Home> Entertainment
Advertisement

ಮೂರು ದಿನಗಳ ಹಿಂದೆಯಷ್ಟೇ ಲೀಲಮ್ಮನಿಗೆ ಒಲಿದು ಬಂದಿತ್ತು ನಂದಿ ಅವಾರ್ಡ್!

Leelavathi: ಸ್ಯಾಂಡಲ್‌ವುಡ್‌ನಲ್ಲಿ ಕೊಟ್ಟ ಮೊದಲ ಬಾರಿಗೆ ಪ್ರಾರಂಭವಾದ ನಂದಿ ಫಿಲ್ಮ್‌ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಹಿರಿಯ ನಟಿ ಲೀಲಾವತಿಗೆ ಲೆಜೆಂಡರಿ ಆಕ್ಟ್ರೆಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
 

ಮೂರು ದಿನಗಳ ಹಿಂದೆಯಷ್ಟೇ ಲೀಲಮ್ಮನಿಗೆ ಒಲಿದು ಬಂದಿತ್ತು ನಂದಿ ಅವಾರ್ಡ್!

Leelavathi Got Nandi Award: ಕನ್ನಡ ಚಿತ್ರರಂಗದಲ್ಲಿ ತೆಲುಗು ಚಿತ್ರರಂಗದಂತೆ ನಂದಿ ಪ್ರಶಸ್ತಿ ಕೊಡಲಾಗ್ತಿದ್ದು, ಈ ನಂದಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮ ಕನ್ನಡ ಚಿತ್ರರಂಗದ ಹಿರಿ ಕಿರಿಯ ತಾರೆರನ್ನ ಒಂದೆಡೆ ಸೇರಿಸಿದ್ದರು.ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನಂದಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ಜರುಗಿತ್ತು. ಇದೇ ಫಸ್ಟ್ ಟೈಂ ಸ್ಯಾಂಡಲ್‌ವುಡ್‌ನಲ್ಲಿ ಕೊಡಲಾಗ್ತಿರೋ ನಂದಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ರು. 

ಇದೇ ಮೊದಲಬಾರಿಗೆ ಚಂದನವನದಲ್ಲಿ ನಂದಿ ಅವಾರ್ಡ್‌ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ಲೀಲಾವತಿಗೆ ಸಿಗಬೇಕಾದ ಗೌರವ, ಪ್ರಶಸ್ತಿಗಳು ಸಿಗದೇ ಇದ್ದರೂ ಮೂರು ದಿನಗಳ ಹಿಂದೆಯಷ್ಟೇ ಪ್ರತಿಷ್ಠಿತ ನಂದಿ ಅವಾರ್ಡ್ ಅವರಿಗೆ ಒಲಿದು ಬಂದಿತ್ತು. ಈಗಷ್ಟೇ ಶುರು ಮಾಡಿರುವ ನಂದಿ ಪ್ರಶಸ್ತಿ ಸಂಸ್ಥೆಯು ಲೀಲಾವತಿಗೆ ಲೆಜೆಂಡರಿ ಆಕ್ಟ್ರೆಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಈ ನಟಿಯ ಅನಾರೋಗ್ಯದ ಕಾರಣದಿಂದಾಗಿ ಪುತ್ರ ವಿನೋದ್ ರಾಜ್ ಆ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

ಇದನ್ನೂ ಓದಿ: ಲೀಲಾವತಿಯವರು ʼವಿನೋದ್‌ ರಾಜ್‌ ಮದುವೆʼ ಎಲ್ಲಿ ಮಾಡಿದ್ರು ಗೊತ್ತೆ..? ʼಆ ಕೊರಗು ಇನ್ನೂ ಇತ್ತುʼ

ನಂದಿ ಫಿಲ್ಮ್‌ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಇನ್ನೂ ಹಲವು ತಾರೆಯರು ಭಾಗಿಯಾಗಿದ್ದಾರೆ. ಜೊತೆಗೆ ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು

ಹಿರಿಯ ನಟಿ ಲೀಲಾವತಿಗೆ ಈಗಾಗಲೇ ಜೀವಮಾನ ಸಾಧನೆಗಾಗಿ ಕರ್ನಾಟಕ ಸರ್ಕಾರವು ಡಾ.ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಅಲ್ಲದೇ, ತುಮಕೂರು ವಿಶ್ವವಿದ್ಯಾಲಯವು ಸಹ ಈ ನಟಿಗೆ ಗೌರವ ಡಾಕ್ಟರೇಟ್ ನೀಡಿದೆ. ಸಿನಿಮಾ ನಟನೆಗಾಗಿ ಹತ್ತು ಹಲವು ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  
 

Read More