Home> Career
Advertisement

Trending Story: ಭಾರತದ ಈ ಗ್ರಾಮಕ್ಕೆ 'ಐಐಟಿ ಗ್ರಾಮ' ಎನ್ನಲಾಗುತ್ತದೆ, ಕಾರಣ ಇಲ್ಲಿದೆ

Viral Story Of IIT Village: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪರೀಕ್ಷೆ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಐಐಟಿಗೆ ಆಯ್ಕೆಯಾಗುವುದು ದೇಶದ ಬಹುತೇಕ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ ಬಿಹಾರದಲ್ಲಿ ಗ್ರಾಮವೊಂದಿದ್ದು, ಆ ಗ್ರಾಮದ ಪ್ರತಿಯೊಂದು ಮನೆಯ ಒಂದು ಮಗುವಾದರೂ ಐಐಟಿಗೆ ಆಯ್ಕೆಯಾಗುತ್ತದೆ ಎನ್ನಲಾಗುತ್ತದೆ.
 

Trending Story: ಭಾರತದ ಈ ಗ್ರಾಮಕ್ಕೆ 'ಐಐಟಿ ಗ್ರಾಮ' ಎನ್ನಲಾಗುತ್ತದೆ, ಕಾರಣ ಇಲ್ಲಿದೆ

IIT Village of Bihar: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಓದುವ ಕನಸು ದೇಶದ ಪ್ರತಿಯೊಬ್ಬ ವಿದ್ಯಾರ್ಥಿ ಹೊಂದಿರುತ್ತಾನೆ. ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಐಐಟಿನಲ್ಲಿ ಓದಿ ಹೊರಬಂದ ಬಳಿಕ ಉದ್ಯೋಗ ಸಿಗುವುದು ಬಹುತೇಕ ಖಚಿತವೆಂದು ಪರಿಗಣಿಸಲಾಗುತ್ತದೆ. ಆದರೆ ಇದರ ಪರೀಕ್ಷೆಯೂ ಕೂಡ ತುಂಬಾ ಕಠಿಣವಾಗಿರುತ್ತದೆ, ಈ ಪರೀಕ್ಷೆಯಲ್ಲಿ ಎಲ್ಲರು ಉತ್ತೀರ್ಣರಾಗಲು ಸಾಕಾಗುವುದಿಲ್ಲ. ಮಕ್ಕಳು ಇದಕ್ಕಾಗಿ ಸಾಕಷ್ಟು ಶ್ರಮಿಸುತ್ತಾರೆ ಮತ್ತು ಮುಂಚಿತವಾಗಿ ಸಿದ್ಧತೆಯಲ್ಲಿ ತೊಡಗುತ್ತಾರೆ. ಆಗ ಮಾತ್ರ ಅವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ. ಆದರೆ ಭಾರತದ ಬಿಹಾರದಲ್ಲಿರುವ ಒಂದು ಗ್ರಾಮದಲ್ಲಿ ಪ್ರತಿ ಮನೆಯ ಒಂದು ಮಗುವಾದರು ಐಐಟಿಗೆ ಆಯ್ಕೆಯಾಗುತ್ತದೆ. ವರದಿಗಳ ಪ್ರಕಾರ, ಇದು 1996 ರಿಂದ ನಡೆಯುತ್ತಿದೆ.

ಇದನ್ನೂ ಓದಿ-CTET 2022 Date : ಸಿಟೆಟ್ 2022 ರ ಶಾರ್ಟ್ ನೋಟಿಫಿಕೆಶನ್ ಬಿಡುಗಡೆ ಮಾಡಿದ ಸಿಬಿಎಸ್ಇ, ಪರೀಕ್ಷೆ ಯಾವಾಗ? ಇಲ್ಲಿದೆ ಮಾಹಿತಿ

