Home> Entertainment
Advertisement

ಹೌದು ನಾವು ಒಂದೇ ಮನೆಯಲ್ಲಿಲ್ಲ : ಎದುರಾದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಿದ ಅಭಿಷೇಕ್ ಬಚ್ಚನ್

ಈ ನಡುವೆ ಐಶ್ವರ್ಯಾ ಈಗ ತಮ್ಮ ಅತ್ತೆ ಮಾವನ ಜೊತೆಯಲ್ಲಿ ವಾಸಿಸುತ್ತಿಲ್ಲ ಅವರು ಜಲ್ಸಾ ತೊರೆದು ಪ್ರತ್ಯೇಕವಾಗಿ ಬದುಕುತ್ತಿದ್ದಾರೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. 

ಹೌದು ನಾವು ಒಂದೇ ಮನೆಯಲ್ಲಿಲ್ಲ : ಎದುರಾದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಿದ ಅಭಿಷೇಕ್ ಬಚ್ಚನ್

ಮುಂಬಯಿ : ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವೈವಾಹಿಕ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳೇ ಈಗ ಬಾಲಿವುಡ್ ನಲ್ಲಿ ಚರ್ಚೆಯ ವಿಷಯ. ಅನೇಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಜೊತೆಯಲ್ಲಿ ಭಾಗವಹಿಸದೆ ಇರುವುದು ಎಲ್ಲಾ ಊಹಾ ಪೋಹಗಳಿಗೆ ಕಾರಣವಾಗಿತ್ತು. ಇವರಿಬ್ಬರ ವಿಚ್ಛೇದನ ಸುದ್ದಿ ಹಬ್ಬುತ್ತಿದ್ದಂತೆಯೇ ಇವರ ಪ್ರತಿಯೊಂದು ನಡೆಯ ಬಗ್ಗೆ ಪ್ರಶ್ನೆ ಏಳಲು ಆರಂಭವಾಯಿತು. ಈ ನಡುವೆ ಐಶ್ವರ್ಯಾ ಈಗ ತಮ್ಮ ಅತ್ತೆ ಮಾವನ ಜೊತೆಯಲ್ಲಿ ವಾಸಿಸುತ್ತಿಲ್ಲ ಅವರು ಜಲ್ಸಾ ತೊರೆದು ಪ್ರತ್ಯೇಕವಾಗಿ ಬದುಕುತ್ತಿದ್ದಾರೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. 

ಐಶ್ವರ್ಯಾ ತನ್ನ ಅತ್ತೆಯ ಮನೆಯಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆಯೇ ನೆಟ್ಟಿಗರು ಅಭಿಷೇಕ್ ಬಚ್ಚ ನ್ ಅವರ ಹಳೆಯ ವಿಡಿಯೋವೊಂದನ್ನು ವೈರಲ್ ಮಾಡುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಅವರು ತಮ್ಮ ಪೋಷಕರಿಂದ ಪ್ರತ್ಯೇಕವಾಗಿ ವಾಸಿಸುವ ಬಗ್ಗೆಆ ಹಳೆಯ ವೀಡಿಯೊದಲ್ಲಿಯೇ ಬಹಿರಂಗವಾಗಿ ಮಾತನಾಡಿದ್ದಾರೆ. 

ಇದನ್ನೂ ಓದಿ : ಹೊಸ ವರ್ಷಕ್ಕೆ ಬ್ಯಾಚುಲರ್ಸ್‌ ವಾರ್ನಿಂಗ್‌ ಸಾಂಗ್‌ ಔಟ್‌!

