Home> Entertainment
Advertisement

VIDEO: ರಜನಿಕಾಂತ್-ಅಕ್ಷಯ ಕುಮಾರ್ ರ 2.0 ಚಿತ್ರದ ಟ್ರೈಲರ್ ಬಿಡುಗಡೆ

ತಲೈವಾ ರಜನಿಕಾಂತ್ ಮತ್ತು ಖಿಲಾಡಿ ಅಕ್ಷಯ್ ಕುಮಾರ್ ಅವರ '2.0' ನ ಅದ್ಭುತವಾದ ಟ್ರೈಲರ್ ಅಂತಿಮವಾಗಿ ಬಿಡುಗಡೆಯಾಗಿದೆ. ಆ ಮೂಲಕ ಎಲ್ಲರ  ಕಾಯುವಿಕೆ ಈಗ ಮುಗಿದಿದೆ!.

VIDEO: ರಜನಿಕಾಂತ್-ಅಕ್ಷಯ ಕುಮಾರ್ ರ 2.0 ಚಿತ್ರದ ಟ್ರೈಲರ್ ಬಿಡುಗಡೆ

ನವದೆಹಲಿ: ತಲೈವಾ ರಜನಿಕಾಂತ್ ಮತ್ತು ಖಿಲಾಡಿ ಅಕ್ಷಯ್ ಕುಮಾರ್ ಅವರ '2.0' ನ ಅದ್ಭುತವಾದ ಟ್ರೈಲರ್ ಅಂತಿಮವಾಗಿ ಬಿಡುಗಡೆಯಾಗಿದೆ. ಆ ಮೂಲಕ ಎಲ್ಲರ  ಕಾಯುವಿಕೆ ಈಗ ಮುಗಿದಿದೆ!.

ಸಂಪೂರ್ಣ VFX ಮೂಲಕ ನಿರ್ಮಿಸಿರುವ ಈ ಟ್ರೈಲರ್ ನಿಜಕ್ಕೂ ನೋಡುಗರನ್ನು ಮೋಡಿ ಮಾಡುತ್ತದೆ. ಇನ್ನೊಂದು ವಿಶೇಷವೆಂದರೆ ಇದೆ ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ರಜನಿಕಾಂತ್ ಹಾಗೂ ಅಕ್ಷಯ ಕುಮಾರ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ 3D ಯಲ್ಲಿ ನೇರವಾಗಿ ಚಿತ್ರೀಕರಿಸಿದ ಮೊದಲ ಭಾರತೀಯ ಚಿತ್ರ 2.0 ಆಗಿದ್ದು 'ಇದನ್ನು ಎಸ್. ಶಂಕರ್ ನಿರ್ದೇಶಿಸಿದ್ದಾರೆ.

ಈ ಹಿಂದೆ ರಜನಿಕಾಂತ್ ಮತ್ತು ಐಶ್ವರ್ಯಾ ರೈ ಬಚ್ಚನ್ ಕೂಡಿ ನಟಿಸಿದ್ದ  2010 ರ ತಮಿಳು ಚಿತ್ರ 'ಎಂಧಿರನ್' ಚಿತ್ರದ ಎರಡನೇ ಭಾಗವಾಗಿದೆ. ಈ ಚಿತ್ರದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆಮಿ ಜಾಕ್ಸನ್ರೊಂದಿಗೆ ಡಾ. ವಸೀಗರನ್ ಮತ್ತು ಚಿಟ್ಟಿಯವರು ಚಿತ್ರದ ತಾರಾಗಣದಲ್ಲಿದ್ದಾರೆ

ಈ ಚಿತ್ರವು ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಎ.ಆರ್ ರೆಹಮಾನ್ ಈ ಚಿತ್ರಕ್ಕಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ವರದಿಯೊಂದರ ಪ್ರಕಾರ ಇದುವರೆಗಿನ ಭಾರತದ ಅತಿ ದುಬಾರಿ ಚಿತ್ರ ಎಂದು ಹೇಳಲಾಗುತ್ತಿದೆ.ಇದೇ ತಿಂಗಳು 29 ಈ ಚಿತ್ರವೂ ತೆರೆಗೆ ಅಪ್ಪಳಿಸಲಿದೆ ಎಂದು ತಿಳಿದು ಬಂದಿದೆ.

 

Read More