Home> Crime
Advertisement

ರಾಮ ಪ್ರಾಣಪ್ರತಿಷ್ಟಾಪನೆ ದಿನ ಬಾಂಬ್ ಇಟ್ಟಿದ್ದ ಉಗ್ರರು : ಶ್ರೀರಾಮನ ದಯೆಯಿಂದ ಬ್ಲಾಸ್ಟ್ ಆಗದ ಬಾಂಬ್

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಯಾಗಿದೆ. ಎನ್ಐಎ ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಹೊರಬಿದ್ದಿದ್ದು, ಮಲ್ಲೇಶ್ವರದ ಬಿಜೆಪಿ ಕಚೇರಿ ಉಗ್ರರ ಟಾರ್ಗೆಟ್ ಆಗಿತ್ತು ಎಂಬ ಸ್ಪೋಟಕ ಸಂಗತಿ ಬಯಲಾಗಿತ್ತು. ಇದರ ಮುಂದುವರೆದ ಭಾಗ ಬೆಚ್ಚಿಬೀಳಿಸುವಂತಿದೆ.. 

ರಾಮ ಪ್ರಾಣಪ್ರತಿಷ್ಟಾಪನೆ ದಿನ ಬಾಂಬ್ ಇಟ್ಟಿದ್ದ ಉಗ್ರರು : ಶ್ರೀರಾಮನ ದಯೆಯಿಂದ ಬ್ಲಾಸ್ಟ್ ಆಗದ ಬಾಂಬ್

Rameshwaram cafe blast : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಸದ್ಯ ಎನ್ಐಎ ಅಧಿಕಾರಿಗಳು ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆದರೆ ಚಾರ್ಜ್ ಶೀಟ್ ನಲ್ಲಿರುವ ಉಲ್ಲೇಖವಾಗಿರುವ ಈ ಅಂಶ ಎಲ್ಲರನ್ನು ಬೆಚ್ಚಿಬೀಳಿಸಿದೆ‌. ಹಾಗಾದ್ರೆ ಅದೆನೂ ಅಂತೀರಾ ಈ ಸ್ಟೋರಿ ನೋಡಿ.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಯಾಗಿದೆ. ಎನ್ಐಎ ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಹೊರಬಿದ್ದಿದ್ದು, ಮಲ್ಲೇಶ್ವರದ ಬಿಜೆಪಿ ಕಚೇರಿ ಉಗ್ರರ ಟಾರ್ಗೆಟ್ ಆಗಿತ್ತು ಎಂಬ ಸ್ಪೋಟಕ ಸಂಗತಿ ಬಯಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಎನ್ಐಎ ಸಲ್ಲಿಸಿರುವ ಚಾರ್ಜ್ ಶೀಟಲ್ಲಿ ಮತ್ತೊಂದು ಭಯಾನಕ ಅಂಶ ಹೊರಬಿದ್ದಿದೆ. ಅದನ್ನು ನೀವೇನಾದ್ರೂ ಕೇಳಿದ್ರೆ ಒಂದು ಕ್ಷಣ ನೀವು ಗಾಬರಿಯಾಗದಂತೂ ಸುಳ್ಳಲ್ಲ. ಆ ಪ್ಲಾನ್ ಸರಿಯಾಗಿ  ಎಕ್ಸಿಕ್ಯೂಟ್ ಆಗಿದ್ರೆ ಎಷ್ಟು ಜನರ ಪ್ರಾಣ ಹೋಗುತ್ತಿತ್ತೋ ಹೇಳಲಾಗುತ್ತಿರಲಿಲ್ಲ.

ಇದನ್ನೂ ಓದಿ:ನಾಗಮಂಗಲ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಸಿಎಂ ಜೊತೆ ಚರ್ಚೆ

ಹೌದು ಉಗ್ರರು ಅಯೋಧ್ಯೆ ಪ್ರಾಣಪ್ರತಿಷ್ಟಾಪನೆ ದಿನ ಬಿಜೆಪಿ ಕಚೇರಿ ಬ್ಲಾಸ್ಟ್ ಗೆ ಪ್ಲಾನ್ ಮಾಡಿದ್ರು. ಮಲ್ಲೇಶ್ವರ ಬಿಜೆಪಿ ಕಚೇರಿ ಬಳಿ ಬಾಂಬ್ ಸಹ ಇಟ್ಟಿದ್ರಂತೆ. ಮಲ್ಲೇಶ್ವರಂ ಕಚೇರಿ ಬಳಿಯೇ ಬೈಕೊಂದರ ಮೇಲೆ ಹ್ಯಾಂಡ್ ಬ್ಯಾಗಲ್ಲಿ ಬಾಂಬ್ ಇಟ್ಟು ಅದರ ಮೇಲೆ ತರಕಾರಿಯನ್ನು ಇಟ್ಟಿದ್ದಾರೆ. ಈ ವಿಚಾರವನ್ನ ಎನ್ ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದೆ.

