Home> Crime
Advertisement

ಶ್ರೀಮಂತರ ಮನೆಯೇ ಇವರ ಟಾರ್ಗೆಟ್- ಚಾಲಕಿ ಕಳ್ಳರ ಗ್ಯಾಂಗ್ ಅಂದರ್

ದೊಡ್ಡ ಕಂಪನಿಗಳಲ್ಲಿ, ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುವುದಾಗಿ ಹೇಳಿ  ಶ್ರೀಮಂತರ ಮನೆಯಲ್ಲಿ ಬಾಡಿಗೆಗೆ ಮನೆ ಪಡೆಯುತ್ತಿದ್ದ ಖತರ್ನಾಕ್ ಪದವೀಧರ ಕಳ್ಳರ ಗ್ಯಾಂಗ್, ಅವರ ಮನೆಗೆ ಖನ್ನಾ ಹಾಕಿ ಮನೆ ದೋಚುತ್ತಿದ್ದ ಪ್ರಕರಣ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದಿಂದ ಬಂದು ಕಳ್ಳತನ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದಿರುವ ಇವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.  

ಶ್ರೀಮಂತರ ಮನೆಯೇ ಇವರ ಟಾರ್ಗೆಟ್- ಚಾಲಕಿ ಕಳ್ಳರ ಗ್ಯಾಂಗ್ ಅಂದರ್

ರಾಯಚೂರು: ವಿದ್ಯೆ ಕಲಿತು ಬೇರೆಯವರಿಗೆ ದಾರಿ ದೀಪವಾಗಬೇಕಿದ್ದವರು ಇಂದು ಪೊಲೀಸರ ಅತಿಥಿಯಾಗಿದ್ದಾರೆ. ಇವರೆಲ್ಲ ಪದವಿ ಮುಗಿಸಿರುವ ಪದವೀಧರರು. ಆದರೆ, ಇವರು ಮಾಡುವ ನೀಚ ಕೆಲಸ ಮಾತ್ರ ಯಾವ ಐನಾತಿ ಕಳ್ಳರಿಗೂ ಕಡಿಮೆಯಿಲ್ಲ. ಶ್ರೀಮಂತರ ಮನೆಯೇ ಇವರ ಟಾರ್ಗೆಟ್!

ದೊಡ್ಡ ಕಂಪನಿಗಳಲ್ಲಿ, ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುವುದಾಗಿ ಹೇಳಿ  ಶ್ರೀಮಂತರ ಮನೆಯಲ್ಲಿ ಬಾಡಿಗೆಗೆ ಮನೆ ಪಡೆಯುತ್ತಿದ್ದ ಖತರ್ನಾಕ್ ಪದವೀಧರ ಕಳ್ಳರ ಗ್ಯಾಂಗ್, ಅವರ ಮನೆಗೆ ಖನ್ನಾ ಹಾಕಿ ಮನೆ ದೋಚುತ್ತಿದ್ದ ಪ್ರಕರಣ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಬೆಳಕಿಗೆ ಬಂದಿದೆ. ಆಂಧ್ರ ಪ್ರದೇಶದಿಂದ ಬಂದು ಕಳ್ಳತನ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದಿರುವ ಇವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.  

ಇದನ್ನೂ ಓದಿ- Crime News: ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ..!