2018ರ ಚಲನಚಿತ್ರ ಮನ್ಮರ್ಜಿಯಾನ್ ಪ್ರಚಾರದ ಸಮಯದಲ್ಲಿ, "ಅಭಿಷೇಕ್ ಮನೆಯ ಹೆಸರೇನು ಎನ್ನುವ ಪ್ರಶ್ನೆಯನ್ನು ಚಿತ್ರ ತಂಡದವರನ್ನು ಕೇಳಲಾಗುತ್ತದೆ. ಈ ಬಗ್ಗೆ ಉತ್ತರಿಸಲು ಬಹಳ ಹೊತ್ತು ಯೋಚಿಸಿದ ಬಳಿಕ ಜಲ್ಸಾ" ಎನ್ನುವ ಉತ್ತರ ಬರುತ್ತದೆ. ಆಗ ಅಭಿಷೇಕ ಅಲ್ಲ ಉತ್ತರ ತಪ್ಪು ಎನ್ನುವುದನ್ನು  ಸ್ಪಷ್ಟವಾಗಿ ಹೇಳುತ್ತಾರೆ. 

ಈ ವಿಡಿಯೋ ನೋಡಿದರೆ ಐಶ್ವರ್ಯಾ ಮತ್ತು ಅಭಿಷೇಕ್ 2018 ರಲ್ಲೇ ಜಲ್ಸಾದಲ್ಲಿ ವಾಸಿಸುತ್ತಿಲ್ಲ. ಆದರೆ  ಅದು ಈಗ ದೊಡ್ಡ ಸುದ್ದಿಯಾಗಿ ಹೊರ ಹೊಮ್ಮಿದೆ ಎನ್ನುವುದು ಅರ್ಥವಾಗುತ್ತದೆ. ಅಂದರೆ ವಾಸ್ತವವಾಗಿ 2018ರಿಂದಲೂ ಇವರಿಬ್ಬರು ಜಯಾ ಬಚ್ಚನ್ ಮತ್ತು ಅಭಿತಾಬ್ ಬಚ್ಚನ್ ಜೊತೆ ವಾಸಿಸುತ್ತಲೇ ಇಲ್ಲ. ಇನ್ನೊಂದು ಮೂಲಗಳ ಪ್ರಕಾರ ಐಶ್ವರ್ಯ ಮತ್ತು ಅಭಿಷೇಕ್ ಆರಾಧ್ಯ ಪ್ರತ್ಯೇಕವಾಗಿಯೇ ವಾಸಿಸುತ್ತಾರೆ. ಆದರೆ ಈ ಬಂಗಲೆ ಮತ್ತು ಜಲ್ಸಾ ಒಳಗಿನಿಂದ ಒಂದಕ್ಕೊಂದು ಕನೆಕ್ಟ್ ಆಗಿವೆ ಎನ್ನಲಾಗಿದೆ. 

ಇದನ್ನೂ ಓದಿ : ಕರಾವಳಿಯಲ್ಲಿ ಕೋಣದ ಮೇಲೆ ಕೂತು ಮಹೀಷನಾದ ಪ್ರಜ್ವಲ್

ಇನ್ನು ವರದಿಗಳನ್ನು ನಂಬುವುದಾದರೆ, 2018 ರಲ್ಲಿ, ಅಭಿಷೇಕ್ ಮತ್ತು ಅವರ ಪತ್ನಿ ಐಶ್ವರ್ಯ  21 ಕೋಟಿ ಮೌಲ್ಯದ 5,500 ಚದರ ಅಡಿಗಳಷ್ಟು ವಿಶಾಲವಾದ ಹೊಸ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ. ಈ ಬಂಗಲೆ ಖರೀದಿಸುವಾಗಲೂ ಅವರಿಬ್ಬರೂ ಜಲ್ಸಾದಿಂದ ಹೊರಬರಬಹುದು ಎನ್ನುವ ಮಾತು ಕೇಳಿ ಬರುತ್ತಿತ್ತು. ಇನ್ನು ಇವರು ಜುಹುವಿನಲ್ಲಿ ತಮ್ಮ ಬಂಗಲೆಗಳ ಪಕ್ಕದಲ್ಲೇ ಐದಾರು ಬಂಗಲೆಗಳನ್ನು ಖರೀದಿಸಿದ್ದು, ಎಲ್ಲವೂ ಒಂದಕ್ಕೊಂದು ಸಂಪರ್ಕ ಕಲ್ಪಿಸುತ್ತವೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More