Home> Culture
Advertisement

ನಿಮ್ಮ ಮನೆ ಸ್ವರ್ಗವಾಗಬೇಕಾದರೆ ಹಿರಿಯರು ಹೇಳಿದ ಈ ಕಿವಿಮಾತುಗಳನ್ನು ಪಾಲಿಸಿ..

Words of wisdom for senior: ಗಾದೆ ಮಾತುಗಳಂತೆ ಹಿರಿಯರು ಹೇಳಿದ ಮಾತುಗಳೂ ತುಂಬಾ ಅರ್ಥಗರ್ಭಿತವಾಗಿರುತ್ತವೆ. ಮನೆಯಲ್ಲಿ ಸದಾ ಸುಖ-ಸಂತೋಷ ತುಂಬಿ ತುಳುಕಬೇಕು ಅಂದರೆ ಹಿರಿಯರು ಹೇಳಿದ ಈ ಅನುಭವದ ಕಿವಿ ಮಾತುಗಳನ್ನು ಪಾಲಿಸಬೇಕು.  ​

ನಿಮ್ಮ ಮನೆ ಸ್ವರ್ಗವಾಗಬೇಕಾದರೆ ಹಿರಿಯರು ಹೇಳಿದ ಈ ಕಿವಿಮಾತುಗಳನ್ನು ಪಾಲಿಸಿ..

Words of Wisdom: ಒಂದು ಮನೆಯ ಸ್ವರ್ಗವಾಗಬೇಕಾದರೆ ಕೆಲವು ವಿಷಯಗಳನ್ನು ಯಾವಾಗಲೂ ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಹಿಂದಿನ ಕಾಲದಿಂದಲೂ ಪ್ರಚಲಿತದಲ್ಲಿರುವ ಹಿರಿಯರ ಅನುಭವದ ಕಿವಿ ಮಾತುಗಳನ್ನು ಪಾಲಿಸಿದರೆ ಸಾಕು ನಿಮ್ಮ ಮನೆಯೇ ಸ್ವರ್ಗವಾಗುತ್ತದೆ. ಗಾದೆ ಮಾತುಗಳಂತೆ ಹಿರಿಯರು ಹೇಳಿದ ಮಾತುಗಳೂ ತುಂಬಾ ಅರ್ಥಗರ್ಭಿತವಾಗಿರುತ್ತವೆ. ಮನೆಯಲ್ಲಿ ಸದಾ ಸುಖ-ಸಂತೋಷ ತುಂಬಿ ತುಳುಕಬೇಕು ಅಂದರೆ ಹಿರಿಯರು ಹೇಳಿದ ಈ ಅನುಭವದ ಕಿವಿ ಮಾತುಗಳನ್ನು ಪಾಲಿಸಬೇಕು.  

1) ಸೋಮವಾರ ತಲೆಗೆ ಯಾವುದೇ ಕಾರಣಕ್ಕೂ ಎಣ್ಣೆ ಹಚ್ಚಬಾರದು

2) ಒಂಟಿ ಕಾಲಲ್ಲಿ ಯಾವತ್ತೂ ನಿಲ್ಲಬಾರದು

3) ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗಬಾರದು

4) ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸಬಾರದು

5) ಇಡೀ ಕುಂಬಳಕಾಯಿಯನ್ನು ಮನೆಗೆ ತರಬಾರದು

6) ಮನೆಯಲ್ಲಿ ಉಗುರು ಕತ್ತರಿಸಬಾರದು

7) ಮಧ್ಯಾಹ್ನ ತುಳಸಿ ಗಿಡವನ್ನು ಕೊಯ್ಯಬಾರದು

8) ಹೊತ್ತು ಮುಳುಗಿದ ಮೇಲೆ ಕಸ ಗುಡಿಸಬಾರದು/ತಲೆ ಬಾಚಬಾರದು

9) ಉಪ್ಪು ಮೊಸರು ಸಾಲ ಕೊಡುವುದು ಬೇಡ

10) ಬಿಸಿ ಅನ್ನಕ್ಕೆ ಮೊಸರು ಹಾಕಬೇಡ

11) ಊಟ ಮಾಡುವಾಗ ಮದ್ಯೆ ಮೇಲೆ ಏಳಬೇಡ

12) ತಲೆ ಕೂದಲು ಒಲೆಗೆ ಹಾಕಬೇಡ

13) ಹೊಸಿಲನ್ನು ತುಳಿದು ದಾಟಬೇಡ.