ಯಾವುದೇ ತರಬೇತಿ ಇಲ್ಲದೆಯೇ ಸಿದ್ಧತೆ ನಡೆಸುತ್ತಾರೆ
ಬಿಹಾರದ ಗಯಾ ಜಿಲ್ಲೆಯ ಪಟವಾಟೋಲಿ ಗ್ರಾಮ ಐಐಟಿಯನ್ಸ್ ಗ್ರಾಮ ಎಂದೇ ಖ್ಯಾತವಾಗಿದೆ. ಈ ಗ್ರಾಮದಿಂದ ಪ್ರತಿವರ್ಷ ಒಂದು ಡಜನ್ ವಿದ್ಯಾರ್ಥಿಗಳು ಐಐಟಿ ಪರೀಕ್ಷೆಯನ್ನು ಪಾಸು ಮಾಡುತ್ತಾರೆ ಹಾಗೂ ಅವರಿಗೆ ದೇಶದ ಪ್ರತಿಷ್ಠಿತ ಸ್ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಅವಕಾಶ ಸಿಗುತ್ತದೆ. ವರದಿಗಳ ಪ್ರಕಾರ ಈ ವಿದ್ಯಾರ್ಥಿಗಳು ಯಾವುದೇ ರೀತಿಯ ತರಬೇತಿಯನ್ನು ಪಡೆಯದೆಯೇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ-CBSE 12th Result 2022 : ಸಿಬಿಎಸ್ಇ 12ನೇ ತರಗತಿಗೂ ಮುನ್ನ ಸರ್ಕಾರದ ಮಹತ್ವದ ಘೋಷಣೆ, ವಿದ್ಯಾರ್ಥಿಗಳಿಗೆ ಭಾರಿ ಲಾಭ

ಐಐಟಿ ಸಿನಿಯರ್ ಗಳು ಸಹಾಯ ಮಾಡುತ್ತಾರೆ
ಗ್ರಾಮದಲ್ಲಿರುವ ಒಂದು ಲೈಬ್ರರಿ ಸಹಾಯದಿಂದ ವಿದ್ಯಾರ್ಥಿಗಳು ಐಐಟಿಗೆ ಸಿದ್ಧತೆ ನಡೆಸುತ್ತಾರೆ. ಗ್ರಾಮದಲ್ಲಿರುವ ಯುವಕರೇ ಆ ಲೈಬ್ರರಿಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ ಮತ್ತು ಅಧ್ಯಯನಕ್ಕೆ ಯಾವುದೇ ರೀತಿಯ ಶುಲ್ಕ ಪಡೆಯಲಾಗುವುದಿಲ್ಲ. ಈಗಾಗಲೇ ಐಐಟಿಯಲ್ಲಿ ಅಧ್ಯಯನ ನಡೆಸುತ್ತಿರುವವ ಮತ್ತು ಐಐಟಿ ತೇರ್ಗಡೆ ಹೊಂದಿರುವ ಗ್ರಾಮದ ವಿದ್ಯಾರ್ಥಿಗಳೇ ಆನ್ಲೈನ್ ಮೂಲಕ ಹೊಸ ಅಕಾಂಕ್ಷಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ. ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಹಾಯ ಸಿಗುವ ಕಾರಣ ಗ್ರಾಮದ ಆಕಾಂಕ್ಷಿಗಳಿಗೆ ಐಐಟಿ ಪರೀಕ್ಷೆ ಪಾಸು ಮಾಡುವುದು ಸುಲಭವಾಗಿಸುತ್ತದೆ ಎನ್ನಲಾಗುತ್ತದೆ. ಪ್ರತಿ ವರ್ಷ ಈ ಗ್ರಾಮದ ವಿದ್ಯಾರ್ಥಿಗಳು ಐಐಟಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಮತ್ತು ಹಲವರು ಆಯ್ಕೆ ಕೂಡ ಆಗುತ್ತಾರೆ. ಹೀಗಾಗಿ ಈ ಗ್ರಾಮವನ್ನು 'ಐಐಟಿ ಗ್ರಾಮ' ಎಂದೂ ಕೂಡ ಕರೆಯಲಾಗುತ್ತದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More