Home> Entertainment
Advertisement

ನಟ ವಿಶಾಲ್ ʼಮಾರ್ಕ್‌ ಆಂಟನಿʼ ಸಿನಿಮಾ ಸೆಟ್‌ನಲ್ಲಿ ಭಾರಿ ಅಪಘಾತ..! ವಿಡಿಯೋ ವೈರಲ್

ಕಾಲಿವುಡ್‌ ನಟ ವಿಶಾಲ್ ಅವರ ಮುಂಬರುವ ಸಿನಿಮಾ ʼಮಾರ್ಕ್ ಆಂಟನಿʼ ಶೂಟಿಂಗ್‌ ವೇಳೆ ಭಾರಿ ಅವಗಡ ಸಂಭವಿಸಿದೆ. ವಾಹನವೊಂದು ನಿಯಂತ್ರಣ ತಪ್ಪಿ ಯೂನಿಟ್‌ ಸಿಬ್ಬಂದಿ ಮೇಲೆ ನುಗ್ಗಿ ಬಂದಿದೆ. ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ನಟ ವಿಶಾಲ್ ʼಮಾರ್ಕ್‌ ಆಂಟನಿʼ ಸಿನಿಮಾ ಸೆಟ್‌ನಲ್ಲಿ ಭಾರಿ ಅಪಘಾತ..! ವಿಡಿಯೋ ವೈರಲ್

Vishal Mark Antony film : ಕಾಲಿವುಡ್‌ ನಟ ವಿಶಾಲ್ ಅವರ ಮುಂಬರುವ ಸಿನಿಮಾ ʼಮಾರ್ಕ್ ಆಂಟನಿʼ ಶೂಟಿಂಗ್‌ ವೇಳೆ ಭಾರಿ ಅವಗಡ ಸಂಭವಿಸಿದೆ. ವಾಹನವೊಂದು ನಿಯಂತ್ರಣ ತಪ್ಪಿ ಯೂನಿಟ್‌ ಸಿಬ್ಬಂದಿ ಮೇಲೆ ನುಗ್ಗಿ ಬಂದಿದೆ. ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ತಮಿಳು ಹಾಗು ತೆಲುಗು ಸಿನಿಮಾ ರಂಗದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ವಿಶಾಲ್‌ ಬ್ಯುಸಿಯಾಗಿದ್ದಾರೆ. ಹೀರೋ ವಿಶಾಲ್ ಗೆ ಒಳ್ಳೆಯ ಬೇಡಿಕೆ ಇದೆ. ವಿಶಾಲ್ ತಮ್ಮ ಚಿತ್ರಗಳಿಗಾಗಿ ಶ್ರಮಿಸುತ್ತಾರೆ. ಡ್ಯೂಪ್‌ ಬಳಸದೆ ಸಾಹಸಗಳನ್ನು ಮಾಡುತ್ತಾರೆ. ಈ ಕಾರಣದಿಂದಾಗಿ, ಅವರು ಪ್ರತಿ ಚಿತ್ರದ ಶೂಟಿಂಗ್ ಸಮಯದಲ್ಲಿ ಕೆಲವು ರೀತಿಯ ಗಾಯಗಳಿಂದ ನೋವನ್ನು ಅನುಭವಿಸುತ್ತಿರುತ್ತಾರೆ. 

ಇದನ್ನೂ ಓದಿ: Anushree : ನನ್ನ ಪ್ರೀತಿಯ ಮುದ್ದು ಕಳೆದು ಹೋಗಿದೆ ಸಹಾಯ ಮಾಡಿ : ನಿರೂಪಕಿ ಅನುಶ್ರೀ

ಇನ್ನು ಇದೀಗ ವಿಶಾಲ್‌ ಮುಂಬರುವ ಸಿನಿಮಾ ʼಮಾರ್ಕ್ ಆಂಟನಿʼ ಸಿನಿಮಾದ ಸೆಟ್‌ನಲ್ಲಿ ಭಾರಿ ಅಪಘಾತ ಸಂಭವಿಸಿದೆ. ವಾಹನವೊಂದು ನಿಯಂತ್ರಣ ತಪ್ಪಿ ಚಿತ್ರ ಘಟಕಕ್ಕೆ ಡಿಕ್ಕಿ ಹೊಡೆದಿದೆ. ತಾಂತ್ರಿಕ ದೋಷದಿಂದ ಇದು ಸಂಭವಿಸಿದೆ ಎಂದು ತೋರುತ್ತದೆ. ಆದರೆ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತೋರುತ್ತದೆ. ವಿಶಾಲ್ ಮಾಡುವ ಪ್ರತಿ ಸಿನಿಮಾದಲ್ಲೂ ಈ ರೀತಿಯ ಘಟನೆ ಆಗುತ್ತಲೇ ಇರುತ್ತವೆ. ಇದೀಗ ಮಾರ್ಕ್ ಆಂಟೋನಿ ಸಿನಿಮಾ ಸೆಟ್‌ನಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. 

ಈ ಬಗ್ಗೆ ಚಿತ್ರತಂಡ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಚಿತ್ರತಂಡದಿಂದ ಅಧಿಕೃತ ಘೋಷಣೆಯ ನಂತರವಷ್ಟೇ ಸತ್ಯಾಂಶ ಹೊರಬೀಳಲಿದೆ. ವಿಶಾಲ್ ಈ ಶೆಡ್ಯೂಲ್ ನಲ್ಲಿ ಇದ್ದಾರೋ ಇಲ್ಲವೋ..? ಆ ವಾಹನವನ್ನು ಓಡಿಸಿದವರು ಯಾರು? ನಿಜವಾಗಿ ಈ ಅಪಘಾತ ಏಕೆ ಸಂಭವಿಸಿತು? ಯಾರ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂಬುದು ತಿಳಿಯಬೇಕಿದೆ. ಸಿನಿಮಾ ಸೆಟ್‌ಗಳಲ್ಲಿ ಅಪಘಾತ ಸಂಭವಿಸಿ ಹಲವು ತಂತ್ರಜ್ಞರು ಸಾವನ್ನಪ್ಪಿರುವುದು ಗೊತ್ತೇ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More