Home> Culture
Advertisement

ಇಂದು 'ಭಾರತದ ನೈಟಿಂಗೇಲ್' ಸರೋಜಿನಿ ನಾಯ್ಡು ಜನ್ಮದಿನ: ನೀವು ತಿಳಿಯಬೇಕಾಗಿರುವ ಪ್ರಮುಖ ಸಂಗತಿಗಳು

'ಭಾರತದ ನೈಟಿಂಗೇಲ್' ಎಂದೇ ಖ್ಯಾತಿ ಪಡೆದ ಸರೋಜಿನಿ ನಾಯ್ಡು ಅವರ ಜನ್ಮದಿನ ಇಂದು.ಕವಿಯತ್ರಿಯಾಗಿ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿ ತಮ್ಮದೇ ಆದ ಹೆಗ್ಗುರುತನ್ನು ಉಳಿಸಿಕೊಂಡು ಬಂದವರು.ಇಂತಹ ಮಹಾನ್ ಮಹಿಳೆಯ 140ನೇ ಜನ್ಮ ದಿನಾಚಾರಣೆಯನ್ನು ಇಂದು ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಇಂತಹ ಸಂಧರ್ಭದಲ್ಲಿ ಇವರ ಕುರಿತ ಪ್ರಮುಖ 10ಸಂಗತಿಗಳನ್ನು ನಾವು ಸ್ಮರಿಸಬೇಕಾಗಿದೆ.

ಇಂದು 'ಭಾರತದ ನೈಟಿಂಗೇಲ್' ಸರೋಜಿನಿ ನಾಯ್ಡು ಜನ್ಮದಿನ: ನೀವು ತಿಳಿಯಬೇಕಾಗಿರುವ ಪ್ರಮುಖ ಸಂಗತಿಗಳು

ನವದೆಹಲಿ: 'ಭಾರತದ ನೈಟಿಂಗೇಲ್' ಎಂದೇ ಖ್ಯಾತಿ ಪಡೆದ ಸರೋಜಿನಿ ನಾಯ್ಡು ಅವರ ಜನ್ಮದಿನ ಇಂದು.ಕವಿಯತ್ರಿಯಾಗಿ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿ ತಮ್ಮದೇ ಆದ ಹೆಗ್ಗುರುತನ್ನು ಹೊಂದಿದವರು. ಇಂತಹ ಮಹಾನ್ ಮಹಿಳೆಯ 140ನೇ ಜನ್ಮ ದಿನಾಚಾರಣೆಯನ್ನು ಇಂದು ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಇಂತಹ ಸಂಧರ್ಭದಲ್ಲಿ ಇವರ ಕುರಿತ ಪ್ರಮುಖ 10 ಸಂಗತಿಗಳನ್ನು ನಾವು ಸ್ಮರಿಸಬೇಕಾಗಿದೆ.

-ಸರೋಜಿನಿ ನಾಯ್ಡು ಅವರು ಹೈದರಾಬಾದ್ ನಲ್ಲಿ ತತ್ವಜ್ಞಾನಿ ಅಘೋರ್ನಾಥ್ ಚಟ್ಟೋಪಾಧ್ಯಾಯ ಮತ್ತು ಬರಾದಾ ಸುಂದರಿ ದೇವಿ ದಂಪತಿಗಳಿಗೆ ಫೆಬ್ರುವರಿ 13,1879 ರಂದು ಜನಿಸಿದರು.

-ಅವರು ಅತ್ಯಂತ ಜಾಣ ವಿದ್ಯಾರ್ಥಿನಿ ಯಾಗಿದ್ದರು ಮತ್ತು ಮದ್ರಾಸ್ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಮುಂದೆ 16 ನೇ ವಯಸ್ಸಿನಲ್ಲಿ ಲಂಡನ್ ನ್ನಿನ  ಕಿಂಗ್ಸ್ ಕಾಲೇಜ್ ಮತ್ತು ಕೇಂಬ್ರಿಜ್ನ ಗಿರ್ಟನ್ ಕಾಲೇಜ್ನಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಇಂಗ್ಲೆಂಡಿಗೆ ತೆರಳಿದರು.

-19ನೇ ವಯಸ್ಸಿನಲ್ಲಿ ಸರೋಜಿನಿ ನಾಯ್ಡು ಡಾ. ಗೋವಿಂದರಾಜುಲು ನಾಯ್ಡು ಅವರನ್ನು ವಿವಾಹವಾದರು.

