Home> Entertainment
Advertisement

ಹೃತಿಕ್ ರೋಶನ್ ರ 'ಸೂಪರ್ 30' ಚಿತ್ರ ತಡೆಯಾಜ್ಞೆಗೆ ಐಐಟಿ ವಿದ್ಯಾರ್ಥಿಗಳು ಮನವಿ

ಹೃತಿಕ್ ರೋಶನ್ ಅವರ ಸೂಪರ್ 30 ಈಗ ಹೆಡ್ ಲೈನ್ ಗಳಿಗೆ ಕಾರಣವಾಗಿದೆ. ಎಂಟು ತಿಂಗಳ ಹಿಂದೆ, ಐಐಟಿ ವಿದ್ಯಾರ್ಥಿಗಳು ಗಣಿತಜ್ಞ ಆನಂದ್ ಕುಮಾರ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು, ಆನಂದ್ ಕುಮಾರ್ ಅವರಿಂದ  ಐಐಟಿಗೆ ವಿದ್ಯಾರ್ಥಿಗಳು ಸೇರಿಸಿಕೊಳ್ಳುತ್ತಾರೆ ಎನ್ನುವ  ಕುಮಾರ್ ಅವರ ಹೇಳಿಕೆ ಸುಳ್ಳು ಎಂದು ಐಐಟಿ ವಿದ್ಯಾರ್ಥಿಗಳು ಆರೋಪಿಸಿದ್ದರು.

ಹೃತಿಕ್ ರೋಶನ್ ರ 'ಸೂಪರ್ 30' ಚಿತ್ರ ತಡೆಯಾಜ್ಞೆಗೆ ಐಐಟಿ ವಿದ್ಯಾರ್ಥಿಗಳು ಮನವಿ

ನವದೆಹಲಿ: ಹೃತಿಕ್ ರೋಶನ್ ಅವರ ಸೂಪರ್ 30 ಈಗ ಹೆಡ್ ಲೈನ್ ಗಳಿಗೆ ಕಾರಣವಾಗಿದೆ. ಎಂಟು ತಿಂಗಳ ಹಿಂದೆ, ಐಐಟಿ ವಿದ್ಯಾರ್ಥಿಗಳು ಗಣಿತಜ್ಞ ಆನಂದ್ ಕುಮಾರ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು, ಆನಂದ್ ಕುಮಾರ್ ಅವರಿಂದ  ಐಐಟಿಗೆ ವಿದ್ಯಾರ್ಥಿಗಳು ಸೇರಿಸಿಕೊಳ್ಳುತ್ತಾರೆ ಎನ್ನುವ  ಕುಮಾರ್ ಅವರ ಹೇಳಿಕೆ ಸುಳ್ಳು ಎಂದು ಐಐಟಿ ವಿದ್ಯಾರ್ಥಿಗಳು ಆರೋಪಿಸಿದ್ದರು.

ಮಿಡ್-ಡೇ ಪ್ರಕಾರ, ವಿದ್ಯಾರ್ಥಿಗಳಾದ ಅವಿನಾಶ್ ಬರೋ, ಬಿಕಾಶ್ ದಾಸ್, ಮೊಂಜಿತ್ ಡೋಲೆ ಮತ್ತು ಧನಿರಾಮ್ ಟಾವ್ ಅವರು ಸೂಪರ್ 30 ರ ಬಿಡುಗಡೆಯನ್ನು ತಡೆಯಲು ಹೊಸ ಮೊಕದ್ದಮೆ ಹೂಡಲು ಯೋಜಿಸುತ್ತಿದ್ದಾರೆ. ಇನ್ನು ಆನಂದ್ ಕುಮಾರ್ ಅವರ ಮೇಲಿನ ಪ್ರಕರಣ ಇತ್ಯರ್ಥವಾಗಿಲ್ಲ. ಆದ್ದರಿಂದ ಈ ಸಿನಿಮಾವನ್ನು ಹೇಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ವಿದ್ಯಾರ್ಥಿಗಳ ಕಾನೂನು ಸಲಹೆಗಾರ ಅಮಿತ್ ಗೋಯಲ್, "ಚಲನಚಿತ್ರ ಅಸಮರ್ಪಕವೆಂದು ತೋರುತ್ತದೆ, ನಾವು ಎಂದಿಗೂ ಚಿತ್ರವನ್ನು ಹಾನಿ ಮಾಡಲು ಪ್ರಯತ್ನಿಸಲಿಲ್ಲ, ಆದರೆ ಕುಮಾರ್ ಅವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಇದೆ ಎಂದು ಹೇಳಿದ್ದಾರೆ. ಈ ಪರಿಸ್ಥಿತಿಯನ್ನು ತಿಳಿದಿದ್ದರೂ ಸಹ, ಸಿಬಿಎಫ್‌ಸಿ ಚಿತ್ರವನ್ನು ತೆರವುಗೊಳಿಸಿದ್ದರಿಂದ ವಿದ್ಯಾರ್ಥಿಗಳಿಗೆ ಆಶ್ಚರ್ಯವಾಯಿತು ಎನ್ನಲಾಗಿದೆ.

ಕಳೆದ ವರ್ಷ ಕುಮಾರ್ ವಿರುದ್ಧ ದಾಖಲಾದ ಪಿಐಎಲ್ ನಲ್ಲಿ, 2018 ರಲ್ಲಿ ಐಐಟಿಯಲ್ಲಿ ಪ್ರವೇಶ ಪಡೆದ 26 ವಿದ್ಯಾರ್ಥಿಗಳ ಹೆಸರುಗಳನ್ನು ಬಹಿರಂಗಪಡಿಸುವಂತೆ ಕೇಳಲಾಯಿತು. "ಅವರು ಇನ್ನೂ ನ್ಯಾಯಾಲಯಕ್ಕೆ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಅಂತಹ ಸನ್ನಿವೇಶದಲ್ಲಿ, ಈ ಚಲನಚಿತ್ರ ತಪ್ಪಾದ ಸಂದೇಶವನ್ನು ಕಳುಹಿಸುತ್ತದೆ ಎಂದು ಅವರು ಹೇಳಿದರು.

ಸೂಪರ್ 30 ಆನಂದ್ ಕುಮಾರ್ ಅವರ ಚಿತ್ರ ಕಥೆಯನ್ನು ಹೇಳುತ್ತದೆ, ಅವರು ಪ್ರತಿ ವರ್ಷ ಐಐಟಿ ಪರೀಕ್ಷೆಗಳಿಗೆ 30  ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಕುಮಾರ್ ಅವರ ಸುಳ್ಳು ಹೇಳಿಕೆಗಳು ಅವರ ಸೂಪರ್ 30 ಕೋರ್ಸ್‌ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿವೆ ಎಂದು ಈ ಹಿಂದೆ ವಿದ್ಯಾರ್ಥಿಗಳು ಸೂಚಿಸಿದ್ದರು. ಆದಾಗ್ಯೂ, ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ, 33,000 ರೂ. ಪಾವತಿಸಿದ ನಂತರ ಮೊದಲು ತಮ್ಮ ಸಂಸ್ಥೆಯಾದ ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ಪ್ರವೇಶ ಪಡೆಯಲು ನಿರ್ದೇಶಿಸುತ್ತಿದ್ದರು ಎನ್ನುವುದು ವಿದ್ಯಾರ್ಥಿಗಳ ಆರೋಪವಾಗಿದೆ.

Read More