Home> Entertainment
Advertisement

Pentagon : ಬೇಕು ಅಂತಲೇ 'ಪೆಂಟಗನ್' ಬಗ್ಗೆ ವಿವಾದ ಮಾಡಿದ್ರು ಕನ್ನಡಪರ ಹೋರಾಟಗಾರ ಎನಿಸಿಕೊಂಡಿರೋ ಆ ವ್ಯಕ್ತಿ.!

Pentagon Movie : ಏಪ್ರಿಲ್ 7ಕ್ಕೆ ಭರ್ಜರಿಯಾಗಿ ರಿಲೀಸ್ ಆಗಲು ರೆಡಿಯಾಗಿರುವ 'ಪೆಂಟಗನ್'. ಗುರು ದೇಶಪಾಂಡೆ ಇಲ್ಲಿ ಹಣ ಹೂಡಿದ್ದಾರೆ. ಪ್ರಕಾಶ್ ಬೆಳವಾಡಿ, ಕಿಶೋರ್ ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. 
 

Pentagon : ಬೇಕು ಅಂತಲೇ 'ಪೆಂಟಗನ್' ಬಗ್ಗೆ ವಿವಾದ ಮಾಡಿದ್ರು ಕನ್ನಡಪರ ಹೋರಾಟಗಾರ ಎನಿಸಿಕೊಂಡಿರೋ ಆ ವ್ಯಕ್ತಿ.!

Pentagon : ಒಂದೇ ಸಿನಿಮಾದಲ್ಲಿ ಐದು ಕಥೆಗಳನ್ನ ತೋರಿಸೋ ವಿಭಿನ್ನ ಪ್ರಯತ್ನಕ್ಕೆ  ಮತ್ತೇ ಕೈ ಹಾಕಿದವರು ಗುರು ದೇಶ್ ಪಾಂಡೆ. ಯೆಸ್ ಈಗಾಗಲೇ ರಿಲೀಸ್ ಆಗಿರೋ ಹಾಡುಗಳು ಮತ್ತು ಟ್ರೇಲರ್ ಹಾಗೂ ಟೀಸರ್ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇದೀಗ ಏಪ್ರಿಲ್ 7ಕ್ಕೆ ಸಿನಿಮಾ ಭರ್ಜರಿಯಾಗಿ ರಿಲೀಸ್ ಕೂಡ ಆಗುತ್ತಿದೆ. ನೆನ್ನೆ ರಿಲೀಸ್ ಆಗಿರೋ ಪೆಂಟಗನ್ ಸಿನಿಮಾದ ಥೀಮ್ ಸಾಂಗ್ ನಿಜಕ್ಕೂ ಒಳ್ಳೆ ಕಿಕ್ ಕೊಟ್ಟಿದೆ. ಪೆಂಟಗನ್ ಸಿನಿಮಾದ ಐದು ಸ್ಟೋರಿಗಳು ಕೂಡ ನಿಮಗಾಗಿ ಐದು ಸಂದೇಶ ನೀಡಲು ಸಿದ್ಧವಾಗಿದೆ.

ಇದನ್ನೂ ಓದಿ : Dasara Movie Controversy: ವಿವಾದದ ಸುಳಿಯಲ್ಲಿ ನಾನಿ ಅಭಿನಯದ ʻದಸರಾʼ

ಥೀಯೇಟರ್ ನಿಂದ ಹೊರನಡೆದಾಗ ಆ ಹ್ಯಾಂಗ್ ಓವರ್ ನಿಂದಲೇ ಬರಬಹುದು. ಇನ್ನೂ ಸಿನಿಮಾ ಬಗ್ಗೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ ನಿರ್ಮಾಪಕ ಗುರುದೇಶ್ ಪಾಂಡೆ ಟೀಸರ್ ರಿಲೀಸ್ ಸಂದರ್ಭದಲ್ಲಿ ಬೇಕು ಅಂತಲೇ ಆ ವ್ಯಕ್ತಿ ನಮ್ಮ ಸಿನಿಮಾವನ್ನ ಟಾರ್ಗೆಟ್ ಮಾಡಿ ಜಗಳ ಶುರುಮಾಡಿದ್ರು. ಕನ್ನಡಪರ ಹೋರಾಟಗಾರರು ವಸೂಲಿ ಮಾಡ್ತಾರೆ ಅಂದ್ರೆ ಅದು ಸಿನಿಮಾದ ಕಥೆ.ಇವರು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಸ್ಟೋರಿ ಬಗ್ಗೆ ಮಾತಾಡ್ಬೇಕು ಅಂತ ಕನ್ನಡಪರ ಹೋರಾಟಗಾರ ಅಂತ ಹೇಳಿಕೊಳ್ಳೊ ಆ ವ್ಯಕ್ತಿಯ ಬಗ್ಗೆ ತುಂಬಾ ನೋವಿನಿಂದಲೇ ಮಾತನಾಡಿದ್ರು ಗುರುದೇಶ್ ಪಾಂಡೆ.ಬಂದು ಮೊದಲು ಸಿನಿಮಾ ನೋಡಲಿ ಆಮೇಲೆ ಮಾತಾಡಲಿ ಅನ್ನೋ ಟಾಂಗ್ ಕೂಡ ಕೊಟ್ಟರು. ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ.

ಜೊತೆಗೆ ಗುರು ದೇಶಪಾಂಡೆ ಇಲ್ಲಿ ಹಣ ಹೂಡಿದ್ದಾರೆ. ಪ್ರಕಾಶ್ ಬೆಳವಾಡಿ, ಕಿಶೋರ್ ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ.ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ.

ಇದನ್ನೂ ಓದಿ : Pushpa 2 : ಸಿನಿಮಾ ಶೂಟಿಂಗ್‌ ಸ್ಥಗಿತ.. ಪುಷ್ಪ 2 ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More