ಹೌದು, ಪದವೀಧರೆ ಆಗಿರುವ ಈ ಮಹಿಳೆಯ ಹೆಸರು ಸುಜಾತಾ ಅಲಿಯಾಸ್  ನಿಹಾರಿಕ. ರಾಜ್ಯದ ಸಿಂಧನೂರು , ಮಾನ್ವಿ, ರಾಯಚೂರು ಭಾಗಗಳಲ್ಲಿ ಮನೆ ಬಾಡಿಗೆ ಪಡೆದು ವೇಶ್ಯಾವಟಿಕೆ ಮಾಡುತ್ತಿದ್ದ ಸುಜಾತಾ ಮನೆ ಬಾಡಿಗೆದಾರರಿಗೆ ಮಾತ್ರ ನಾನು ಬ್ಯಾಂಕ್ ನಲ್ಲಿ ಕೆಲಸ ಮಾಡಿತ್ತಿದ್ದೇನೆ ಎಂದು ಹೇಳಿ ಎಲ್ಲಾ ಶ್ರೀಮಂತರಿಗೆ ಟಾರ್ಗೆಟ್ ಮಾಡುತ್ತಿದ್ದಳು. ತಾನು ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುವುದಾಗಿ ಹೇಳಿ  ಬಾಡಿಗೆಗೆ ಮನೆ ಹುಡುಕುತ್ತಿದ್ದ ಈಕೆ ನಂತರ, ಮನೆ ಮಾಲೀಕರ ಜೊತೆಯಲ್ಲಿಯೇ  ಲವ್ವಿಡವ್ವಿ ಆಡುತ್ತ ಮನೆ ಮಾಲಿಕರನ್ನೇ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ನಿಧಾನವಾಗಿ, ಅವರ ಮನೆಯಲ್ಲಿರುವ ಚಿನ್ನಾಭರಣ, ಹಣ ಎಲ್ಲದರ ಮಾಹಿತಿ ಪಡೆದು ಬಳಿಕ ಆಂಧ್ರದಿಂದ ಖತರ್ನಾಕ್ ಕಳ್ಳರನ್ನು ಕರೆಸಿ ಮನೆಯ ಮ್ಯಾಪಿಂಗ್ ಹಾಕಿ ಕಳ್ಳತನ ಮಾಡಿಸುತ್ತಿದ್ದ ಲೇಡಿ ಕಿಂಗ್ ಪಿನ್ ತನ್ನ ಗ್ಯಾಂಗ್ ಜೊತೆಗೆ ಸಿಂಧನೂರು ಉಪವಿಭಾಗ ಪೋಲಿಸರಿಗೆ  ಅಥಿತಿಗಳಾಗಿದ್ದಾಳೆ. 

ಇದನ್ನೂ ಓದಿ- Shocking: ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್ & ಗರ್ಭ ನಿರೋಧಕ ಮಾತ್ರೆಗಳು ಪತ್ತೆ!

22 ರಾಜ್ಯಗಳಲ್ಲಿ ಇದೇ ಕೆಲಸ ಮಾಡುತ್ತಿದ್ದ ಈ ಗ್ಯಾಂಗ್ ಮೇಲೆ ಆಂಧ್ರದಲ್ಲಿ 25 ಕೇಸ್ ಗಳು ದಾಖಲಾಗಿವೆ. ಈ ಗ್ಯಾಂಗ್ ಹಿಡಿಯಲು ಸತತ 45 ‌ದಿನ‌ ಕಾರ್ಯಚರಣೆ ನಡೆಸಿದ್ದ ಕರ್ನಾಟಕ ಪೊಲೀಸ್ ಕಡೆಗೂ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 25 ಲಕ್ಷ ಮೌಲ್ಯದ 520 ಗ್ರಾಂ ಚಿನ್ನಾಭರಣ, 1ಲಕ್ಷ‌ ಹಣ‌ ಹಾಗೂ ಎರಡು ಕಾರು‌ಗಳನ್ನು ಜಪ್ತಿ ಮಾಡಲಾಗಿದೆ.  
ಒಟ್ಟಾರೆ ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ ಭಾಗದ ಸಾರ್ವಜನಿಕರ ನಿದ್ದೆ ಕೆಡಿಸಿದ್ದ ಈ ದರೋಡೆಕೋರರ ಗ್ಯಾಂಗ್ ಹೆಡೆಮುರಿ ಕಟ್ಟಿರುವುದರಿಂದಾಗಿ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪೋಲಿಸರ ಕೆಲಸಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More