14) ಮನೆಯಿಂದ ಹೊರಡುವಾಗ ಕಸ ಗುಡಿಸುವುದು ಬೇಡ

15) ಗೋಡೆ ಮೇಲೆ ಕಾಲಿಟ್ಟು ಮಲಗಬೇಡ

16) ರಾತ್ರಿ ಹೊತ್ತಲ್ಲಿ ಬಟ್ಟೆ  ಒಗೆಯಬೇಡ

17) ಒಡೆದ ಬಳೆ ದರಿಸಬೇಡ

18) ಮಲಗೆದ್ದ ಚಾಪೆ ಮಡಿಸದೆ ಬಿಡಬೇಡ

19) ಉಗುರು ಕಚ್ಚಲು ಬೇಡ

20) ಅಣ್ಣ-ತಮ್ಮ, ತಂದೆ-ಮಗ ಒಟ್ಟಿಗೆ ಒಂದೇ ದಿನ ಚೌರ ಮಾಡಿಸಬಾರದು

21) ಒಂಟಿ ಬಾಳೆಲೆ ತರಬೇಡ

22) ಊಟ ಮಾಡಿದ ಮೇಲೆ ಕೈ ಒಣಗಿಸಬೇಡ

23) ಮುಸಂಜೆ ಹೊತ್ತಲ್ಲಿ ಮಲಗಬೇಡ

24) ಕಾಲು ತೊಳೆಯುವಾಗ ಹಿಮ್ಮಡಿ ತೊಳೆಯುವುದು ಮರೆಯಬೇಡ

25) ಹೊಸಿಲ ಮೇಲೆ ಕೂರಬೇಡ

26) ತಿಂದ ತಕ್ಷಣ ಮಲಗಬೇಡ

ಇದನ್ನೂ ಓದಿ: ಗುರು ಉದಯದಿಂದ ಕುಬೇರ ಯೋಗ : ಈ ರಾಶಿಗಳಿಗೆ ಹಣದ ಸುರಿಮಳೆ, ವೃತ್ತಿಯಲ್ಲಿ ಪ್ರಗತಿ.. ಸಂಪತ್ತಿನ ಸುರಿಮಳೆ, ಪ್ರತಿ ಕೆಲಸದಲ್ಲೂ ಹಿಂಬಾಲಿಸುವುದು ಅದೃಷ್ಟ !

27) ಹಿರಿಯರ ಮುಂದೆ ಕಾಲು ಚಾಚಿ/ಕಾಲ ಮೇಲೆ ಕಾಲು ಹಾಕಿ ಕೂರಬೇಡ

28) ಕೈ ತೊಳೆದು ನೀರನ್ನು ಜಾಡಿಸಬೇಡಿ

29) ರಾತ್ರಿ ಊಟದ ತಟ್ಟೆ  ತೊಳೆಯದೇ ಬಿಡಬೇಡ

30) ಎಂಜಲ ಕೈಯಲ್ಲಿ ಊಟ ಬಡಿಸಬೇಡ

31) ಅನ್ನ, ಸಾರು, ಪಲ್ಯ ಮಾಡಿದ ಪಾತ್ರೆಗಳು, ಅದನ್ನು ಬಿಸಿ ಮಾಡಿದ ಪಾತ್ರೆಗಳಲ್ಲಿ ತಿನ್ನಬೇಡ

32) ಪಾತ್ರೆಗಳ ಮೇಲೆ ಎಂಜಲು ಕೈ ತೊಳಿಯಬೇಡ

33) ಮನೆಗೆ ಬಂದ ಹೆಣ್ಣುಮಕ್ಕಳಿಗೆ, ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಕಳುಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಿರಿ

34) ಹರಿದ ತೂತಾದ ಒಳ ಉಡುಪು, ಬನಿಯನ್, ಅಂಗಿ, ಪ್ಯಾಂಟು, ಚಪ್ಪಲಿ, ಶೂ, ಸಾಕ್ಸ್ ಧರಿಸಬೇಡಿ.. ನಿಮಗೆ ಎಷ್ಟು ಹಣವಿದ್ದರೂ ಸಾಕಾಗುವುದಿಲ್ಲ.. ಅನಾವಶ್ಯಕವಾಗಿ ಹಣ ಖರ್ಚಾಗುತ್ತದೆ

36) ಮನೆಯ ಒಳಗೆ ಚಪ್ಪಲಿ, ಶೂ ತರಬೇಡಿ. ಹೊರಗೆ ಇಡಿರಿ. ಅದು ಹೋದರೂ ನಿಮ್ಮ ಕರ್ಮ ಕಳೆಯುತ್ತದೆ

37) ದೇವಾಲಯ, ಮಠ, ಮಂದಿರಗಳಿಗೆ ಹೋದಾಗ ಅಕಸ್ಮಾತ್ ಚಪ್ಪಲಿ ಕಳೆದರೆ/ಬದಲಾದರೆ ನಿಮ್ಮ ಕರ್ಮ ಕಳೆಯಿತು ಎಂದು ತಿಳಿಯಿರಿ... ಬೇರೆಯವರದು  ಹಾಕಿಕೊಂಡು ಬಂದರೆ ನೀವೇ ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆತಂದಂತೆ...!

