Health : ತಮಿಳು ಚಿತ್ರರಂಗದ ಪ್ರಮುಖ ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತ ಸುದ್ದಿ ಹರಡುತ್ತಿದ್ದಂತೆ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ. ಅಲ್ಲದೆ, ನಟನ ಆರೋಗ್ಯ ಕುರಿತು ಕಾಮೆಂಟ್‌ ಮಾಡುವ ಮೂಲಕ ವಿಚಾರಿಸುತ್ತಿದ್ದಾರೆ.. 

Ajith Kumar : ಖ್ಯಾತ ನಟ ಅಜಿತ್‌ ಕುಮಾರ್‌ ಆಸ್ಪತ್ರೆಗೆ ದಾಖಲು..! ಹೆಚ್ಚಾಯ್ತು ಆತಂಕ..

Ajith Kumar Hospitalised : ಕಾಲಿವುಡ್‌ ಖ್ಯಾತ ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ನಟನಿಗೆ ಏನಾಯಿತು.? ಎಂದು ಅವರ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ... ನೋಡಿ..

ನಟ ಅಜಿತ್ ಕುಮಾರ್ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಆದರೆ, ಗಾಬರಿ ಪಡುವಂತಹ ವಿಚಾರ ಎನಿಲ್ಲ ಎಂಬುವುದನ್ನು ತಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗಿದ್ರೆ ಅಜಿತ್‌ ಆಸ್ಪತ್ರೆಗೆ ದಾಖಲಾಗಿದ್ದಾದ್ರೂ ಏಕೆ..? ತಿಳಿಯೋಣ ಬನ್ನಿ.

ಇದನ್ನೂ ಓದಿ: ಈ ಬಾರಿ RCB ಟೀಂನಲ್ಲಿ ಆಡ್ತಾರಾ ಡಾರ್ಲಿಂಗ್‌ ಕೃಷ್ಣ..!? ಹೊಸ ಸುದ್ದಿ ಇಲ್ಲಿದೆ

ಒಂದು ನಿರ್ದಿಷ್ಟ ವಯಸ್ಸಿನವರಿಗೆ, ಸಂಪೂರ್ಣ ದೈಹಿಕ ಪರೀಕ್ಷೆ ಮತ್ತು ವಾಡಿಕೆಯ ವೈದ್ಯಕೀಯ ತಪಾಸಣೆ ಸಾಮಾನ್ಯ. ಪೂರ್ಣ ದೇಹ ತಪಾಸಣೆಯಿಂದಾಗಿ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು. ಅಂತಹ ಯಾವುದೇ ಸಮಸ್ಯೆ ಕಂಡು ಬಂದರೆ ಉಲ್ಬಣಿಸುವ ಮೊದಲೇ ಅದನ್ನು ತೊಡೆದುಹಾಕಬಹುದು. ಅದಕ್ಕಾಗಿ ಅವರು ಸಾಮಾನ್ಯವಾಗಿ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ನಟ ಅಜಿತ್ ಕುಮಾರ್ ಅವರಿಗೆ ಈಗ 52 ವರ್ಷ. ಸಾಮಾನ್ಯವಾಗಿ, 50 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಸಂಪೂರ್ಣ ದೈಹಿಕ ಪರೀಕ್ಷೆಯನ್ನು ಆಗಾಗ ಮಾಡಿಸುತ್ತಲೇ ಇರಬೇಕು. ಅದರಂತೆ ತಲ ಅಜಿತ್ ಕೂಡ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.. 

ಇದನ್ನೂ ಓದಿ:ತ್ರಿಷಾ, ನಯನತಾರಾ ಇಬ್ಬರೂ ಅಲ್ಲ.. ಸೌತ್‌ ಸಿನಿರಂಗದ ಶ್ರೀಮಂತ ನಟಿ ಈಕೆ!   

ಸಧ್ಯ ಅಜಿತ್‌, ಮಿಜ್ ತಿರುಮೇನಿ ನಿರ್ದೇಶನದ ವಿಡತಲಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಆರಂಭಿಕ ಚಿತ್ರೀಕರಣ ಅಜರ್‌ಬೈಜಾನ್‌ನಲ್ಲಿ ನಡೆದಿದೆ. ಈ ಸಿನಿಮಾದಲ್ಲಿ ತ್ರಿಶಾ ಮತ್ತು ರೆಜಿನಾ ಕಸ್ಸಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳಿವೆ.

ಅಲ್ಲದೆ, ಇದೇ ತಿಂಗಳೂ 15 ರಂದು ವಿದೇಶದಲ್ಲಿ ‘ವಿಡಸೇಲಿ’ ಚಿತ್ರದ ಶೂಟಿಂಗ್ ಆರಂಭವಾಗಬೇಕಿದೆ. ಇದರ ಪ್ರಯುಕ್ತ ಅಜಿತ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ ಎಂದು ಅಜಿತ್ ಕುಮಾರ್ ಅವರ ಪಿಆರ್ ಒ ಮಾಹಿತಿ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More