ಚೆನೈನಲ್ಲಿ ಬಾಂಬ್ ಸಿದ್ದಪಡಿಸಿ ತಂದಿಟ್ಟಿದ್ದ ಉಗ್ರರು ನೂರಾರು ಜನರ ಮಧ್ಯೆಯೆ ಪಾರ್ಕಿಂಗ್ ನಲ್ಲಿದ್ದ ಬೈಕ್ ನಲ್ಲಿ ತರಕಾರಿ ಬ್ಯಾಗ್ ನಲ್ಲಿ ಬಾಂಬ್ ಇಟ್ಟಿದ್ದರು. ಅದು ಸಹ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನ ಸ್ಪೋಟಿಸಲು ಸಂಚು ರೂಪಿಸಿದ್ದರು. ಈ ಪ್ಲಾನ್ ನ್ನು ಮಾಡಿಕೊಂಡಿದ್ದು ಮುಸಾವೀರ್ ಹುಸೇನ್ ಹಾಗೂ ಅಬ್ದುಲ್ ಮತೀನ್ ತಹಾ.

ಬಾಂಬ್ ಸ್ಫೋಟಕ್ಕೆ ಚೈನೀಸ್ ಬಲ್ಬ್ ಬಳಕೆ ಮಾಡಬೇಕಿತ್ತು. ಆದರೆ ಬೇರೆ ಬಲ್ಬ್ ಬಳಕೆ ಮಾಡಿದ ಕಾರಣ ಅದಕ್ಕೆ ಬೇಕಾದ ಪವರ್ ಸಪ್ಲೈ ಆಗದೆ  ಬಾಂಬ್ ಸ್ಪೋಟಗೊಂಡಿಲ್ಲ. ಬಾಂಬ್ ಇಡಬೇಕಾದ್ರೆ ಬಾಡಿವೋರ್ನ್ ಕ್ಯಾಮರದಲ್ಲಿ ಬಾಂಬ್ ಇಡುವ ದೃಶ್ಯ ಸೆರೆಹಿಡಿದು ವಿದೇಶಿ ಹ್ಯಾಂಡ್ಲರ್ ಗಳಿಗೆ ರವಾನಿಸಿದ್ದಾಗಿ ಮುಸಾವೀರ್ ಹಾಗೂ ಮತೀನ್ ತಾಹ ಹೇಳಿಕೊಂಡಿದ್ದಾರೆ‌.

ಇದನ್ನೂ ಓದಿ:ನಾಗಮಂಗಲ ಗಲಭೆ ಪ್ರಕರಣ: ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದ ಹೆಚ್‌ಡಿಕೆ

ಇನ್ನೂ ಬಾಂಬ್ ಇಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದ ಉಗ್ರರು ಬಾಂಬ್ ಸ್ಪೋಟಗೊಳ್ಳುತ್ತೆ ಎಷ್ಟು ಜನ ಸತ್ತಿರಬಹುದು ಎಂದು ಟಿವಿ ಕೂಡ ನೋಡಿದ್ದಾರೆ. ಆದರೆ ಯಾವುದೇ ಸ್ಪೋಟದ ಸುದ್ದಿ ಬರದ ಹಿನ್ನೆಲೆ ಅನುಮಾನ ಬಂದು ಬಳಿಕ ಮರುದಿನ ಬಾಂಬ್ ಇಟ್ಟ ಸ್ಥಳಕ್ಕೆ ಬಂದು ಬಾಂಬ್ ಹುಡುಕಾಡಿದ್ದಾರೆ.

ಆದರೆ ಬಾಂಬ್ ಇಟ್ಟ ಸ್ಥಳದಲ್ಲಿ ಬೈಕೂ ಇರ್ಲಿಲ್ಲ. ಬಾಂಬ್ ಸಹ ಇರ್ಲಿಲ್ಲ. ಹಾಗಾದ್ರೆ ಶಂಕಿತರು ಇಟ್ಟ ಬಾಂಬ್ ಏನಾಯ್ತು, ಎಲ್ಲೋಯ್ತು.ಯಾರು ತೆಗೆದುಕೊಂಡು ಹೋದ್ರು ಅನ್ನೋದು ಇಲ್ಲಿಯವರೆಗೂ ನಿಗೂಢವಾಗಿದೆ. ಒಟ್ಟಾರೆ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿಕೊಂಡಿದ್ದ ಉಗ್ರರ ಪ್ಲಾನ್ ಠುಸ್ ಆಗಿತ್ತು. ಆದರೆ ಅಂದುಕೊಂಡತೆ ಬಾಂಬ್ ಬ್ಲಾಸ್ಟ್ ಆಗಿದ್ರೆ ಎಷ್ಟು ಪ್ರಾಣಗಳು ಹೋಗುತ್ತಿದ್ದವೋ ಆ ಶ್ರೀರಾಮನೇ ಬಲ್ಲ‌‌.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More