Home> Crime
Advertisement

ಲಿಂಕ್ ಕಳಿಸಿ ಒಂದೇ ದಿನ ಹತ್ತಾರು ಖಾತೆಗಳಿಗೆ ಕನ್ನ ಹಾಕಿದ ಸೈಬರ್ ಖದೀಮರು

Cyber Crime: ದೂರುದಾರರು ತಮ್ಮ ಮೊಬೈಲಿಗೆ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಕ್ಲೈಮ್ ಎಂದು ವಂಚಕರು ಕಳಿಸಿದ್ದ ಲಿಂಕ್‌ ಕ್ಲಿಕ್ ಮಾಡಿದ್ದರು. ಆಗ ಅಧಿಕೃತ ವೆಬ್‌ಸೈಟ್‌ನ್ನೇ ಹೋಲುವ ನಕಲಿ ವೆಬ್‌ಸೈಟ್ ತೆರೆದಿದೆ. ನೋಡನೋಡುತ್ತಿದ್ದಂತೆ ಖಾತೆಯಲ್ಲಿದ್ದ 1.93 ಲಕ್ಷ ಕಡಿತವಾಗಿದೆ. 

ಲಿಂಕ್ ಕಳಿಸಿ ಒಂದೇ ದಿನ ಹತ್ತಾರು ಖಾತೆಗಳಿಗೆ ಕನ್ನ ಹಾಕಿದ ಸೈಬರ್ ಖದೀಮರು

ಬೆಂಗಳೂರು : ಇದು ಡಿಜಿಟಲ್ ಯುಗ. ಸದ್ಯ  ಆನ್‌ಲೈನ್‌ ವಂಚನೆ ಬಗ್ಗೆ ಪೊಲೀಸರು ಎಷ್ಟೇ ಅರಿವು ಮೂಡಿಸಿದರೂ ಸೈಬರ್ ವಂಚನೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಕ್ಲೈಮ್ ಎಂದು ಬ್ಯಾಂಕಿನ ಹೆಸರಿನಲ್ಲಿ ಲಿಂಕ್ ಕಳಿಸಿದ್ದ ಸೈಬರ್ ಖದೀಮರು 70 ವರ್ಷದ ನಿವೃತ್ತ ಇಂಜಿನಿಯರ್ ಒಬ್ಬರ ಖಾತೆಗೆ ಕನ್ನ ಹಾಕಿದ್ದಾರೆ.  ಈ ಬಗ್ಗೆ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.

ದೂರುದಾರರು ತಮ್ಮ ಮೊಬೈಲಿಗೆ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಕ್ಲೈಮ್ ಎಂದು ವಂಚಕರು ಕಳಿಸಿದ್ದ ಲಿಂಕ್‌ ಕ್ಲಿಕ್ ಮಾಡಿದ್ದರು. ಆಗ ಅಧಿಕೃತ ವೆಬ್‌ಸೈಟ್‌ನ್ನೇ ಹೋಲುವ ನಕಲಿ ವೆಬ್‌ಸೈಟ್ ತೆರೆದಿದೆ. ನೋಡನೋಡುತ್ತಿದ್ದಂತೆ ಖಾತೆಯಲ್ಲಿದ್ದ 1.93 ಲಕ್ಷ ಕಡಿತವಾಗಿದೆ. 

ಇದನ್ನೂ ಓದಿ- ಸಿಲಿಕಾನ್‌ಸಿಟಿಯಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ.. 150 ದಿನಗಳಲ್ಲಿ 3500ಕ್ಕಿಂತ ಹೆಚ್ಚು ಕೇಸ್‌ ದಾಖಲು

ವಿಚಿತ್ರವೆಂದರೆ ನಿನ್ನೆ ಒಂದೇ ದಿನ ಆಗ್ನೇಯ ವಿಭಾಗದ ಅನೇಕ ಜನರ ನಂಬರಿಗೆ ಇದೇ ರೀತಿ ಕೆವೈಸಿ ಅಪ್ಡೇಟ್, ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಕ್ಲೈಮ್ ಹೆಸರಿನಲ್ಲಿ ಇದೇ ರೀತಿಯ ಮೆಸೇಜ್ ಗಳು ಬಂದಿದ್ದು ಹಲವಾರು ಖಾತೆಗಳಿಗೆ ಸೈಬರ್ ವಂಚಕರು ಕನ್ನ ಹಾಕಿದ್ದಾರೆ. 

ಇದನ್ನೂ ಓದಿ- ಖಾಸಗಿ ಲೋನ್ ಆಪ್‌ಗಳನ್ನ ಬಳಸುವವರೇ ಎಚ್ಚರ.! ಹಣದ ಆಸೆಗೆ ಹೋದೀತು ಮಾನ!!

ಸಿಇಎನ್ ಠಾಣೆಗೆ ಸಾಲು ಸಾಲು ದೂರುಗಳು ಬಂದಿದ್ದು ನೋಯ್ಡಾ ಮೂಲದ ಪೇಟಿಎಂ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನ ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಸದ್ಯ ತನಿಖೆ ಮುಂದುವರೆಸಲಾಗಿದೆ ಎಂದು  ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More