Home> Crime
Advertisement

Cyrus Accident : ಸೈರಸ್ ಮಿಸ್ತ್ರಿ ಕಾರಿನ ತನಿಖೆಗೆ ಹಾಂಕಾಂಗ್‌ನಿಂದ ಬಂದ ಮರ್ಸಿಡಿಸ್ ಕಂಪನಿಯ ತಜ್ಞರು 

ಪ್ರಸ್ತುತ, ಅಪಘಾತಕ್ಕೀಡಾದ ಈ ಕಾರನ್ನು ಥಾಣೆಯಲ್ಲಿರುವ ಮರ್ಸಿಡಿಸ್ ಬೆಂಜ್ ಘಟಕದಲ್ಲಿ ನಿಲ್ಲಿಸಲಾಗಿದೆ.

Cyrus Accident : ಸೈರಸ್ ಮಿಸ್ತ್ರಿ ಕಾರಿನ ತನಿಖೆಗೆ ಹಾಂಕಾಂಗ್‌ನಿಂದ ಬಂದ ಮರ್ಸಿಡಿಸ್ ಕಂಪನಿಯ ತಜ್ಞರು 

Cyrus Mistry Car Accident : ಟಾಟಾ ಗ್ರೂಪ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಮೃತರಾಗಿದ್ದು. ಈ ಕಾರಿನ ಬಗ್ಗೆ ತನಿಖೆ ನಡೆಸಲು ಮರ್ಸಿಡಿಸ್ ಬೆಂಜ್ ಕಂಪನಿಯ ತಂಡ ಹಾಂಕಾಂಗ್‌ನಿಂದ ಮುಂಬೈಗೆ ಬಂದಿದೆ. ತಂಡ ಸೋಮವಾರ ಭಾರತ ತಲುಪಿದ್ದು, ಮಂಗಳವಾರದಿಂದ ಕಾರಿನ ತನಿಖೆ ಆರಂಭವಾಗಿದೆ. ಪ್ರಸ್ತುತ, ಅಪಘಾತಕ್ಕೀಡಾದ ಈ ಕಾರನ್ನು ಥಾಣೆಯಲ್ಲಿರುವ ಮರ್ಸಿಡಿಸ್ ಬೆಂಜ್ ಘಟಕದಲ್ಲಿ ನಿಲ್ಲಿಸಲಾಗಿದೆ.

ಸೆಪ್ಟೆಂಬರ್ 4 ರಂದು ಸಂಭವಿಸಿದ ರಸ್ತೆ ಅಪಘಾತ 

ಸೆಪ್ಟೆಂಬರ್ 4 ರಂದು ಸೈರಸ್ ಮಿಸ್ತ್ರಿ ಅವರು ಅಹಮದಾಬಾದ್‌ನಿಂದ ಮುಂಬೈಗೆ ಬರುವಾಗ ಅವರಬೆಂಜ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಈ ಅಪಘಾತ ಅಹಮದಾಬಾದ್-ಮುಂಬೈ ಹೆದ್ದಾರಿಯಲ್ಲಿ ಸಂಭವಿಸಿತು. ಈ  ಅಪಘಾತದಲ್ಲಿ ಮಿಸ್ತ್ರಿ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡರು. ಮತ್ತಿಬ್ಬರು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ : Mukul Rohatgi : ಎರಡನೇ ಭಾರಿಗೆ 'ಅಟಾರ್ನಿ ಜನರಲ್' ಆಗಿ ಮುಕುಲ್ ರೋಹಟಗಿ ಆಯ್ಕೆ!

ತನಿಖೆ ನಂತರ ಪೊಲೀಸರಿಗೆ ವರದಿ

ಹಾಂಕಾಂಗ್‌ನಿಂದ ಬಂದ ಕಾರು ಕಂಪನಿಯ ತಂಡ ಮುಂಬೈ ತಲುಪಿದೆ ಎಂದು ಪಾಲ್ಘರ್ ಎಸ್‌ಪಿ ಬಾಳಾಸಾಹೇಬ್ ಪಾಟೀಲ್ ಹೇಳಿದ್ದಾರೆ. ಈ ತಂಡದಲ್ಲಿ ಮೂವರು ಸದಸ್ಯರಿದ್ದಾರೆ. ಈ ತಂಡ ಇಂದು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕಾರಿನ ತನಿಖೆ ಆರಂಭಿಸಿದೆ. ತಂಡದ ಸದಸ್ಯರು ತಾಂತ್ರಿಕ ತಜ್ಞರು ಎಂದು ಹೇಳಿದರು. ಈ ತಂಡ ಮರ್ಸಿಡಿಸ್ ಬೆಂಜ್ ಕಂಪನಿಗೆ ವರದಿ ಸಲ್ಲಿಸಲಿದೆ. ಅಪಘಾತಕ್ಕೆ ಸಂಬಂಧಿಸಿದ ಅಂತಿಮ ವರದಿಯನ್ನು ಕಾರ್ ಕಂಪನಿ ಪೊಲೀಸರಿಗೆ ಸಲ್ಲಿಸಲಿದೆ.

ಈ ಅಪಘಾತ ಹೇಗೆ ಸಂಭವಿಸಿತು?

ಮುಂಬೈಗೆ ಸುಮಾರು 100 ಕಿ.ಮೀ ಮೊದಲು ಸೈರಸ್ ಮಿಸ್ತ್ರಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ವೇಳೆ ಅನಾಹಿತಾ ಪಾಂಡೋಲೆ ಕಾರು ಚಲಾಯಿಸುತ್ತಿದ್ದರು. ಜೊತೆಯಲ್ಲಿ ಅವರ ಗಂಡ ಕುಳಿತಿದ್ದರು. ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಹಿಂದಿನ ಸೀಟಿನಲ್ಲಿ ಇದ್ದರು. ಹಿಂದಿನ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸಿರಲಿಲ್ಲ. ಈ ಅಪಘಾತದಲ್ಲಿ ಅನಾಹಿತಾ ಮತ್ತು ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರೂ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ 5 ಸೆಕೆಂಡ್‌ಗೂ ಮುನ್ನ ಅನಾಹಿತಾ ಬ್ರೇಕ್‌ ಹಾಕಿದ್ದರು ಎಂದು ಕಾರು ಕಂಪನಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ, ಪ್ರಾಥಮಿಕ ತನಿಖೆಯಲ್ಲಿ ಚಾಲಕನ ತಪ್ಪು ಎಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ : West Bengal : ದೀದಿ ಸರ್ಕಾರದ ವಿರುದ್ಧ ಪ್ರತಿಭಟ : ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವೆ ಫೈಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More