Home> Crime
Advertisement

Chariot Tragedy: ರಥ ಹರಿದು ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಪಾರ್ವಾಂತಾಭ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಕಂದೇಗಾಲ ಗ್ರಾಮದ ಆಕಾಶ್ ಅಲಿಯಾಸ್‌ ಸರ್ಪ (27) ಮೃತ ದುರ್ದೈವಿ. ಸ್ವಾಮಿ ಹಾಗೂ ಕೊಡಸೋಗೆ ಗ್ರಾಮದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡವರು. 

Chariot Tragedy: ರಥ ಹರಿದು ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಚಾಮರಾಜನಗರ: ತೇರು ಎಳೆಯುವಾಗ  ನೂಕು ನುಗ್ಗಲು ಉಂಟಾದ ಪರಿಣಾಮ ರಥದ ಚಕ್ರದಡಿಗೆ ಬಿದ್ದು ಓರ್ವ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದ ಸಮೀಪದ ಪಾರ್ವತಿ ಬೆಟ್ಟದಲ್ಲಿ ನಡೆದಿದೆ.

ಇದನ್ನು ಓದಿ: ಮಗಳ ಭವಿಷ್ಯಕ್ಕಾಗಿ 30 ವರ್ಷಗಳ ಕಾಲ ಪುರುಷನಾಗಿ ಬದಲಾದ ತಾಯಿ!

ಪಾರ್ವಾಂತಾಭ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಕಂದೇಗಾಲ ಗ್ರಾಮದ ಆಕಾಶ್ ಅಲಿಯಾಸ್‌ ಸರ್ಪ (27) ಮೃತ ದುರ್ದೈವಿ. ಸ್ವಾಮಿ ಹಾಗೂ ಕೊಡಸೋಗೆ ಗ್ರಾಮದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡವರು. 

ಇಂದು ನಡೆದ ಜಾತ್ರೆಯಲ್ಲಿ ರಥವು 100 ಮೀ ಚಲಿಸುತ್ತಿದ್ದಾಗಲೇ ನೂಕು ನುಗ್ಗಲು ಉಂಟಾಗಿದೆ. ಪರಿಣಾಮ ಮೂವರು ರಥದ ಚಕ್ರದಡಿಗೆ ಬಿದ್ದಿದ್ದಾರೆ. ತಕ್ಷಣವೇ ಮೂವರನ್ನು ಆಸ್ಪತ್ರೆಗೆ ರವಾನಿಸಲಾದರೂ ಓರ್ವ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಗಾಯಗೊಂಡವರು ಕಾಲು, ತೊಡೆ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ‌. ಇನ್ನು ಪೊಲೀಸ್ ಬಂದೋಬಸ್ತ್ ವಿಫಲವಾಗಿರುವ ಆರೋಪವೂ ಕೇಳಿಬಂದಿದೆ.

ಇದನ್ನು ಓದಿ: OTT ವೇದಿಕೆಗಳ ಚಂದಾದಾರಿಕೆಯ ಮೇಲೆ ಬಂಪರ್ ರಿಯಾಯ್ತಿ ಸಿಗುತ್ತಿದೆ, ಬೇಗನೆ ಲಾಭ ನಿಮ್ಮದಾಗಿಸಿಕೊಳ್ಳಿ

ಇತ್ತೀಚಿಗೆ ತಮಿಳುನಾಡಿನ ತಂಜಾವೂರಿನಲ್ಲಿ ರಥೋತ್ಸವದ ಸಂದರ್ಭದಲ್ಲಿ ಅವಘಡ ಉಂಟಾಗಿತ್ತು. ರಥಕ್ಕೆ ಹೈವೋಲ್ಟೇಜ್‌ ವಿದ್ಯುತ್‌ ಸ್ಪರ್ಶಿಸಿದ ಪರಿಣಾಮ ಮೂವರು ಮಕ್ಕಳು ಸೇರಿ 11 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿದ ತಂಜಾವೂರಿನಲ್ಲಿ ನಡೆದಿತ್ತು. ಇನ್ನು ಘಟನೆಯಲ್ಲಿ 12 ಮಂದಿಗೆ ಗಾಯಗಳಾಗಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More