38) ಹಸು ಕರುಗಳಿಗೆ, ಪ್ರಾಣಿಗಳಿಗೆ ಹಳಸಿದ್ದು ಹಾಕಬೇಡಿ

39) ಹಸುಗಳಿಗೆ, ಪಶುಗಳಿಗೆ ಪಾತ್ರೆ ತೊಳೆದ ನೀರು, ಮುಸುರೆ ಹಾಕಬೇಡಿ

40) ಒಬ್ಬರು ಹಾಕಿಕೊಂಡ ಒಡವೆ, ಬಟ್ಟೆ ಇನ್ನೊಬ್ಬರು ಬಳಸಬೇಡಿ

41) ಪ್ರಯಾಣದಲ್ಲಿ ಅಪರಿಚಿತರಿಂದ ತಿಂಡಿ, ತಿನಿಸು, ಪಾನೀಯ ಸೇವಿಸಬೇಡಿ

42) ಹಾಲು - ಮೊಸರು, ಹಾಲು - ಅಡಿಗೆ ಎಣ್ಣೆ ಒಟ್ಟಿಗೆ ತರಬೇಡಿ

43) ಶನಿವಾರ ಉಪ್ಪು, ಎಣ್ಣೆ ತರಬೇಡಿ

44) ಅನಾವಶ್ಯಕವಾಗಿ ಹೆಚ್ಚು ಚಪ್ಪಲಿಗಳನ್ನು ಖರೀದಿಸಬೇಡಿ

45) ಮನೆಯಲ್ಲಿ ನಿಂತಿರುವ ಗೋಡೆ ಗಡಿಯಾರ, ಕೈ ಗಡಿಯಾರ, ಹೊಲಿಗೆ ಯಂತ್ರ, ಸೈಕಲ್, ಸ್ಕೂಟರ್ ಕೂಡಲೇ ದುರಸ್ತಿ ಮಾಡಿ.. ಇಲ್ಲವೇ ವಿಲೇವಾರಿ ಮಾಡಿ

47) ಭಗವಂತನಲ್ಲಿ ಏನೂ ಬೇಡಬೇಡಿ, ಬೇಡಿ ಬಿಕ್ಷುಕರಾಗ ಬೇಡಿ, ನಿಮಗೆ ಬೇಕಾದಾಗ ಸಿಕ್ಕೇ ಸಿಗುತ್ತದೆ 

48) ಅರ್ಹರಿಗೆ ದಾನ ಮಾಡಿ, ನಿಮ್ಮ ದಾನ ಗುಪ್ತವಾಗಿ ಇರಲಿ

49) ಮಠ ಮಂದಿರಗಳ ಸ್ವತ್ತು, ಹಣಕಾಸು, ಒಡವೆ ವಿಷವೆಂದು ತಿಳಿಯಿರಿ. ಅದನ್ನು ದುರುಪಯೋಗ ಮಾಡಿದರೆ ಶಿಕ್ಷೆ ನಿಮ್ಮ ಬೆನ್ನ ಹಿಂದೆ ಇರುವ ನೆರಳಿನಂತೆ ತಿಳಿಯಿರಿ

50) ಯಾರನ್ನೂ ಅಡಿಕೊಳ್ಳಬೇಡಿ, ನಿಮ್ಮನ್ನು ಹೊಗಳಿಕೊಳ್ಳಬೇಡಿ

51) ನೀವು, ನಿಮ್ಮ ಅಧಿಕಾರ ಶಾಶ್ವತವಲ್ಲ ಬೇರೆಯವರನ್ನು ಬೆಳೆಯಲು ಬಿಡಿ, ಅವರಿಗೆ ಗುರುವಾಗಿ

ಮೇಲಿನ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಬದಲಾವಣೆ ಕಾಣಿರಿ. ನಿಮ್ಮ ಮನೆಯೇ ಸ್ವರ್ಗವಾಗುತ್ತದೆ

ಇದನ್ನೂ ಓದಿ: ಶನಿ ವಕ್ರಿ ಯಿಂದ ಈ 3 ರಾಶಿಗಳಿಗೆ ಅದೃಷ್ಟ.. ಧನ ಸಂಪತ್ತಿನ ಸುರಿಮಳೆ, ಪ್ರತಿ ಕೆಲಸದಲ್ಲೂ ಜಯ, ಐಷಾರಾಮಿ ಜೀವನ.. ಬಡವನೂ ರಾಜನಾಗುವ ಕಾಲ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More