Home> Entertainment
Advertisement

ಸಲ್ಮಾನ್ ಖಾನ್ ಪ್ರಕಾರ ಈ ಐದು ನಟರಷ್ಟೇ ಬಾಲಿವುಡ್ ನಲ್ಲಿ ಸ್ಟಾರ್ ನಟರಂತೆ..!

ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಸ್ಟಾರ್‌ ಗಿರಿ ಬಗ್ಗೆ ಮಾತನಾಡುತ್ತಾ ಸದ್ಯ ಬಾಲಿವುಡ್ ನಲ್ಲಿ ತಾವು ಸೇರಿದಂತೆ ಐದು ನಟರು ಮಾತ್ರ ಸ್ಟಾರ್ ನಟರುಗಳು ಎಂದು ಹೇಳಿದ್ದಾರೆ.    

 ಸಲ್ಮಾನ್ ಖಾನ್ ಪ್ರಕಾರ ಈ ಐದು ನಟರಷ್ಟೇ ಬಾಲಿವುಡ್ ನಲ್ಲಿ ಸ್ಟಾರ್ ನಟರಂತೆ..!

ನವದೆಹಲಿ: ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಸ್ಟಾರ್‌ ಗಿರಿ ಬಗ್ಗೆ ಮಾತನಾಡುತ್ತಾ ಸದ್ಯ ಬಾಲಿವುಡ್ ನಲ್ಲಿ ತಾವು ಸೇರಿದಂತೆ ಐದು ನಟರು ಮಾತ್ರ ಸ್ಟಾರ್ ನಟರುಗಳು ಎಂದು ಹೇಳಿದ್ದಾರೆ.    

ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಖಾನ್ "ಸ್ಟಾರ್‌ ಗಿರಿ ಕೊನೆಗೂ ಅಂತ್ಯವಾಗುತ್ತಿದೆ. ಅದನ್ನು ಇನ್ನಷ್ಟು ಸಮಯದವರೆಗೆ ಮುಂದುವರಿಸುವುದು ಮಹತ್ವದ ಕಾರ್ಯವಾಗಿದೆ.ಈಗ ನಾನು ಶಾರುಖ್, ಅಮೀರ್, ಅಕ್ಕಿ, ಅಜಯ್ ಅವರುಗಳು ಮಾತ್ರ ಸ್ಟಾರ್ ಗಿರಿಯನ್ನು ದೀರ್ಘಕಾಲದವರೆಗೆ ಎಳೆಯಲು ಸಮರ್ಥರಾಗಿದ್ದೇವೆ. ಇನ್ನೂ ಕೆಲವು ವರ್ಷಗಳವರೆಗೆ ಅದನ್ನು ಮುಂದುವರಿಸಲು ನಾವು ಪ್ರಯತ್ನಿಸುತ್ತೇವೆ. ಎಲ್ಲಾ ಸೂಪರ್‌ಸ್ಟಾರ್‌ಗಳಂತೆಯೇ, ಗಲ್ಲಾಪೆಟ್ಟಿಗೆಯ ಸಂಗ್ರಹವು ಎಂಟರಿಂದ ಹತ್ತು ಶೇಕಡಾಕ್ಕೆ ಇಳಿಯುತ್ತದೆ.ಆದರೆ. ಅದು ಇನ್ನೂ ಪ್ರಾರಂಭವಾಗಿಲ್ಲ' ಎಂದು ಹೇಳಿದರು. 

ಸಲ್ಮಾನ್ ಖಾನ್ ಪ್ರಸ್ತುತ ತಮ್ಮ ಮುಂದಿನ ದಬಾಂಗ್ 3 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. 53 ವರ್ಷದ ನಟ ಮತ್ತೆ ಅವರ ಅಪ್ರತಿಮ ಕಾಪ್ ಪಾತ್ರವಾದ ಚುಲ್ಬುಲ್ ಪಾಂಡೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದು, ಸೋನಾಕ್ಷಿ ಸಿನ್ಹಾ, ಡಿಂಪಲ್ ಕಪಾಡಿಯಾ, ಅರ್ಬಾಜ್ ಖಾನ್ ಮತ್ತು ಸುದೀಪ್ ತಾರಾಗಣದಲ್ಲಿದ್ದಾರೆ. ದಬಾಂಗ್ 3 ರ ಹೊರತಾಗಿ, 19 ವರ್ಷಗಳ ನಂತರ ಸಂಜಯ್ ಲೀಲಾ ಭನ್ಸಾಲಿ ಅವರ ಇನ್ಶಲ್ಲಾ ಚಿತ್ರದಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಲಿಯಾ ಭಟ್ ಕೂಡ ನಟಿಸುತ್ತಿದ್ದಾರೆ.

Read More