-1929 ರಲ್ಲಿ ಅವರು ದಕ್ಷಿಣ ಆಫ್ರಿಕಾದ ಪೂರ್ವ ಆಫ್ರಿಕನ್ ಇಂಡಿಯನ್ ಕಾಂಗ್ರೆಸ್ ನ ಅಧ್ಯಕ್ಷತೆ ವಹಿಸಿ ಭಾರತದಲ್ಲಿ ಹರಡಿದ್ದ ಪ್ಲೇಗ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಅವರು ಮಾಡಿದ ಕಾರ್ಯಕ್ಕೆ ಬ್ರಿಟಿಷ್ ಸರ್ಕಾರದ ಕೈಸರ್-ಐ-ಹಿಂದ್ ಪದಕವನ್ನು ನೀಡಿತು.

-ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಾಗರಿಕ ಅಸಹಕಾರ ಚಳವಳಿ ಹಾಗೂ 1942 ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸೆರೆವಾಸವನ್ನು ಅನುಭವಿಸಿದರು.

-ಸ್ವಾತಂತ್ರ್ಯಾನಂತರ ಅವರು 1947 ರಿಂದ 1949 ರವರೆಗೆ ಯುನೈಟೆಡ್ ಪ್ರಾಂತ್ಯದ ಪ್ರಥಮ ಗವರ್ನರ್ ಆಗಿ ಸೇವೆ ಸಲ್ಲಿಸಿದರಲ್ಲದೆ ಮತ್ತು ಭಾರತೀಯ ಸಂವಿಧಾನದ ಕರಡು ಪ್ರತಿ ರಚನೆಯಲ್ಲಿಯೂ ಕೂಡ ಮಹತ್ವದ ಪಾತ್ರವನ್ನು ವಹಿಸಿದರು. 

-ಸರೋಜಿನಿ ನಾಯ್ಡು ಅವರ ಬರವಣಿಗೆಯ ವೃತ್ತಿಜೀವನವು 13 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು. 1905 ರಲ್ಲಿ ಅವರ ಮೊದಲ ಕವಿತೆಗಳ ಸಂಗ್ರಹವಾದ ಗೋಲ್ಡನ್ ಥ್ರೆಶೋಲ್ಡ್ ಅನ್ನು ಪ್ರಕಟಿಸಲಾಯಿತು. ದ ಫೆದರ್ ಆಫ್ ದಿ ಡಾನ್ ಅನ್ನು 1961ರಲ್ಲಿ ಮರಣೋತ್ತರವಾಗಿ ಪ್ರಕಟಿಸಲಾಯಿತು.

-ಸಾಂಗ್ಸ್ ಆಫ್ ಲವ್, ಡೆತ್ ಅಂಡ್ ದಿ ಸ್ಪ್ರಿಂಗ್, ಡೆತ್ ಅಂಡ್ ದಿ ಸ್ಪ್ರಿಂಗ್, ಮುಹಮ್ಮದ್ ಜಿನ್ನಾ: ಅನ್ ಅಂಬಾಸಿಡರ್ ಆಫ್ ಯೂನಿಟಿ, ದಿ ಎಸ್ಪ್ರೆಡ್ರೆಡ್ ಫ್ಲೂಟ್: ಸಾಂಗ್ಸ್ ಆಫ್ ಇಂಡಿಯಾ, ಅಲಹಾಬಾದ್ : ಕಿಟಾಬಿಸ್ತಾನ್, ದಿ ಇಂಡಿಯನ್ ನೇವರ್ಸ್, ಯೂತ್ ಫೀಸ್ಟ್, ಮ್ಯಾಜಿಕ್ ಟ್ರೀ ಮತ್ತು ದಿ ವಿಝಾರ್ಡ್ ಮಾಸ್ಕ್.ಮುಂತಾದ ಪ್ರಮುಖ ಕೃತಿಗಳನ್ನು ಅವರು ರಚಿಸಿದರು.

-ಮಹಾತ್ಮಾ ಗಾಂಧಿಯವರ ಹೆಜ್ಜೆ ಗುರುತುಗಳಲ್ಲಿ ಸಾಗಿದ ಸರೋಜಿನಿ ನಾಯ್ಡು ಅನೇಕ ಬಾರಿ ಜೈಲುವಾಸವನ್ನು ಅನುಭವಿಸಿದರು. 

-ಸರೋಜಿನಿ ನಾಯ್ಡು ಉತ್ತರ ಪ್ರದೇಶದ ಲಕ್ನೋದಲ್ಲಿ ಮಾರ್ಚ್ 2, 1949 ರಂದು ಹೃದಯಾಘಾತದಿಂದ ನಿಧನರಾದರು.

Read More