Home> Crime
Advertisement

ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಂಬಿಸಿ ನಿವೃತ್ತ ಸೈನಿಕರೊಬ್ಬರಿಗೆ 11.90 ಲಕ್ಷ ವಂಚನೆ

ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಂಬಿಸಿ ನಿವೃತ್ತ ಸೈನಿಕರೊಬ್ಬರಿಗೆ 11.90 ಲಕ್ಷ ವಂಚಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯಲ್ಲಿ ನಡೆದಿದೆ.ಇಂಗಳಹಳ್ಳಿಯ ವಿರೂಪಾಕ್ಷಪ್ಪ ಮಜ್ಜಿಗೌಡರ ಎನ್ನುವವರು ಮೋಸ ಹೋಗಿರುವ ವ್ಯಕ್ತಿ ಎಂದು ತಿಳಿದುಬಂದಿದೆ.

ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಂಬಿಸಿ ನಿವೃತ್ತ ಸೈನಿಕರೊಬ್ಬರಿಗೆ 11.90 ಲಕ್ಷ ವಂಚನೆ

ಹುಬ್ಬಳ್ಳಿ: ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಂಬಿಸಿ ನಿವೃತ್ತ ಸೈನಿಕರೊಬ್ಬರಿಗೆ 11.90 ಲಕ್ಷ ವಂಚಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯಲ್ಲಿ ನಡೆದಿದೆ.ಇಂಗಳಹಳ್ಳಿಯ ವಿರೂಪಾಕ್ಷಪ್ಪ ಮಜ್ಜಿಗೌಡರ ಎನ್ನುವವರು ಮೋಸ ಹೋಗಿರುವ ವ್ಯಕ್ತಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ : Diwali 2022 : ದೀಪಾವಳಿ ಸಂದರ್ಭದಲ್ಲಿ ಶರೀರ ನಿರ್ವಿಷಗೊಳಿಸಿ ತೂಕ ಇಳಿಸಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ

ವಿರೂಪಾಕ್ಷಪ್ಪ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದಾಗ ಲಿಂಗಸೂರು ತಾಲೂಕಿನ ನಾಗರಾಳ ಗ್ರಾಮದ ಹೊನ್ನಪ್ಪ ಮೇಟಿ ಮತ್ತು ವಿಜಯಪುರ ಜಿಲ್ಲೆಯ ವಿವೇಕಾನಂದ ನಗರದ ಈರಪ್ಪ ಬೂದಿಹಾಳ ಎಂಬುವವರು ಪರಿಚಯವಾಗಿದ್ದರು.ಇವರಿಬ್ಬರು ಸೇರಿ ವಿರೂಪಾಕ್ಷಪ್ಪ ಅವರಿಗೆ ಪಿಎಸ್‌ಐ ನೌಕರಿ ಕೊಡಿಸುವುದಾಗಿ ನಂಬಿಸಿದ್ದರು, ಇದರ ಭಾಗವಾಗಿ ವಿರೂಪಾಕ್ಷಪ್ಪ ಈ ಇಬ್ಬರಿಗೆ 11.90 ಲಕ್ಷ ರೂ ನೀಡಿದ್ದರು.

ಇದನ್ನೂ ಓದಿ : Diwali 2022 : ದೀಪಾವಳಿ ಸಂದರ್ಭದಲ್ಲಿ ಶರೀರ ನಿರ್ವಿಷಗೊಳಿಸಿ ತೂಕ ಇಳಿಸಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ

ಆದರೆ ಈ ಇಬ್ಬರು ಉದ್ಯೋಗ ನೀಡದೆ 85 ಸಾವಿರ ಮರಳಿಸಿದ್ದು, ಉಳಿದ ಹಣ ನೀಡದೆ ವಂಚಿಸಿದ್ದಾರೆ ಎನ್ನಲಾಗಿದೆ.ಈಗ ವಿರೂಪಾಕ್ಷಪ್ಪ ಎನ್ನುವವರಿಂದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More