Home> Crime
Advertisement

TRS ನಾಯಕನ ಇನ್ನೋವಾ ಕಾರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ!

ಪಾರ್ಟಿಗಾಗಿ ಕ್ಲಬ್‌ಗೆ ಹೋಗಿದ್ದ 17 ವರ್ಷದ ಹುಡುಗಿಯ ಮೇಲೆ ಮೇ 28ರ ಶನಿವಾರದಂದು ಕಾರಿನೊಳಗೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ. 

TRS ನಾಯಕನ ಇನ್ನೋವಾ ಕಾರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ!

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್‍ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಟಿಆರ್‌ಎಸ್ ನಾಯಕನ ಇನ್ನೋವಾ ಕಾರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 2ನೇ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ. ಶುಕ್ರವಾರವಷ್ಟೇ ಸದುದ್ದೀನ್ ಮಲಿಕ್‌ ಎಂಬಾತನನ್ನು ಬಂಧಿಸಲಾಗಿತ್ತು. ಇದೀಗ ಬಂಧಿಸಲಾಗಿರುವ ಆರೋಪಿಯನ್ನು ಒಮರ್ ಖಾನ್ ಎಂದು ಗುರುತಿಸಲಾಗಿದೆ.

ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಐವರ ಪೈಕಿ ಮೂವರು ಅಪ್ರಾಪ್ತರು ಎಂದು ತಿಳಿದುಬಂದಿದೆ. ಪಾರ್ಟಿಗಾಗಿ ಕ್ಲಬ್‌ಗೆ ಹೋಗಿದ್ದ 17 ವರ್ಷದ ಹುಡುಗಿಯ ಮೇಲೆ ಮೇ 28ರ ಶನಿವಾರದಂದು ಕಾರಿನೊಳಗೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ. ಆರಂಭದಲ್ಲಿ ಈ ಅಪರಾಧ ಕೃತ್ಯವು ಕೆಂಪು ಮರ್ಸಿಡಿಸ್‌ ಕಾರಿನೊಳಗೆ ನಡೆದಿದೆ ಎಂದು ಹೇಳಲಾಗಿತ್ತು. ಆದರೆ, TRS ಶಾಸಕನಿಗೆ ಸೇರಿದ ಇನ್ನೋವಾದಲ್ಲಿ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ: ಈ ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ..!

ಪ್ರಕರಣ ಸಂಬಂಧ ಇಲ್ಲಿಯವರೆಗಿನ ಅಪ್‍ಡೇಟ್

1) ಮೇ 28ರಂದು 17 ವರ್ಷದ ಯುವತಿ ಹೈದರಾಬಾದ್‌ನ ಪಬ್‌ಗೆ ಹೋಗಿದ್ದಳು. ನಂತರ ಆಕೆಯನ್ನು ಮನೆಗೆ ಬಿಡುವುದಾಗಿ ಭರವಸೆ ನೀಡಿದ್ದ ಯುವಕನನ್ನು ಭೇಟಿಯಾಗಿದ್ದಳು. ಬಳಿಕ ಆಕೆ ಆತನ ಸ್ನೇಹಿತರೊಂದಿಗೆ ಕ್ಲಬ್ ತೊರೆದಿದ್ದಳು.

2) ನಂತರ ಜುಬಿಲಿ ಹಿಲ್ಸ್‌ನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಐವರು ಆರೋಪಿಗಳು ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

3) ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

4) ಐವರು ಆರೋಪಿಗಳ ಪೈಕಿ ಮೂವರು ಅಪ್ರಾಪ್ತರಾಗಿದ್ದಾರೆ. ಇನ್ನಿಬ್ಬರನ್ನು ಸದುದ್ದೀನ್ ಮಲಿಕ್ ಮತ್ತು ಒಮರ್ ಖಾನ್ ಎಂದು ಗುರುತಿಸಲಾಗಿದೆ.

5) ಪ್ರಥಮ ಆರೋಪಿ ಸದುದ್ದೀನ್ ಮಲಿಕ್ ನನ್ನು ಶುಕ್ರವಾರ ಬಂಧಿಸಲಾಗಿತ್ತು.

6) ಅಪರಾಧ ಕೃತ್ಯ ಎಸಗಿರುವ ಇನ್ನೋವಾ ಕಾರು ಸರ್ಕಾರಿ ಸಂಸ್ಥೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಟಿಆರ್‌ಎಸ್ ಮುಖಂಡನಿಗೆ ಸೇರಿದ್ದಾಗಿದೆ.

7) ಅಪ್ರಾಪ್ತನಾಗಿರುವ ಟಿಆರ್‌ಎಸ್ ಮುಖಂಡನ ಪುತ್ರನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.

8) ಮತ್ತೊಬ್ಬ ಅಪ್ರಾಪ್ತ ಆರೋಪಿ ಜಿಎಚ್‌ಎಂಸಿ ಕಾರ್ಪೊರೇಟರ್‌ನ ಮಗನಾಗಿದ್ದಾನೆ.

ಇದನ್ನೂ ಓದಿ: ಕಾನ್ಪುರ ಹಿಂಸಾಚಾರ: ಜೀ ನ್ಯೂಸ್‌ಗೆ ಲಭಿಸಿದೆ Exclusive ಸಿಸಿಟಿವಿ ಫೂಟೇಜ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More